ಸ್ಮಾರ್ಟ್‌ಫೋನಿನಲ್ಲಿ 'ಐಪಿಎಲ್‌' ಲೈವ್‌ ಮ್ಯಾಚ್ ವೀಕ್ಷಿಸುವುದು ಹೇಗೆ ಗೊತ್ತಾ.!

|

ಕ್ರಿಕೆಟ್‌ ಆಟಕ್ಕೆ ವಿಶ್ವದಾದ್ಯಂತ ಅಭಿಮಾನಿಗಳ ದೊಡ್ಡ ದಂಡೆ ಇದ್ದು, ಅಂದರಲ್ಲಿಯೂ ಭಾರತೀಯರಿಗೆ ಕ್ರಿಕೆಟ್‌ ಅಂದರೇ ಪಂಚಪ್ರಾಣ. ಇಂಡಿಯನ್ ಪ್ರೀಮಿಯರ್‌ ಲೀಗ್ ಪಂದ್ಯಾವಳಿಗಳು ಕ್ರಿಕೆಟ್‌ ಅಭಿಮಾನಿಗಳಿಗೆ ಮತ್ತಷ್ಟು ಕ್ರೇಜ್ ಹುಟ್ಟಿಸಿದ್ದು, ಇದೀಗ 2019ರ ಐಪಿಎಲ್‌ ಪಂದ್ಯಾವಳಿಗಳು ಆರಂಭವಾಗಿವೆ. ನಿಮ್ಮ ಜೊತೆಗೆ ಸ್ಮಾರ್ಟ್‌ಫೋನ್‌ ಇದ್ದರೇ ಸಾಕು ಐಪಿಎಲ್‌ನ ಯಾವ ಮ್ಯಾಚು ಮಿಸ್‌ ಮಾಡದೇ ವೀಕ್ಷಿಸಬಹುದು.

ಸ್ಮಾರ್ಟ್‌ಫೋನಿನಲ್ಲಿ 'ಐಪಿಎಲ್‌' ಲೈವ್‌ ಮ್ಯಾಚ್ ವೀಕ್ಷಿಸುವುದು ಹೇಗೆ ಗೊತ್ತಾ.!

ಲೈವ್‌ ಮ್ಯಾಚ್‌ ವೀಕ್ಷಿಸುವ ಉತ್ಸಾಹ ಇರುತ್ತದೆ ಆದರೆ ಕಾರಣಾಂತರಗಳಿಂದ ಮನೆಯ ಟಿವಿಯಲ್ಲಿ ಮ್ಯಾಚ್‌ ವೀಕ್ಷಿಸಲು ಸಾಧ್ಯವಾಗುತ್ತಿರುವುದಿಲ್ಲ. ಆದರೆ ಇದೀಗ ಹಾಟ್‌ಸ್ಟಾರ್‌, ಜಿಯೋ ಟಿವಿ ಮತ್ತು ಏರ್‌ಟೆಲ್ ಟಿವಿ ಆಪ್‌ಗಳ ಮೂಲಕ ಐಪಿಎಲ್‌ನ ಲೈವ್‌ ಮ್ಯಾಚ್‌ಗಳನ್ನು ಯಾವುದೇ ಅಡೆತಡೆ ಇಲ್ಲದೇ ವೀಕ್ಷಿಸಬಹುದಾಗಿದೆ. ಇದೇ ಮಾರ್ಚ್‌ 23 ರಿಂದ ಶುರುವಾಗಿರುವ ಐಪಿಎಲ್‌, ಮೇ 5 ರ ವರೆಗೂ ನಡೆಯಲಿದೆ. ಹಾಗಾದರೇ ಸ್ಮಾರ್ಟ್‌ಫೋನ್‌ನಲ್ಲಿ ಲೈವ್‌ ಮ್ಯಾಚ್‌ ನೋಡಲು ಈ ಆಪ್‌ಗಳ ಚಂದಾಶುಲ್ಕ ವೆಷ್ಟು ಎಂಬುದನ್ನು ನೋಡೋಣ.

ಲೈವ್‌ಟಿವಿ ಆಯ್ಕೆ

ಲೈವ್‌ಟಿವಿ ಆಯ್ಕೆ

ಜಿಯೋ ಸಿಮ್‌ ಬಳಕೆದಾರರು ಜಿಯೋ ಟಿವಿ ಆಪ್‌ನಲ್ಲಿ ವೀಕ್ಷಿಸಬಹುದಾಗಿದ್ದು, ಹಾಗೇ ಏರ್‌ಟೆಲ್ ನೆಟ್‌ವರ್ಕ್‌ ಬಳಕೆದಾರರು ಏರ್‌ಟೆಲ್ ಟಿವಿ ಆಪ್‌ನಲ್ಲಿ ಲೈವ್‌ ಮ್ಯಾಚ್‌ ಸ್ಟ್ರೀಮಿಂಗ್ ಮಾಡಬಹುದಾಗಿದೆ. ಹಾಟ್‌ಸ್ಟಾರ್‌ ಆಪ್‌ನಲ್ಲಿ ಯಾವುದೇ ಇತರೆ ನೆಟ್‌ವರ್ಕ್‌ ಬಳಕೆದಾರರು ಲೈವ್‌ ಮ್ಯಾಚ್‌ ವೀಕ್ಷಿಸುವ ಅವಕಾಶವಿದೆ.

ಹಾಟ್‌ಸ್ಟಾರ್‌ ಆಪ್‌

ಹಾಟ್‌ಸ್ಟಾರ್‌ ಆಪ್‌

ಲೈವ್‌ ಮ್ಯಾಚ್‌ ನೋಡಲು ಹಾಟ್‌ಸ್ಟಾರ್‌ ಆಪ್‌ ಅತ್ಯುತ್ತಮವಾಗಿದ್ದು, ಆದರೆ ಐಪಿಎಲ್‌ ಉಚಿತವಾಗಿ ವೀಕ್ಷಿಸಲು ಸಾಧ್ಯವಿಲ್ಲ. ನಾಲ್ಕು ನಿಮಿಷದ ವೀಕ್ಷಿಣೆಯ ನಂತರ ಚಂದಾದಾರರಾಗಿರಿ ಎಂಬ ಮಾಹಿತಿ ಕಾಣಿಸುತ್ತದೆ. ಚಂದಾದಾರರಾಗಲು ಮೂರು ಪ್ಲಾನ್‌ಗಳ ಆಯ್ಕೆಯನ್ನು ನೀಡಿದೆ.

ಹಾಟ್‌ಸ್ಟಾರ್‌ ಪ್ಲಾನ್ಸ್‌

ಹಾಟ್‌ಸ್ಟಾರ್‌ ಪ್ಲಾನ್ಸ್‌

ಹಾಟ್‌ಸ್ಟಾರ್‌ ಆಪ್‌ ಲೈವ್‌ ಟಿವಿ ವೀಕ್ಷಣೆಗೆ ಮೂರು ಪ್ಲಾನ್‌ಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದ್ದು, ಅವು ಕ್ರಮವಾಗಿ 199ರೂ.ಗಳ, 999ರೂ.ಗಳು ಮತ್ತು 365ರೂ.ಗಳ ಬೆಲೆಯನ್ನು ಹೊಂದಿವೆ. 199ರೂ.ಗಳ ಪ್ಲಾನ್‌ ಒಂದು ತಿಂಗಳ ಅವಧಿಯನ್ನು ಹೊಂದಿದ್ದು, 999ರೂ.ಗಳಿಗೆ ವಾರ್ಷಿಕ ಪ್ಲಾನ್ ಲಭ್ಯ ಹಾಗೂ 365ರೂ.ಗಳಿಗೆ ಹಾಟ್‌ಸ್ಟಾರ್ ವಿಐಪಿ ಪ್ಲಾನ್ ಆಯ್ಕೆ ಇದ್ದು, ಒಂದು ವರ್ಷದ ವ್ಯಾಲಿಡಿಟಿಯನ್ನು ಹೊಂದಿದೆ.

ಲ್ಯಾಪ್‌ಟಾಪ್‌ನಲ್ಲೂ ಲೈವ್

ಲ್ಯಾಪ್‌ಟಾಪ್‌ನಲ್ಲೂ ಲೈವ್

ಹಾಟ್‌ಸ್ಟಾರ್‌ ವೆಬ್‌ಸೈಟ್‌ ಮೂಲಕ ಲ್ಯಾಪ್‌ಟಾಪ್‌ ಮತ್ತು ಪಿಸಿಗಳಲ್ಲಿಯೂ ಸಹ ಐಪಿಎಲ್‌ ಲೈವ್‌ ಮ್ಯಾಚ್‌ಗಳನ್ನು ವೀಕ್ಷಿಸಬಹುದಾಗಿದೆ. ಅದಕ್ಕಾಗಿ ಹಾಟ್‌ಸ್ಟಾರ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿರಿ. hotstar.com

Best Mobiles in India

English summary
IPL 2019: How to watch T20 matches live telecast online on JioTV, Hotstar and Airtel TV apps.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X