Subscribe to Gizbot

ಮಾರ್ಕ್ ಜುಕರ್ ಬರ್ಗ್ ದಂಪತಿಗಳಿಂದ 99% ಆಸ್ತಿ ದೇಣಿಗೆ

Written By:

ಮಾರ್ಕ್ ಜುಕರ್ ಬರ್ಗ್ ಮತ್ತು ಪ್ರೆಸಿಲ್ಲಾರಿಗೆ ಮಗಳು ಮ್ಯಾಕ್ಸ್ ಹುಟ್ಟಿದ ಸಂಭ್ರಮ. ಹಲವಾರು ತಿಂಗಳುಗಳ ಕಾತರ ದಂಪತಿಗಳಿಗೆ ಮುದ್ದು ಮಗಳ ರೂಪದಲ್ಲಿ ಕೈಗೂಡಿದೆ. ಈ ಸಂತಸ ಸುಸಂದರ್ಭದಲ್ಲಿ ದಂಪತಿಗಳು ತಮ್ಮ ಫೇಸ್‌ಬುಕ್‌ನ ಶೇರ್‌ನ 99% ವನ್ನು ತಮ್ಮ ಮಗಳು ಮ್ಯಾಕ್ಸ್ ಹೆಸರಿನಲ್ಲಿ ಅನಾಥಾಶ್ರಮಕ್ಕೆ ನೀಡುವುದಾಗಿ ಘೋಷಿಸಿದ್ದಾರೆ. 99% ದ ಒಟ್ಟು ಮೌಲ್ಯ $45 ಬಿಲಿಯನ್ ಆಗಿದೆ.

ಓದಿರಿ: ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು

ವಿಶ್ವದ ಬಿಲಿಯಾಧಿಪತಿಗಳಾದ ವಾರೆನ್ ಬಫೆಟ್ ಮತ್ತು ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ನಡೆದ ದಾರಿಯಲ್ಲೇ ಜುಕರ್ ಬರ್ಗ್ ದಂಪತಿಗಳು ಕೂಡ ಭಾರೀ ಮೊತ್ತವನ್ನು ದೇಣಿಗೆ ನೀಡುತ್ತಿದ್ದಾರೆ. ಇಂದಿನ ಲೇಖನದಲ್ಲಿ ಇದರ ಕುರಿತು ಮತ್ತಷ್ಟು ಮಾಹಿತಿಗಳನ್ನು ನಾವು ನೀಡುತ್ತಿದ್ದು ಸ್ಲೈಡರ್‌ಗಳಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್ ಪುಟ

ಮಗಳಿಗೊಂದು ಪತ್ರ

ಜುಕರ್‌ಬರ್ಗ್ ತಮ್ಮ ಫೇಸ್‌ಬುಕ್ ಪುಟದಲ್ಲಿ ತಮ್ಮ ಹಾಗೂ ಮಡದಿ ಮಗುವಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ 'ಎ ಲೆಟರ್ ಟು ಅವರ್ ಡಾಟರ್' ಎಂಬುದಾಗಿ ಇದೆ.

2,220 ಪದ

ದೇಣಿಗೆ

ಈ ಪತ್ರವು 2,220 ಪದಗಳನ್ನು ಒಳಗೊಂಡಿದ್ದು, ಆರೋಗ್ಯ, ವಿದ್ಯಾಭ್ಯಾಸ, ಇಂಟರ್ನೆಟ್ ಪ್ರವೇಶ ಮೊದಲಾದ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ. ಇದಕ್ಕಾಗಿ ದೇಣಿಗೆಯ ಮೊತ್ತ ಬಳಕೆಯಾಗಲಿದೆ.

99%

ಸಾಮಾಜಿಕ ಕಾರ್ಯಗಳು

ಫೇಸ್‌ಬುಕ್ ಶೇರ್‌ನ 99% ವನ್ನು ಈ ಆರಂಭಕ್ಕಾಗಿ ಬಳಸಲಾಗುತ್ತಿದ್ದು, ಇಂಟರ್ನೆಟ್ ಬೆಳವಣಿಗೆ, ಸಮಯದಾಯ ಅಭಿವೃದ್ಧಿ ಮೊದಲಾದ ಸಾಮಾಜಿಕ ಚಟುವಟಿಕೆಗಳನ್ನು ಇದು ಒಳಗೊಂಡಿದೆ ಎನ್ನಲಾಗಿದೆ.

ಪಿತೃತ್ವ ರಜೆ

ಮ್ಯಾಕ್ಸ್ ಚಾನ್ ಜುಕರ್‌ಬರ್ಗ್

ಕಳೆದ ವಾರವಷ್ಟೇ ಮ್ಯಾಕ್ಸ್ ಚಾನ್ ಜುಕರ್‌ಬರ್ಗ್ ಜನ್ಮತಾಳಿದ್ದಾರೆ. ಮಗುವಿನ ಜನನದ ಮೊದಲೇ ಮಾರ್ಕ್ ಎರಡು ತಿಂಗಳುಗಳ ಪಿತೃತ್ವ ರಜೆಯನ್ನು ಹಾಕಿದ್ದರು.

ಸಮಾಜ ಸೇವೆ

1.6 ಶತಕೋಟಿ ದೇಣಿಗೆ

ಇದುವರೆಗೆ ಚಾನ್ ಮತ್ತು ಮಾರ್ಕ್ ಸಮಾಜ ಸೇವೆಗಾಗಿ 1.6 ಶತಕೋಟಿಯನ್ನು ನೀಡಿದ್ದಾರೆ.

ಹೆಚ್ಚಿನ ದೇಣಿಗೆ

ಸಾಮಾಜಿಕ ಯೋಜನೆ

ಈ ವರ್ಷವೂ ಹೆಚ್ಚಿನ ದೇಣಿಗೆಗಳನ್ನು ದಂಪತಿಗಳು ನೀಡಿದ್ದು, ಸಾರ್ವಜನಿಕ ಶಾಲೆಗಳು, ಅತ್ಯುತ್ತಮ ವೈರ್‌ಲೆಸ್ ಇಂಟರ್ನೆಟ್ ಸೇವೆಯನ್ನು ಒದಗಿಸುವುದು ಮೊದಲಾದ ಯೋಜನೆಗಳನ್ನು ಇದು ಒಳಗೊಂಡಿದೆ. ಮಕ್ಕಳ ವೈದ್ಯೆಯಾಗಿ ಚಾನ್ ಕಾರ್ಯನಿರ್ವಹಿಸುತ್ತಿರುವ ಸ್ಯಾನ್ ಫ್ರಾನ್ಸಿಸ್ಕೊ ಜನರಲ್ ಹಾಸ್ಪಿಟಲ್‌ಗೂ ದೇಣಿಗೆಯ ಮೊತ್ತ ಹರಿದು ಬಂದಿದೆ.

ಸಮಾಜ ಸೇವೆ

26 ಹರೆಯದಲ್ಲೇ ಸಮಾಜ ಸೇವೆ

ಜುಕರ್‌ಬರ್ಗ್ ತಮ್ಮ 26 ರ ಹರೆಯದಲ್ಲೇ ನೀಡುವಿಕೆ ಸಂಸ್ಥೆಗೆ ಸಹಿಹಾಕಿದ್ದು ಇದರ ಪ್ರಕಾರ ಶ್ರೀಮಂತ ವ್ಯಕ್ತಿ ಅಥವಾ ಕುಟುಂಬ ತಮ್ಮ ಆದಾಯದ ಅರ್ಧದಷ್ಟನ್ನು ಚಾರಿಟಿ ಸಂಸ್ಥೆಗಳಿಗೆ ಜೀವನ ಪರ್ಯಂತ ದಾನ ಮಾಡುವುದಾಗಿದೆ

ಬಹಳಷ್ಟು ಸಮಯ

ಫೇಸ್‌ಬುಕ್ ಸಿಇಒ

ಫೇಸ್‌ಬುಕ್ ಸಿಇಒ ಆಗಿ ಬಹಳಷ್ಟು ಸಮಯ ಮಾರ್ಕ್ ಉಳಿಯಲಿದ್ದಾರೆ.

ನಿಯಂತ್ರಕ ಶೇರ್ ಹೋಲ್ಡರ್

ಉತ್ತಮ ನಿಯಂತ್ರಕ ಶೇರ್ ಹೋಲ್ಡರ್

ಫೇಸ್‌ಬುಕ್‌ನ ಅತ್ಯುತ್ತಮ ಭವಿಷ್ಯಕ್ಕಾಗಿ ಜುಕರ್‌ಬರ್ಗ್ ಒಬ್ಬ ಉತ್ತಮ ನಿಯಂತ್ರಕ ಶೇರ್ ಹೋಲ್ಡರ್ ಎಂದೆನಿಸಿದ್ದಾರೆ ಎಂಬುದು ಕಂಪೆನಿತ ಸಹಮತವಾಗಿದೆ.

ಮುಂದಿನ ಮೂರು ವರ್ಷ

$1 ಬಿಲಿಯನ್ ದೇಣಿಗೆ

ಮುಂದಿನ ಮೂರು ವರ್ಷಗಳಿಗಾಗಿ ಪ್ರತೀ ವರ್ಷವೂ ಜುಕರ್‌ಬರ್ಗ್ ಫೇಸ್‌ಬುಕ್ ಸ್ಟಾಕ್‌ನ $1 ಬಿಲಿಯನ್ ನೀಡುವುದಾಗಿ ಅವರು ಬದ್ಧವಾಗಿದ್ದಾರೆ ಎಂದು ಫೇಸ್‌ಬುಕ್ ತಿಳಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Chief executive officer Mark Zuckerberg and his wife said on Tuesday they will give away 99 per cent of their Facebook shares, currently worth about $45 billion, to a new charity in a letter addressed to their daughter, Max, who was born last week.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot