ಇನ್ನು ವಾಟ್ಸಾಪ್ ಭದ್ರಕೋಟೆಯನ್ನು ಮುರಿಯಲು ಎಂಟೆದೆ ಬೇಕು

Posted By:

ಅತಿ ಹೆಚ್ಚು ಬಳಕೆದಾರರನ್ನು ಹೊಂದಿ ಸಾಮಾಜಿಕ ತಾಣದಲ್ಲಿ ಮಿಂಚುತ್ತಿರುವ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಇಂದು ಹೆಚ್ಚಿನ ಲಾಭವನ್ನು ಗಳಿಸಿಕೊಳ್ಳುತ್ತಿದೆ. ಜೊತೆಗೆ ಬಳಕೆದಾರ ಕಣ್ಮಣಿ ಎಂಬ ಬಿರುದಿಗೂ ಪಾತ್ರವಾಗಿದೆ. ಫೇಸ್‌ಬುಕ್ ಅಧೀನದಲ್ಲಿದ್ದರೂ ವಾಟ್ಸಾಪ್ ಎಂದಿಗೂ ತನ್ನ ಧೀಮಂತಿಕೆಯನ್ನು ಬಿಟ್ಟುಕೊಟ್ಟಿಲ್ಲ.

ಓದಿರಿ: ಸೂಜಿಗಲ್ಲಿನಂತೆ ಸೆಳೆಯುವ ವಾಟ್ಸಾಪ್ ಹೊಸ ಅಂಶ ಬಲ್ಲಿರಾ?

ಒಂದಿಲ್ಲೊಂದು ಹೊಸ ವಿಶೇಷತೆಗಳನ್ನು ಸೇರಿಸಿಕೊಳ್ಳುತ್ತಾ ಬಳಕೆದಾರರಿಗೆ ಇನ್ನಷ್ಟು ನಿಕಟವಾಗುತ್ತಿರುವ ಮೆಸೇಜಿಂಗ್ ಅಪ್ಲಿಕೇಶನ್ ಭದ್ರತಾ ವ್ಯವಸ್ಥೆಯಲ್ಲಿ ತುಸು ಮುಗ್ಗರಿಸಿದೆ ಎಂಬ ಮಾತಿದೆ. ಆದರೂ ಇದನ್ನು ಬಳಸುತ್ತಿರುವ ಬಳಕೆದಾರರ ಸಂಖ್ಯೆಯಲ್ಲಿ ಏನೂ ಕಡಿಮೆಯಾಗಿಲ್ಲ. ಜಾಹೀರಾತನ್ನು ಬಳಸಿಕೊಳ್ಳದೆಯೇ ಲಾಭವನ್ನು ಪಡೆದುಕೊಳ್ಳುತ್ತಿರುವ ವಾಟ್ಸಾಪ್ 50 ಉದ್ಯೋಗಿಗಳನ್ನು ಸಂಸ್ಥೆಯಲ್ಲಿ ಹೊಂದಿದೆ. ಇಂದಿನ ಲೇಖನದಲ್ಲಿ ವಾಟ್ಸಾಪ್ ಸುಭದ್ರತಾ ಅಂಶಗಳತ್ತ ನಮ್ಮ ದೃಷ್ಟಿ ಹರಿಸೋಣ

ಓದಿರಿ: ಫೋನ್ ಚಾರ್ಜಿಂಗ್ ಕುರಿತ ಸತ್ಯಗಳು: ಗಟ್ಟಿ ಗುಂಡಿಗೆಯವರಿಗೆ ಮಾತ್ರ

ಹೇಗೆಂದರೆ ಈ ಲೇಖನದಲ್ಲಿ ನಾವು ನೀಡಿರುವ ಕೆಲವೊಂದು ಭದ್ರತಾ ಅಂಶಗಳು ವಾಟ್ಸಾಪ್‌ನಲ್ಲಿ ಇದ್ದರೆ ಹೇಗಿರಬಹುದು ಎಂಬುದನ್ನು ನಿಮಗೆ ತಿಳಿಯಪಡಿಸುತ್ತಿದ್ದೇವೆ. ಇನ್ನಷ್ಟು ಭದ್ರತೆಯೊಂದಿಗೆ ನಿಮಗೆ ದೊರಕಬಹುದಾದ ವಾಟ್ಸಾಪ್ ಸೌಲಭ್ಯವನ್ನು ನೀವು ನೆಚ್ಚಿಕೊಳ್ಳುತ್ತೀರಾ ಅಲ್ಲವೇ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಪ್ಲಿಕೇಶನ್ ಲಾಕ್

ಇನ್ ಬಿಲ್ಟ್ ಅಪ್ಲಿಕೇಶನ್ ಲಾಕ್

ಹೆಚ್ಚಿನ ವೈಯಕ್ತಿಕ ಅಂಶಗಳು ವಾಟ್ಸಾಪ್‌ನಲ್ಲಿ ಹಂಚಿಕೆಯಾಗುತ್ತಿರುತ್ತವೆ. ಈ ಸಮಯದಲ್ಲಿ ವಾಟ್ಸಾಪ್ ಇನ್ ಬಿಲ್ಟ್ ಅಪ್ಲಿಕೇಶನ್ ಲಾಕ್ ಅನ್ನು ಒದಗಿಸಿದರೆ ಯಾರಿಗೆ ತಾನೇ ಇಷ್ಟವಾಗದು ಹೇಳಿ.

ಥರ್ಡ್ ಪಾರ್ಟಿ ಅಪ್ಲಿಕೇಶನ್

ಥರ್ಡ್ ಪಾರ್ಟಿ ಅಪ್ಲಿಕೇಶನ್ ಲಾಕರ್

ಹೆಚ್ಚಿನ ಥರ್ಡ್ ಪಾರ್ಟಿ ಅಪ್ಲಿಕೇಶನ್ ಲಾಕರ್‌ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಕೆಲವುಗಳನ್ನು ವಾಟ್ಸಾಪ್ ಬಳಸಿಕೊಳ್ಳಬಹುದಾಗಿದೆ. ಸಂಪರ್ಕ ಪಟ್ಟಿ, ಗ್ಯಾಲರಿ ಮತ್ತು ಇತರ ವೈಯಕ್ತಿಕ ಅಂಶಗಳಿಗೆ ಅಪ್ಲಿಕೇಶನ್ ಲಾಕರ್ ಯೋಜನೆಯನ್ನು ವಾಟ್ಸಾಪ್ ಪ್ರಸ್ತುತಪಡಿಸಬಹುದಾಗಿದೆ.

ಭದ್ರತೆ

ಅಗೋಚರ ಮೋಡ್

ತನ್ನ ಬಳಕೆದಾರರಿಗೆ ಯಾವಾಗಲೂ ಲಭ್ಯವಾಗಿರಬೇಕು ಎಂಬುದು ವಾಟ್ಸಾಪ್ ಉದ್ದೇಶವಾಗಿರುವುದರಿಂದ ಅಗೋಚರ ಮೋಡ್ ಅನ್ನು ವಾಟ್ಸಾಪ್ ಬಳಸಿಕೊಳ್ಳುತ್ತಿಲ್ಲ. ಆದರೆ ಈ ಫೀಚರ್ ಅನ್ನು ಅಳವಡಿಸಿದಲ್ಲಿ ಬಳಕೆದಾರರಿಗೆ ಇನ್ನಷ್ಟು ಭದ್ರತೆ ಖಂಡಿತ.

ಗಂಭೀರ ಚಾಟ್‌

ಗಂಭೀರ ಚಾಟ್‌ಗಾಗಿ ಅಗೋಚರ ಮೋಡ್

ನೀವು ಯಾರ ಬಳಿಯಾದರೂ ತುಂಬಾ ಗಂಭೀರವಾಗಿ ಚಾಟ್ ಮಾಡುತ್ತಿದ್ದೀರಿ ಎಂದಾದಲ್ಲಿ ಇದನ್ನು ಬಳಸಿ ಮತ್ತಿತರರ ಪ್ರವೇಶವನ್ನು ನಿಮಗೆ ನಿಷೇಧಿಸಬಹುದು. ನಿಮ್ಮಿಬ್ಬರ ನಡುವಿನ ಚರ್ಚೆಯೇ ಇಲ್ಲಿ ಪ್ರಧಾನವಾಗುತ್ತದೆ.

ವಾಟ್ಸಾಪ್ ಕರೆ

ಬ್ಯುಸಿ ಮೋಡ್

ನೀವು ತುರ್ತು ಕೆಲಸದಲ್ಲಿದ್ದಾಗ ನಿಮಗೆ ಸಂದೇಶವನ್ನು ಕಳುಹಿಸುವ ಬದಲಿಗೆ ವಾಟ್ಸಾಪ್ ಕರೆಮಾಡುವ ಸೌಲಭ್ಯವನ್ನು ಬಳಕೆದಾರರಿಗೆ ಒದಗಿಸಿಕೊಟ್ಟಿದೆ. ಈ ಮಾದರಿಯಲ್ಲಿ ವಾಟ್ಸಾಪ್ ತೊಂದತೆಯನ್ನುಂಟು ಮಾಡುತ್ತದೆ. ಈ ಸಮಯದಲ್ಲಿ ಬಳಕೆದಾರರು ಫೋನ್ ಅನ್ನು ಮ್ಯೂಟ್ ಮಾಡಬೇಕಾಗುತ್ತದೆ ಇಲ್ಲವೇ ಇಂಟರ್ನೆಟ್ ಆಫ್ ಮಾಡಬೇಕಾಗುತ್ತದೆ. ಇನ್ನು ಬ್ಯುಸಿ ಮೋಡ್ ಇದ್ದ ಸಂದರ್ಭದಲ್ಲಿ ಬಳಕೆದಾರರು ಅದನ್ನು ಬಳಸಿಕೊಳ್ಳಬಹುದಾಗಿದೆ.

ಹೊಸ ಸಂದೇಶಗಳ ಎಚ್ಚರಿಕೆ

ಬ್ಯುಸಿ ಮೋಡ್‌ನಿಂದ ಇತರರಿಗೆ ತೊಂದರೆ ಇಲ್ಲ

ನೀವು ಬ್ಯುಸಿ ಮೋಡ್ ಬಳಸುತ್ತಿರುವಾಗ, ನಿಮಗೆ ಎಲ್ಲಾ ಚಾಟ್ ಬ್ಯುಸಿ ಮೋಡ್‌ನಿಂದ ನೀವು ಹೊರಬಂದ ಸಂದರ್ಭದಲ್ಲಿ ಮಾತ್ರ ನಿಮಗೆ ಬಂದಿರುವ ಚಾಟ್‌ಗಳು ಕಾಣುತ್ತವೆ. ಇನ್ನು ಬಳಕೆದಾರರಿಗೆ ಯಾವುದೇ ಹೊಸ ಸಂದೇಶಗಳ ಎಚ್ಚರಿಕೆಯನ್ನು ನೀಡುವುದಿಲ್ಲ ಬದಲಾಗಿ ಹಿನ್ನಲೆಯಲ್ಲಿ ಇದನ್ನು ಉಳಿಸುತ್ತದೆ.

ಕೋರಿಕೆ

ಸ್ನೇಹಿತರ ಕೋರಿಕೆ

ಫೇಸ್‌ಬುಕ್ ಅಧೀನದಲ್ಲಿರುವ ವಾಟ್ಸಾಪ್‌ನಲ್ಲಿ ಸ್ನೇಹಿತರ ಕೋರಿಕೆ ಇದ್ದಲ್ಲಿ ಅತ್ಯಂತ ಸೂಕ್ತ ಎಂದು ಅನಿಸುತ್ತದೆ. ನಿಮಗೆ ಅಪರಿಚಿತರು ಕೋರಿಕೆ ಕಳುಹಿಸಿದಲ್ಲಿ ಇದನ್ನು ನಿರ್ಲಕ್ಷಿಸಬಹುದು.

ಲಿಂಕ್‌ಡ್ ಇನ್

ಲಿಂಕ್‌ಡ್ ಇನ್ ಪ್ರಭಾವ

ಇನ್ನು ಜನರನ್ನು ಸೇರಿಸುವ ಸಂದರ್ಭದಲ್ಲಿ ಈ ತಾಣಕ್ಕೆ ಲಿಂಕ್‌ಡ್ ಇನ್ ಪ್ರಭಾವವನ್ನು ಬಳಸಿಕೊಳ್ಳಬಹುದು. ಸ್ನೇಹಿತರ ಪಟ್ಟಿಯಲ್ಲಿ ಇಲ್ಲದವರು ಮೊದಲಿಗೆ ಮೂರು ಸಂದೇಶಗಳನ್ನು ಕಳುಹಿಸಬಹುದು. ಕಳುಹಿಸಿದವರು ಉತ್ತರ ಪಡೆದುಕೊಂಡಲ್ಲಿ ಮಾತ್ರವೇ ಅವರನ್ನು ಸ್ನೇಹಿತರ ಪಟ್ಟಿಗೆ ಸೇರಿಸಿಕೊಳ್ಳಬಹುದಾಗಿದೆ.

ಮರುಪಡೆದುಕೊಳ್ಳುವ ವ್ಯವಸ್ಥೆ

ಸಂದೇಶಗಳನ್ನು ಮರುಪಡೆದುಕೊಳ್ಳುವುದು

ನೀವು ಯಾರಿಗಾದರೂ ತಪ್ಪಾಗಿ ಸಂದೇಶ ಕಳುಹಿಸಿದಲ್ಲಿ ಅವರಿಂದ ಸಂದೇಶವನ್ನು ಮರುಪಡೆದುಕೊಳ್ಳುವ ವ್ಯವಸ್ಥೆ ಇದ್ದಲ್ಲಿ ಕೂಡ ಬಳಕೆದಾರರಿಗೆ ಇದು ಉತ್ತಮ ಪ್ರಯೋಜನ ಎಂದೆನಿಸಲಿದೆ.

ಪಠ್ಯ ಸಂದೇಶ

ಪಠ್ಯ ಮಾತ್ರ ಸಂದೇಶಗಳು

ನಿಮ್ಮ ಸ್ನೇಹಿತರ ಪಟ್ಟಿಯಲ್ಲಿ ಇರುವವರು ನಿಮಗೆ ಪಠ್ಯ ಸಂದೇಶವನ್ನು ಮಾತ್ರ ಕಳುಹಿಸುವಂತಿರಬೇಕು. ವೀಡಿಯೋ, ಮೆಮೆ ಕಾರ್ಡ್‌ಗಳು, ಫೋಟೋಗಳು ಇವುಗಳನ್ನು ಕಳುಹಿಸುವಂತಿರಬಾರದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
WhatsApp has become a must-have communication platform for smartphone users. After it got acquired by Facebook, the free chatting app got revamped dramatically, especially on Android. Here are WhatsApp privacy features we would love to have, soon.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot