Home
ಸುದ್ದಿಜಾಲ

ಟಿವಿ ಆಪರೇಟರ್ ಗಳಿಂದ ದೀರ್ಘಾವಧಿ ಪ್ಲಾನ್ ಗಳ ಘೋಷಣೆ- ನಿಮ್ಮ ಮನೆಗೆ ಯಾವುದು ಸೂಕ್ತ ನೋಡಿ!

By Gizbot Bureau

ಡಿಟಿಹೆಚ್, ಕೇಬಲ್ ಮತ್ತು ಟಿವಿ ಉದ್ಯಮದಲ್ಲಿ ಟ್ರಾಯ್ ನ ಸುಂಕದ ಆಡಳಿತವು ಅಂತಿಮವಾಗಿ ಎಲ್ಲಾ ಕಡೆಗಳಲ್ಲಿ ಜಾರಿಗೆ ಬರುವ ಹಂತದಲ್ಲಿದೆ. ಆದರೆ ಈ ಅವಧಿಯಲ್ಲಿ ಡಿಟಿಹೆಚ್ ಚಂದಾದಾರು ಮತ್ತು ಅದರ ಕಂಪೆನಿಗಳು ಸಾಕಷ್ಟು ಹಿನ್ನಡೆಯನ್ನು ಅನುಭವಿಸಬೇಕಾಯಿತು. ಚಂದಾದಾರರು ಕೆಲವು ಚಾನಲ್ ಗಳನ್ನು ಕಳೆದುಕೊಳ್ಳುವ ಚಿಂತೆಯಾದರೆ ಕಂಪೆನಿಗಳದ್ದು ಇನ್ನೊಂದು ರೀತಿಯ ಸಮಸ್ಯೆ.

ಟಿವಿ ಆಪರೇಟರ್ ಗಳಿಂದ ದೀರ್ಘಾವಧಿ ಪ್ಲಾನ್ ಗಳ ಘೋಷಣೆ


ಇಂತಹ ದೊಡ್ಡ ಬದಲಾವಣೆಯು ಇಂಡಸ್ಟ್ರಿಯಲ್ಲಿ ಆಗುತ್ತಿರುವ ಸಂದರ್ಬದಲ್ಲಿ ಕೆಲವು ಚಂದಾದಾರರು ಒಂದು ಡಿಟಿಹೆಚ್ ಪ್ರೊವೈಡರ್ ಗಳಿಂದ ಮತ್ತೊಂದಕ್ಕೆ ಬದಲಾಗಿದ್ದೂ ಕೂಡ ಇದೆ. ಕೆಲವು ಗ್ರಾಹಕರು ಡಿಟಿಹೆಚ್ ಪ್ರೊವೈಡರ್ ಗಳನ್ನು ಬದಲಾಯಿಸುವುದಕ್ಕೆ ಇದೇ ಸರಿಯಾದ ಸಮಯ ಎಂದು ಅಂದುಕೊಂಡರು.

ಇದೀಗ ಬದಲಾಗಿರುವ ಹೊಸ ಟ್ರಾಯ್ ನಿಯಮಾವಳಿಗಳ ಪ್ರಕಾರ ಎಲ್ಲಾ ಡಿಟಿಹೆಚ್ ಆಪರೇಟರ್ ಗಳು ದೀರ್ಘಾವಧಿ ಆಫರ್ ಗಳನ್ನು ಗ್ರಾಹಕರಿಗೆ ನೀಡುವುದಕ್ಕೆ ಪ್ರಾರಂಭಿಸಿದ್ದಾರೆ ಮತ್ತು ಹಲವು ಟಿವಿ ಚಂದಾದಾರಿಕೆಯ ಬೆಲೆ ಮತ್ತು ಹಲವು ಆಫರ್ ಗಳನ್ನು ನೀಡುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಡಿಶ್ ಟಿವಿ, ಡಿ2ಹೆಚ್ ಮತ್ತು ಟಾಟಾ ಸ್ಕೈ ಗಳು ಈಗಾಗಲೇ ತಮ್ಮ ಬೆಸ್ಟ್ ಆಫರ್ ಗಳನ್ನು ಪರಿಚಯಿಸಿದ್ದಾರೆ. ಸದ್ಯ ದೀರ್ಘಾವಧಿ ಪ್ಲಾನ್ ಗಳ ಬಗ್ಗೆ ಮಾತುಕತೆಗಳು ನಡೆಯುತ್ತಿದೆ. ಹಾಗಾಗಿ ನಾವಿಲ್ಲಿ ಬೇರೆಬೇರೆ ಆಪರೇಟರ್ ಗಳು ನೀಡುತ್ತಿರುವ ಈ ಪ್ಲಾನ್ ಬಗ್ಗೆ ವಿವರಣೆ ನೀಡಿದ್ದೇವೆ.

ಡಿ2ಹೆಚ್ ನಲ್ಲಿ 5 ತಿಂಗಳವರೆಗೆ ಉಚಿತ ರೀಚಾರ್ಜ್

ಡಿ2ಹೆಚ್ ನಲ್ಲಿ 5 ತಿಂಗಳವರೆಗೆ ಉಚಿತ ರೀಚಾರ್ಜ್

ದೀರ್ಘಾವಧಿ ಪ್ಲಾನ್ ಗಳ ಬಗ್ಗೆ ಹೇಳುವಾಗ ಡಿ2ಹೆಚ್ ನ್ನು ಮೀರಿಸುವಂತ ಪ್ಲಾನ್ ನ್ನು ಇತರೆ ಯಾವ ಆಪರೇಟರ್ ಗಳೂ ಕೂಡ ನೀಡಿಲ್ಲ.ಡಿ2ಹೆಚ್ ನಲ್ಲಿ ಹೆಚ್ಚುವರಿ 7 ದಿನಗಳ ಚಂದಾದಾರಿಕೆಯು 3 ತಿಂಗಳ ಪ್ಲಾನ್ ನ ಚಂದಾದಾರಿಕೆಯ ಅಡಿಯಲ್ಲಿ ಲಭ್ಯವಾಗುತ್ತದೆ. 6 ತಿಂಗಳ ಪ್ಲಾನಿನ ಚಂದಾದಾರಿಕೆಯ ಅಡಿಯಲ್ಲಿ 15 ದಿನಗಳ ಹೆಚ್ಚುವರಿ ಚಂದಾದಾರಿಕೆ ಸಿಗುತ್ತದೆ. 11 ತಿಂಗಳ ಚಂದಾದಾರಿಕೆಯ ಪ್ಲಾನ್ ಖರೀದಿಸಿದರೆ 30 ದಿನಗಳ ಹೆಚ್ಚುವರಿ ಚಂದಾದಾರಿಕೆ ಲಭ್ಯವಾಗುತ್ತದೆ.

22 ತಿಂಗಳ ಚಂದಾದಾರಿಕೆಯನ್ನು ಖರೀದಿ ಮಾಡಿದರೆ 60 ದಿನಗಳ ಹೆಚ್ಚುವರಿ ಚಂದಾದಾರಿಕೆ ಸಿಗುತ್ತದೆ. 33 ತಿಂಗಳ ಚಂದಾದಾರಿಕೆಗೆ 90 ದಿನಗಳು, 44 ತಿಂಗಳ ದೀರ್ಘಾವಧಿ ಚಂದಾದಾರಿಕೆಗೆ 120 ದಿನಗಳು, ಕೊನೆಯದಾಗಿ 55 ತಿಂಗಳ ಡಿ2ಹೆಚ್ ಸೇವೆಗಳ ಚಂದಾದಾರಿಕೆ ತೆಗೆದುಕೊಂಡರೆ 150 ದಿನಗಳು ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ.

30 ದಿನಗಳವರೆಗಿನ ಉಚಿತ ರೀಚಾರ್ಜ್ ಆಫರ್ ಮಾಡುತ್ತಿರುವ ಡಿಶ್ ಟಿವಿ

30 ದಿನಗಳವರೆಗಿನ ಉಚಿತ ರೀಚಾರ್ಜ್ ಆಫರ್ ಮಾಡುತ್ತಿರುವ ಡಿಶ್ ಟಿವಿ

ಡಿಶ್ ಟಿವಿ ಕೂಡ ಡಿ2ಹೆಚ್ ನಂತೆಯೇ ಆಫರ್ ನ್ನು ನೀಡುತ್ತಿದೆ. ಆದರೆ ಇದು ದೀರ್ಘಾವಧಿ ರೀಚಾರ್ಜ್ ಗಳಲ್ಲಿ ನೀಡುವ ಉಚಿತ ದಿನಗಳ ಸಂಖ್ಯೆಯಲ್ಲಿ ಮೇಲಿನವು ಇಲ್ಲವಾಗಿದೆ. ಚಂದಾದಾರರಿಗೆ 3 ತಿಂಗಳಿಗೆ 7 ದಿನಗಳು, 6 ತಿಂಗಳಿಗೆ 15 ದಿನಗಳು ಮತ್ತು 11 ತಿಂಗಳಿಗೆ 30 ದಿನಗಳ ಚಂದಾದಾರಿಕೆ ಉಚಿತವಾಗಿರುತ್ತದೆ.

30 ದಿನಗಳವರೆಗಿನ ಉಚಿತ ರೀಚಾರ್ಜ್ ದಿನಗಳನ್ನು ಆಫರ್ ಮಾಡುತ್ತಿರುವ ಟಾಟಾ ಸ್ಕೈ

30 ದಿನಗಳವರೆಗಿನ ಉಚಿತ ರೀಚಾರ್ಜ್ ದಿನಗಳನ್ನು ಆಫರ್ ಮಾಡುತ್ತಿರುವ ಟಾಟಾ ಸ್ಕೈ

ಟಾಟಾ ಸ್ಕೈ ಮೇಲಿನ ಎರಡು ಆಪರೇಟರ್ ಗಳಿಗಿಂತ ಸ್ವಲ್ಪ ಭಿನ್ನವಾಗಿರುವ ಆಫರ್ ನ್ನು ನೀಡುತ್ತದೆ. ಬೇರೆಬೇರೆ ಚಂದಾದಾರಿಕೆಯ ಅವಧಿಯಲ್ಲಿ ಹೆಚ್ಚು ಆಯ್ಕೆಗಳನ್ನು ಟಾಟಾಸ್ಕೈ ನೀಡುತ್ತದೆ. ಫ್ಲೆಕ್ಸಿ ಆನ್ಯುವಲ್ ಪ್ಲಾನ್ ನ ಅಡಿಯಲ್ಲಿ ವಾರ್ಷಿಕ ಚಂದಾದಾರಿಕೆ ಖರೀದಿಸಿದರೆ 30 ದಿನಗಳ ಹೆಚ್ಚುವರಿ ಚಂದಾದಾರಿಕೆ ಟಾಟಾ ಸ್ಕೈ ನಲ್ಲಿ ಸಿಗುತ್ತದೆ. ಇದನ್ನು ಪಡೆದುಕೊಳ್ಳುವುದಕ್ಕೆ ಗ್ರಾಹಕರು ಮೊದಲಿಗೆ ತಮ್ಮ ಟಾಟಾ ಸ್ಕ್ರೈ ಅಕೌಂಟ್ ನಲ್ಲಿ ಮೊತ್ತವನ್ನು ಡೆಪಾಸಿಟ್ ಮಾಡಬೇಕಾಗುತ್ತದೆ. ಚಂದಾದಾರಿಕೆಯ ವಾರ್ಷಿಕ ಅಂತ್ಯದಲ್ಲಿ ಗ್ರಾಹಕರಿಗೆ ಹೆಚ್ಚುವರಿ ಕ್ರೆಡಿಟ್ ಆಗಿರುವ ದಿನಗಳು ಲಭ್ಯವಾಗುತ್ತದೆ.

Best Mobiles in India

English summary
D2h, Tata Sky and Dish TV Long-Term DTH Plans Offering Up to Five Months of Free Service
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+