Home
ಸುದ್ದಿಜಾಲ

Cyber Fraud: 9 ತಿಂಗಳಲ್ಲಿ 107.21 ಕೋಟಿ ವಂಚನೆ.. ಕಳ್ಳರು ಬಲೆಗೆ ಬಿದ್ದಿದ್ದೇ ರೋಚಕ.. ಖಾಕಿ ಬೀಸಿದ್ದ ಬಲೆ ಇದು!

ಎಚ್ಚರ.. ಎಚ್ಚರ..! 9 ತಿಂಗಳಲ್ಲಿ ಬರೋಬ್ಬರಿ 107.21 ಕೋಟಿ ರೂ. ಸೈಬರ್ ವಂಚನೆ. ಪೊಲೀಸರು ಕಳ್ಳರನ್ನು ಬಲೆಗೆ ಬೀಳಿಸುವ ವಿಧಾನ ಇದು! ಹೌದು, ದಿನೇ ದಿನೆ ಹೆಚ್ಚುತ್ತಿವೆ ಸೈಬರ್ ವಂಚನೆ (Cyber Frauds) ಪ್ರಕರಣಗಳು ಹೆಚ್ಚುತ್ತಲೇ ಇವೆ. ವರದಿಯ ಪ್ರಕಾರ, ಈ ಸೈಬರ್ ವಂಚನೆಯು ವಿಶೇಷವಾಗಿ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿಗಳ ಮೂಲಕ ವಂಚನೆ ನಡೆಯುತ್ತಿದೆ. ಪ್ರತಿ ವರ್ಷ 1 ಲಕ್ಷ ಸೈಬರ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸೈಬರ್ ವಂಚನೆಯನ್ನು ತಡೆಯಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ? ಎಂಬ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ದೇಶದಲ್ಲಿ ಡಿಜಿಟಲ್ ಪಾವತಿಗಳ ಪ್ರವೃತ್ತಿ ವೇಗವಾಗಿ ಬೆಳೆಯುತ್ತಿದೆ. ಇದರಿಂದ ಸೈಬರ್ ವಂಚನೆ ಪ್ರಕರಣಗಳು ಸಹ ಹೆಚ್ಚುತ್ತಿವೆ. ಸೈಬರ್ ವಂಚನೆ ಪ್ರಕರಣಗಳು ಮತ್ತು ಅದರಿಂದ ಉಂಟಾದ ನಷ್ಟಗಳ ಕುರಿತು ಲೋಕಸಭೆಯಲ್ಲಿ ವರದಿಯನ್ನು ಬಹಿರಂಗಪಡಿಸಲಾಗಿದೆ. ಲೋಕಸಭೆಯಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ (FY25) ಮೊದಲ ಮೂರು ತ್ರೈಮಾಸಿಕಗಳಲ್ಲಿ 13,384 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಿಂದ ಜನರು ಸುಮಾರು 107.21 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ.

Cyber Fraud: 107.21 ಕೋಟಿ ವಂಚನೆ.. ಕಳ್ಳರು ಬಲೆಗೆ ಬಿದ್ದಿದ್ದೇ ರೋಚಕ; ಹೇಗೆ?

1 ಲಕ್ಷ ಸೈಬರ್ ವಂಚನೆ ಪ್ರಕರಣಗಳು ದಾಖಲು

ಪ್ರಸ್ತುತ, ಆರ್‌ಬಿಐ (ಭಾರತೀಯ ರಿಸರ್ವ್ ಬ್ಯಾಂಕ್) ಸೈಬರ್ ವಂಚನೆಗೆ ಸಂಬಂಧಿಸಿದ ಎಲ್ಲಾ ಡೇಟಾವನ್ನು ಹೊಂದಿಲ್ಲ. ಆದರೂ, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಅಂಕಿಅಂಶಗಳು ಸುಮಾರು 1 ಲಕ್ಷಕ್ಕೂ ಹೆಚ್ಚು ವಂಚನೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ, ಈ ಸೈಬರ್ ವಂಚನೆಯು ವಿಶೇಷವಾಗಿ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿಗಳ ಮೂಲಕ ನಡೆಯುತ್ತಿವೆ. ಈ ಸಂಬಂಧಿಸಿದ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ.

ಬರೋಬ್ಬರಿ 18.46 ಕೋಟಿ ರೂ. ವಂಚನೆ

ವರದಿಯ ಪ್ರಕಾರ, KYC ಇಲ್ಲದ ಖಾತೆಗಳು, ವಂಚನೆಗೆ ಬಳಸುವ ಬ್ಯಾಂಕ್ ಖಾತೆಗಳು (ಹಣದ ಮ್ಯೂಲ್ಸ್) ಮತ್ತು ಫಿಶಿಂಗ್ ದಾಳಿಗಳು ವೇಗವಾಗಿ ಹೆಚ್ಚಿವೆ. ಇದರಿಂದಾಗಿ, 2024 ರ ಆರ್ಥಿಕ ವರ್ಷದಲ್ಲಿ ಸೈಬರ್ ವಂಚನೆಯಿಂದ ಉಂಟಾದ ನಷ್ಟವು 177.05 ಕೋಟಿ ರೂ.ಗಳನ್ನು ತಲುಪಿದೆ. ಆದರೆ, 2015 ರಲ್ಲಿ ಕೇವಲ 845 ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ಒಟ್ಟು 18.46 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಹೇಳಲಾಗಿದೆ.

ಈ ಸುದ್ದಿ ಓದಿದ್ದೀರಾ?: ವಾವ್..! ಇನ್ಮುಂದೆ ನಂಬರ್ ಸೇವ್ ಮಾಡಂಗಿಲ್ಲ.. ನೇರವಾಗಿ Whatsapp Call ಮಾಡಬಹುದು.. ಈ ಟ್ರಿಕ್ ಗೊತ್ತಾ?

ಸೈಬರ್ ವಂಚನೆ ತಡೆಗೆ ಸರ್ಕಾರ ತೆಗೆದುಕೊಂಡ ಕ್ರಮಗಳಿವು!

* ಸೈಬರ್ ವಂಚನೆಯನ್ನು ನಿಗ್ರಹಿಸಲು ಆರ್‌ಬಿಐ (RBI) 2024ರ ಜುಲೈ ತಿಂಗಳಲ್ಲಿ 'ವಂಚನೆ ಅಪಾಯ ನಿರ್ವಹಣೆ' ಮಾರ್ಗಸೂಚಿಯನ್ನು ಜಾರಿಗೆ ತಂದಿತು. ಅದಕ್ಕೆ ಹಲವು ಕಠಿಣ ನಿಯಮಗಳಿವೆ.

* ಅನುಮಾನಾಸ್ಪದ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಲು 'EWS' (ಮುಂಚಿನ ಎಚ್ಚರಿಕೆ ವ್ಯವಸ್ಥೆ) ಅನ್ನು ಪರಿಚಯಿಸಲಾಗಿದೆ.

* ಕೆವೈಸಿ (KYC) ನಿಯಮಗಳನ್ನು ಪಾಲಿಸದ ಹೆಚ್ಚಿನ ಅಪಾಯದ ಖಾತೆಗಳ ಕಟ್ಟುನಿಟ್ಟಿನ ಪರಿಶೀಲನೆ.

* ವಂಚನೆ ಮಾದರಿಗಳನ್ನು ವಿಶ್ಲೇಷಿಸಲು Market Intelligence Unit (ಮಾರುಕಟ್ಟೆ ಗುಪ್ತಚರ ಘಟಕ) ಸ್ಥಾಪನೆ ಮಾಡಲಾಗಿದೆ.

ಆನ್‌ಲೈನ್ ವಂಚನೆಗಳಿಂದ ರಕ್ಷಿಸಿಕೊಳ್ಳುವುದು ಹೇಗೆ?

* ಆನ್‌ಲೈನ್ ವಂಚನೆಗಳನ್ನು ತಪ್ಪಿಸಲು ಜಾಗರೂಕರಾಗಿರುವುದು ಮುಖ್ಯ. ಈ ಘಟನೆಗಳನ್ನು ತಪ್ಪಿಸಲು, ನಿಮ್ಮ ಮೊಬೈಲ್ ಮತ್ತು ಕಂಪ್ಯೂಟರ್ ಅನ್ನು ಯಾವಾಗಲೂ ಅಪ್ಡೇಟ್ ಮಾಡಿ.

* ಸೋಶಿಯಲ್ ಮೀಡಿಯಾದಿಂದ ಬ್ಯಾಂಕ್ ಖಾತೆಗಳವರೆಗೆ, ಯಾವಾಗಲೂ ಸ್ಟ್ರಾಂಗ್ ಪಾಸ್‌ವರ್ಡ್‌ಗಳನ್ನು ಬಳಸಸಬೇಕು. ಸುಲಭವಾದ ಪಾಸ್‌ವರ್ಡ್‌ಗಳನ್ನು ಎಂದಿಗೂ ಇಡಬೇಡಿ. ಬ್ರೌಸರ್‌ನಲ್ಲಿ ಪಾಸ್‌ವರ್ಡ್‌ಗಳನ್ನು ಸೇವ್ ಮಾಡುವುದನ್ನು ತಪ್ಪಿಸಿ.

Best Mobiles in India

English summary
Cyber Frauds: Cyber Fraud Government Suffered Loss Of Rs 107 Crore: Lok Sabha Report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+