Subscribe to Gizbot

ಅತ್ಯಾಚಾರಿಗಳ ಫೋಟೋ ವೆಬ್‌ಸೈಟ್‌ನಲ್ಲಿ ಪ್ರಕಟ

Posted By:

ಅತ್ಯಾಚಾರ ಮಾಡುವವರ ಮಾನವನ್ನು ಸಾರ್ವ‌ಜನಿಕವಾಗಿ ಹರಾಜು ಹಾಕಲು ದೆಹಲಿ ಪೊಲೀಸ್‌ ಮುಂದಾಗಿದೆ.ಈ ಸಂಬಂಧ ದೆಹಲಿಯಲ್ಲಿ ಅತ್ಯಾಚಾರ ನಡೆಸಿದ ಅತ್ಯಾಚಾರಿಗಳ ಹೆಸರು, ಭಾವಚಿತ್ರ, ವಿಳಾಸವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.

ದೆಹಲಿ ಪೊಲೀಸ್‌ 1983ರಿಂದ 2013ರವರೆಗೆ ಅತ್ಯಾಚಾರವೆಸಗಿ ಅಪರಾಧ ಸಾಬೀತಾದ 668 ಮಂದಿಯ ಹೆಸರು, ಫೋಟೋ, ವಿಳಾಸವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. 'ನೇಮ್‌ ಅಂಡ್‌ ಶೇಮ್‌' ಹೆಸರಿನಡಿ ದೆಹಲಿ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದು, ಅತ್ಯಾಚಾರವೆಸಗಿ ಅಪರಾಧ ಸಾಬೀತಾದವರು ಮತ್ತೂಮ್ಮೆ ಅಂತಹ ಕೃತ್ಯಕ್ಕೆ ಇಳಿಯದಿರಲಿ ಎಂಬ ಕಾರಣಕ್ಕೆ ಹಾಗೂ ನಾಗರಿಕರಿಗೆ ತಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಯಾರಾದರೂ ಅತ್ಯಾಚಾರಿಗಳು ಇದ್ದಾರೆಯೇ ಎಂಬ ಮಾಹಿತಿ ನೀಡುವ ಸಲುವಾಗಿ ವೆಬ್‌ಸೈಟ್‌ನಲ್ಲಿ ಫೋಟೋ ಪ್ರಕಟಿಸಿದ್ದಾರೆ.

ಅತ್ಯಾಚಾರಿಗಳ ಫೋಟೋ ವೆಬ್‌ಸೈಟ್‌ನಲ್ಲಿ ಪ್ರಕಟ

ದೆಹಲಿಯಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಅತ್ಯಾಚಾರಿಗಳ ಫೋಟೋ ಮತ್ತು ವಿವರ ಸಮೇತ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿಲಾಗುವುದು ಎಂದು ತಿಳಿಸಿತ್ತು. ಈ ಸಂಬಂಧ ಆರಂಭಿಕ ಹಂತದಲ್ಲಿ ದೆಹಲಿಯಲ್ಲಿ ಈ ಪ್ರಕ್ರಿಯೆ ಆರಂಭವಾಗಿದ್ದು ಮಂದಿನ ದಿನಗಳಲ್ಲಿ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ಈ ಪ್ರಕ್ರಿಯೆ ಜಾರಿಯಾಗಲಿದೆ.

ಇದನ್ನೂ ಓದಿ : ರೇಪ್ ಮಾಡಿದ್ರೆ ಶಾಕ್‌ ಹೊಡೆಯುತ್ತೆ ಈ ಒಳ ಉಡುಪು
ಇದನ್ನೂ ಓದಿ : ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot