Subscribe to Gizbot

ಆಪಲ್ ಅನ್ನು ಹಿಂದಿಕ್ಕಿ ಟೆಕ್ ಪುಟದಲ್ಲಿ ಇತಿಹಾಸ ಬರೆದ ಶ್ಯೋಮಿ

Written By:

ಸ್ಧರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ನಡೆಯುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲೂ ಈ ಸ್ಪರ್ಧೆ ನಿರಂತರವಾಗಿ ನಡೆಯುತ್ತಿದೆ. ದೊಡ್ಡ ಕಂಪೆನಿಗಳನ್ನು ಹಿಂದಿಕ್ಕಿ ಸಣ್ಣ ಕಂಪೆನಿಗಳು ಇದೀಗ ಪ್ರಗತಿಯ ಮೆಟ್ಟಿಲನ್ನು ಏರುತ್ತಿದೆ. ಬಳಕೆದಾರರಿಗೆ ಅಗತ್ಯವಾಗಿರುವ ಮಾದರಿಯಲ್ಲಿ ಉತ್ಪನ್ನಗಳನ್ನು ತಯಾರಿಸಿ ಅದನ್ನು ಕೈಗೆಟಕುವ ಬೆಲೆಯಲ್ಲಿ ದೊರಕುವಂತೆ ಮಾಡಿ ಈ ಸಣ್ಣ ಕಂಪೆನಿಗಳು ಇಂದು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಸ್ಮಾರ್ಟ್‌ಫೋನ್ ಇತಿಹಾಸವನ್ನು ಕೆದಕಿದಾಗ ಈ ಅಂಶ ಇಲ್ಲಿ ಬಲವಾಗಿ ತಳವೂರಿರುವುದು ಕಂಡುಬರುತ್ತದೆ.

ಓದಿರಿ: ಇನ್ನು ವಾಟ್ಸಾಪ್ ಭದ್ರಕೋಟೆಯನ್ನು ಮುರಿಯಲು ಎಂಟೆದೆ ಬೇಕು

ಶ್ಯೋಮಿ ಚೀನಾದ ಕಂಪೆನಿ ಭಾರತದಲ್ಲಿ ಬಜೆಟ್ ಫೋನ್‌ಗಳನ್ನು ಪ್ರಸ್ತುತಪಡಿಸುತ್ತಾ ಈಗ ಶ್ಯೋಮಿ ಎಂದರೆ ಆಪಲ್‌ಗಿಂತಲೂ ಒಂದು ಕೈ ಮುಂದೆ ಎಂಬ ಬಿರುದನ್ನು ಬಾಚಿಕೊಂಡಿದೆ. ಈ ಕಂಪೆನಿ ಇಲ್ಲಿನವರ ನಾಡಿಮಿತವನ್ನು ಅರಿತುಕೊಂಡು ಅವರಿಗೆ ಬೇಕಾದ ಉತ್ಪನ್ನವನ್ನು ಒದಗಿಸುವ ಸಾಹಸಕ್ಕೆ ಮುಂದಾಯಿತು. ಹೀಗೆ ಯಶಶ್ಸಿನ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಹೀಗೆಯೇ ಸಣ್ಣ ಸಣ್ಣ ಕಂಪೆನಿಗಳು ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿದೆ. ಇಂದಿನ ಲೇಖನದಲ್ಲಿ ಟಾಪ್ ಸ್ಥಾನದಲ್ಲಿರುವ ಕಂಪೆನಿಗಳ ಪಟ್ಟಿಯನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೀಜಿಂಗ್, ಚೀನಾ

ಶ್ಯೋಮಿ

ಹೆಚ್ಚು ವೇಗದಲ್ಲಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್ ಕಂಪೆನಿ

ಹಂಗ್ಸೂ, ಚೀನಾ

ಆಲಿಬಾಬಾ

ಜಗತ್ತಿನ ಅತಿದೊಡ್ಡ ಆನ್‌ಲೈನ್ ರೀಟೈಲ್ ತಾಣ

ಮೌಂಟನ್ ವ್ಯೂ, ಕ್ಯಾಲಿಫೋರ್ನಿಯಾ

ಗೂಗಲ್

ಇಂಟರ್ನೆಟ್ ಪ್ರವೇಶವನ್ನು ಇನ್ನಷ್ಟು ವಿಸ್ತರಿಸಲು ಸ್ಥಾಪಿಸಿದ ಕಂಪೆನಿ

ಸೀಟಲ್

ಅಮೆಜಾನ್

ರೀಟೈಲ್ ತಾಣದಲ್ಲಿ ರೊಬೋಟ್‌ಗಳನ್ನು ಬಳಸಿ ಇನ್ನಷ್ಟು ತಾಂತ್ರಿಕ ಸೌಲಭ್ಯವನ್ನು ಒದಗಿಸುತ್ತಿದೆ.

ಕ್ಯುಪರ್ಟಿನೊ, ಕ್ಯಾಲಿಫೋರ್ನಿಯಾ

ಆಪಲ್

ಹೊಸ ಸ್ಮಾರ್ಟ್ ವಾಚ್ ಮತ್ತು ಆಪಲ್ ಪೇ ಡಿಜಿಟಲ್ ವಾಲೆಟ್ ಸ್ಪರ್ಧಿಗಳಿಗೆ ಸಡ್ಡು ಹೊಡೆಯಲಿದೆ.

ಮೆನ್ಲೊ ಪಾರ್ಕ್, ಕ್ಯಾಲಿಫೋರ್ನಿಯಾ

ಫೇಸ್‌ಬುಕ್

ಮೆಸೆಂಜರ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸಿ ದೊಡ್ಡಮಟ್ಟಿಗಿನ ಜಾಹೀರಾತು ಆದಾಯವನ್ನು ಗಳಿಸಿಕೊಳ್ಳುವ ಸನ್ನಾಹದಲ್ಲಿದೆ.

ಅಮೆಸ್ಟರ್ಡಮ್, ನೆದರ್‌ಲ್ಯಾಂಡ್ಸ್

ಫಿಲಿಪ್ಸ್

ಎಲ್‌ಇಡಿ ಲೈಟಿಂಗ್ ದೈತ್ಯ

ಟೋಕಿಯೊ

ಲೈನ್

ಜನಪ್ರಿಯ ಮೆಸೇಜಿಂಗ್ ಮತ್ತು ಉಚಿತ ಕರೆಮಾಡುವಿಕೆ ಅಪ್ಲಿಕೇಶನ್

ಅರ್ಮೊಂಕ್, ನ್ಯೂಯಾರ್ಕ್

ಐಬಿಎಮ್

ದೊಡ್ಡ ದೊಡ್ಡ ಡೇಟಾವನ್ನು ಕೈಗೆತ್ತಿಕೊಳ್ಳುವ ಯೋಜನೆಯಲ್ಲಿದೆ.

ಲಾಸ್ ಏಂಜಲೀಸ್

ಸ್ನ್ಯಾಪ್‌ಚಾಟ್

ಸ್ನ್ಯಾಪ್ ಸ್ಟೋರೀಸ್ ಎಂಬ ವಿಶೇಷ ಫೀಚರ್ ಅನ್ನು ಕಂಪೆನಿ ಆರಂಭಿಸುತ್ತಿದ್ದು ಫೋಟೋಗಳೊಂದಿಗೆ ಇದು ಕಥೆಯನ್ನು ತಿಳಿಸಿಕೊಡಲಿದೆ.

ರೆಡ್‌ಮೆಂಡ್, ವಾಶಿಂಗ್ಟನ್

ಮೈಕ್ರೋಸಾಫ್ಟ್

ಹೋಲೋಲೆನ್ಸ್ ಪ್ರಾಜೆಕ್ಟ್‌ ತಂತ್ರಜ್ಞಾನಕ್ಕೆ ಹೊಸ ತಿರುವನ್ನು ನೀಡಲಿದೆ.

ಸ್ಯಾನ್ ಫ್ರಾನ್ಸಿಸ್ಕೊ, ಕ್ಯಾಲಿಫೋರ್ನಿಯಾ

ಉಬರ್

ಶೇರ್ ಸರ್ವೀಸ್ ಮತ್ತು ಡ್ರೈವರ್ ಡೆಲಿವರಿಯನ್ನು ಪ್ರಸ್ತುತಪಡಿಸುತ್ತಿದೆ.

ಪಾಲೊ ಅಲ್ಟೊ, ಕ್ಯಾಲಿಫೋರ್ನಿಯಾ

ಟೆಸ್ಲಾ ಮೋಟರ್ಸ್

ಬ್ಯಾಟರಿ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿದೆ.

ಸ್ಯಾನ್ ಡೀಗೊ

ಇಲ್ಯುಮ್ನಿಯಾ

ಡಿಎನ್‌ಎ ರೀಡಿಂಗ್ ಮೆಶೀನ್ ಅನ್ನು ಆಸ್ಪತ್ರೆಗಳಿಗೆ ಮತ್ತು ಕ್ಯಾನ್ಸರ್ ಕ್ಲಿನಿಕ್‌ಗಳಿಗೆ ವರ್ಗಾಯಿಸುವ ನಿಟ್ಟಿನಲ್ಲಿದೆ.

ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೊ, ಕ್ಯಾಲಿಫೋರ್ನಿಯಾ

ಕೌನ್ಸಿಲ್

ಕಡಿಮೆ ದರದ ಡಿಎನ್‌ಎ ವ್ಯವಸ್ಥೆ ಮತ್ತು ಕ್ಯಾನ್ಸರ್ ಪರದೆಗಳ ಮಾರಾಟ

ಮೇರಿಲ್ಯಾಂಡ್, ಮಿಸ್ಸೂರಿ

ಸನ್ ಎಡಿಸನ್

ವಿದ್ಯುತ್ ಶಕ್ತಿಯನ್ನು ಅಭಿವೃದ್ಧಿಶೀಲ ವಿಶ್ವಕ್ಕೆ ನೀಡುವ ಪ್ರಗತಿಯಲ್ಲಿದೆ.

ಶೆಂಜನ್, ಚೀನಾ

ಟೆನ್ಸೆಂಟ್

ಚೀನಾದ ಹೆಚ್ಚು ಬಳಸಲಾದ ಇಂಟರ್ನೆಟ್ ಸೇವೆ ಪೋರ್ಟಲ್

ಸೀಟಲ್

ಜೂನೊ ಥೆರಾಪ್ಯುಟಿಕ್ಸ್

ಕ್ಯಾನ್ಸರ್ ಚಿಕಿತ್ಸೆಗಳನ್ನು ಪರೀಕ್ಷಿಸುತ್ತಿದ್ದು ವ್ಯಕ್ತಿಯ ರೋಗನಿರೋಧಕ ಕೋಶಗಳನ್ನು ಬಳಸಿಕೊಳ್ಳುತ್ತದೆ.

ಸಾನ್ ಮಾಟಿಯೊ, ಕ್ಯಾಲಿಫೋರ್ನಿಯಾ

ಸೋಲಾರ್ ಸಿಟಿ

ಸೋಲಾರ್ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಯಾಗಿದೆ.

ಲಾಸ್ ಗಟೋಸ್, ಕ್ಯಾಲಿಫೋರ್ನಿಯಾ

ನೆಟ್‌ಫ್ಲಿಕ್ಸ್

ಕೇಬಲ್ ಕಂಪೆನಿಗಳೊಂದಿಗೆ ಒಪ್ಪಂದಗಳನ್ನು ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the 20 top Smartest Companies 2015 xiaomi in 2nd place. Yes xiaomi gets 2nd place in tec field. As a smartphone vendor it puts back Apple and google also.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot