ನಮೋ ಟಿವಿ ಪ್ರಸಾರ ಪರವಾನಿಗೆ ಹೊಂದಿಲ್ಲ ಎಂದ ಎಡಪಕ್ಷಗಳು

By Gizbot Bureau
|

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಒಂದಡೇ ಅಭ್ಯರ್ಥಿಗಳು ಪ್ರಚಾರದ ಕಣದಲ್ಲಿ ಬ್ಯೂಸಿಯಾಗಿದ್ದಾರೆ. ಇನ್ನೊಂದೇಡೆ ನೀತಿ ಸಂಹಿತೆ ಸಹ ಜಾರಿಯಲ್ಲಿದ್ದು, ಚುನಾವಣೆ ಆಯೋಗ ಕಣ್ಗಾವಲಿಸಿರಿದೆ. ಈ ನಡುವೆ 'ನಮೋ ಟಿವಿ' ಚಾನಲ್ ಬಗ್ಗೆ ಚರ್ಚೆಗಳು ಸಹ ಜೋರಾಗಿದ್ದು, ಇದೀಗ ಕೇಂದ್ರ ಚುನಾವಣಾ ಆಯೋಗ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯಕ್ಕೆ ನೊಟೀಸ್ ಜಾರಿ ಮಾಡಿದೆ.

ನಮೋ ಟಿವಿ ಪ್ರಸಾರ ಪರವಾನಿಗೆ ಹೊಂದಿಲ್ಲ ಎಂದ ಎಡಪಕ್ಷಗಳು

ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳನ್ನು ಪ್ರಸಾರ ಮಾಡಲು ಈ ನಮೋ ಟಿವಿಯನ್ನು ಆರಂಭಿಸಲಾಗಿದೆ ಎಂದು ಎಡಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿವೆ. ಈ ಹಿನ್ನಲೆಯಲ್ಲಿ ಕೇಂದ್ರ ಚುನಾವಣೆ ಆಯೋಗ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದೆ. ಇತ್ತೀಚಿಗೆ ದೂರದರ್ಶನ ಮೋದಿಯವರ 'ಮೈಭಿ ಚೌಕಿದಾರ' ಭಾಷಣದ ನೇರ ಪ್ರಸಾರವನ್ನು ಮಾಡಿತ್ತು ಆ ಬಗ್ಗೆಯು ಚುನಾವಣಾ ಆಯೋಗ ವಿವರಣೆ ಕೇಳಿದೆ.

ನಮೋ ಟಿವಿ ಪ್ರಸಾರ ಪರವಾನಿಗೆ ಹೊಂದಿಲ್ಲ ಎಂದ ಎಡಪಕ್ಷಗಳು

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಇನ್ನಷ್ಟು ವಿಸ್ತಾರವಾಗಿ ತಲುಪಿಸಲು ಇತ್ತೀಚೆಗೆ ಆರಂಭವಾದ "ನಮೋ ಟಿವಿ' ಬಂದ್ ಮಾಡುವಂತೆ ಕೋರಿ ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷವು ಸಲ್ಲಿಸಿದ್ದ ಮನವಿಗೆ ಕೇಂದ್ರ ಚುನಾವಣಾ ಆಯೋಗವು ಸ್ಪಂದಿಸಿದೆ. ಅಲ್ಲದೇ "ಚುನಾವಣಾ ಆಯೋಗಕ್ಕೆ ಮೂರು ಮನವಿಗಳನ್ನು ಸಲ್ಲಿಸಲಾಗಿದ್ದು, ತನ್ನ ಭಾಷಣವನ್ನು ಪ್ರಸಾರ ಮಾಡುವ ಸಲುವಾಗಿ ಬಿಜೆಪಿ ದೂರದರ್ಶನ ಹಾಗೂ ಇತರ ಚಾನಲ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಆಯೋಗದ ಗಮನಕ್ಕೆ ತರಲಾಗಿದೆ" ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಾಲ್ ನೇತೃತ್ವದ ನಿಯೋಗವು ಹೇಳಿದೆ.

ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಚುನಾವಣಾ ಆಯೋಗದ ಸೂಚನೆ ಅನ್ವಯ ಈ ರೀತಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಟಿವಿ ಚಾನಲ್‌ಗಳಿಗೆ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷವು ಚುನಾವಣಾ ಆಯೋಗವನ್ನು ಕೋರಿತ್ತು. ನಮೋ ಟಿವಿ ಟಾಟಾ ಸ್ಕೈ, ಏರ್‌ಟೆಲ್, ಡಿಶ್‌ ಟಿವಿ ಸೇರಿದಂತೆ ಪ್ರಮುಖ ಡಿಟಿಎಚ್‌ ಮತ್ತು ಕೇಬಲ್ ಟಿವಿಗಳಲ್ಲಿ ಲಭ್ಯವಿದ್ದು, ಒಂದು ಅಪ್ಲಿಕೇಶನ್ ಕೂಡಾ ಆರಂಭವಾಗಿದೆ. ಜೊತೆಗೆ ಪ್ರತ್ಯೇಕ ಆನ್‌ಲೈನ್ ಟಿವಿಯು ಕೂಡಾ ಇದೆ.

Best Mobiles in India

English summary
NaMo TV has no broadcast licence.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X