ಮೋದಿ ಡಿಜಿಲಾಕರ್ ಚಾಲ್ತಿಗೆ: ಜನತೆಗೆ ಆನ್‌ಲೈನ್ ಭದ್ರತೆ

Posted By:

ತನ್ನ ಡಿಜಿಟಲ್ ಇಂಡಿಯಾ ಪ್ರೊಗ್ರಾಮ್ ಅಡಿಯಲ್ಲಿ ನರೇಂದ್ರ ಮೋದಿ ಸರ್ಕಾರವು ಹೊಸ ಡಿಜಿಟಲ್ ಲಾಕರ್ ಸೇವೆಗೆ 'ಡಿಜಿಲಾಕರ್' ಎಂಬ ಹೆಸರನ್ನು ನೀಡಿದೆ.

ಮೋದಿ ಡಿಜಿಲಾಕರ್ ಚಾಲ್ತಿಗೆ: ಜನತೆಗೆ ಆನ್‌ಲೈನ್ ಭದ್ರತೆ

ಆನ್‌ಲೈನ್ ಲಾಕರ್‌ಗಳು ಹಲವಾರು ವರ್ಷಗಳಿಂದೀಚೆಗೆ ಚಾಲ್ತಿಯಲ್ಲಿದ್ದು, ವರ್ಚುವಲ್ ಸ್ಥಳಗಳಲ್ಲಿ ನೀವು ಬೇರೆ ಬೇರೆ ಡಿಜಿಟಲ್ ಫೈಲ್‌ಗಳನ್ನು ಭದ್ರವಾಗಿ ಉಳಿಸಬಹುದಾಗಿದೆ. ಡ್ರಾಪ್‌ಬಾಕ್ಸ್ ಮತ್ತು ಎವರ್‌ನೋಟ್‌ನಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಫೈಲ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ನಿಮ್ಮನ್ನು ಅನುಮತಿಸುತ್ತವೆ. ಇದರ ಹೆಚ್ಚುವರಿ ಸಂಗ್ರಹಣೆ ಮತ್ತು ಸೇವೆಗಳಿಗೆ ನಾವು ಹೆಚ್ಚಾಗಿ ಪಾವತಿಸುತ್ತೇವೆ.

ಓದಿರಿ: ಇನ್ನು ವಾಟ್ಸಾಪ್ ಭದ್ರಕೋಟೆಯನ್ನು ಮುರಿಯಲು ಎಂಟೆದೆ ಬೇಕು

ಇನ್ನು ಇತರ ಆನ್‌ಲೈನ್ ಲಾಕರ್‌ಗಳು ಅಂದರೆ, ಡಿಜಿಲಾಕರ್ ಭದ್ರವಾದ ಆನ್‌ಲೈನ್ ಲಾಕರ್‌ಗಳಲ್ಲಿ ತಮ್ಮ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಲು ಬಳಕೆದಾರರನ್ನು ಅನುಮತಿಸುತ್ತದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಅಡಿಯಲ್ಲಿ ಈ ಸೇವೆ ಇದ್ದು, ಕೆಲವು ತಿಂಗಳಿಂದ ಬೀಟಾವನ್ನು ಇದು ಚಾಲನೆ ಮಾಡುತ್ತಿದೆ. ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜುಲೈ 1 ರಂದು ಉದ್ಘಾಟಿಸಲಿದ್ದಾರೆ.

ಮೋದಿ ಡಿಜಿಲಾಕರ್ ಚಾಲ್ತಿಗೆ: ಜನತೆಗೆ ಆನ್‌ಲೈನ್ ಭದ್ರತೆ

ಎಲ್ಲಾ ಬಗೆಯ ಸರಕಾರಿ ದಾಖಲೆಗಳನ್ನು ಸಂಗ್ರಹಿಸಲು ಇದು ಬಳಕೆದಾರರನ್ನು ಅನುಮತಿಸುತ್ತಿದ್ದು ಪ್ಯಾನ್ ಕಾರ್ಡ್‌ಗಳು, ಬಿಲ್‌ಗಳು, ಆಸ್ತಿ ಪತ್ರಗಳು ಮುಂತಾದ ದಾಖಲೆಗಳನ್ನು ಬಳಕೆದಾರರು ಇಲ್ಲಿ ಭದ್ರವಾಗಿ ಕಾಪಿಡಬಹುದು.

ಓದಿರಿ: ಆಪಲ್ ಅನ್ನು ಹಿಂದಿಕ್ಕಿ ಟೆಕ್ ಪುಟದಲ್ಲಿ ಇತಿಹಾಸ ಬರೆದ ಶ್ಯೋಮಿ

ಮೋದಿ ಡಿಜಿಲಾಕರ್ ಚಾಲ್ತಿಗೆ: ಜನತೆಗೆ ಆನ್‌ಲೈನ್ ಭದ್ರತೆ

ಇದನ್ನು ಬಳಸಲು ಆಧಾರ್ ಸಂಖ್ಯೆಯನ್ನು ಬಳಸಿ ಬಳಕೆದಾರರು ಸೈನ್ ಅಪ್ ಮಾಡಬೇಕಾಗುತ್ತದೆ. ಆಧಾರ್ ಸಂಖ್ಯೆಯನ್ನು ಒಮ್ಮೆ ನೀವು ನಮೂದಿಸಿದರೆ ಸಾಕು, ಒನ್ ಟೈಮ್ ಪಾಸ್‌ವರ್ಡ್ ಅನ್ನು ನೋಂದಾಯಿತ ಫೋನ್‌ಗೆ ಕಳುಹಿಸಲಾಗುತ್ತದೆ. ಇದರ ಮೂಲಕ ಆರಂಭ ಲಾಗಿನ್ ಅನ್ನು ನಿಮಗೆ ಮಾಡಬಹುದು. ತಮ್ಮದೇ ಪಾಸ್‌ವರ್ಡ್‌ಗಳನ್ನು ಬಳಸಲು ಬಳಕೆದಾರರಿಗೆ ಸಾಧ್ಯವಾಗಬಹುದು. ಇನ್ನು ಗೂಗಲ್ ಮತ್ತು ಫೇಸ್‌ಬುಕ್ ಮೂಲಕ ಭವಿಷ್ಯದಲ್ಲಿ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ.

ಡಿಜಿಲಾಕರ್‌ನೊಂದಿಗೆ ಸರಕಾರವು ಇ ಸಿಗ್ನೇಚರ್ ವ್ಯವಸ್ಥೆಯನ್ನು ಲಾಂಚ್ ಮಾಡುತ್ತಿದ್ದು ಡಾಕ್ಯುಮೆಂಟ್‌ಗಳ ದೃಢೀಕರಣಕ್ಕೆ ಈ ಸಹಿ ಸಹಕಾರವನ್ನು ನೀಡಲಿದೆ.

English summary
‘DIGILocker’ is the name given to a new digital locker service being initiated by the Narendra Modi government under its Digital India programme.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot