'ವಿಂಡೋಸ್‌ 10'ಗೆ ಫೇಸ್‌ಬುಕ್‌ನಿಂದ ಅಧಿಕೃತ ಆಪ್‌ ಬಿಡುಗಡೆ!

Written By:

ಫೇಸ್‌ಬುಕ್ ಇತ್ತೀಚೆಗೆ ನಿರಂತರ ಅಪ್‌ಡೇಟ್‌ಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌, ಮೆಸೇಂಜರ್‌, ವಾಟ್ಸಾಪ್‌ಗಳಿಗೆ ತರುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಫೇಸ್‌ಬುಕ್ ವಾಟ್ಸಾಪ್‌ಗೆ ಗೂಢಲಿಪೀಕರಣ ಫೀಚರ್ ಅಭಿವೃದ್ದಿ ಪಡಿಸಿದ ನಂತರ, ಈಗ 'ವಿಂಡೋಸ್‌ 10' ವೇದಿಕೆಗಳಿಗೆ ತನ್ನ ಅಧಿಕೃತ ಅಪ್ಲಿಕೇಶನ್‌ ಅನ್ನು ಬಿಡುಗಡೆ ಮಾಡುತ್ತಿದೆ. ಈ ಬಗ್ಗೆ ಮಾಹಿತಿಯನ್ನು ಮುಂದೆ ಓದಿರಿ.

ನೋಕಿಯಾ 1100; ಬ್ಯಾಕ್‌ ಟು ಸೇಲ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಧಿಕೃತ ಫೇಸ್‌ಬುಕ್‌ ಆಪ್‌

ಅಧಿಕೃತ ಫೇಸ್‌ಬುಕ್‌ ಆಪ್‌

1

ಟೆಕ್ನಾಲಜಿ ಧೈತ್ಯ ಕಂಪನಿ ಮೈಕ್ರೋಸಾಫ್ಟ್‌ ಬಹುದಿನಗಳ ನಂತರ ಅಧಿಕೃತ ಫೇಸ್‌ಬುಕ್‌ ಅಪ್ಲಿಕೇಶನ್‌ ಅನ್ನು ವಿಂಡೋಸ್ 10 ಚಾಲಿತ ವಯಕ್ತಿಕ ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ಫೋನ್‌ಗಳಿಗಾಗಿ ಪಡೆದಿದೆ.

ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ಫೋನ್‌

2

ಈ ಹಿಂದೆ ಫೇಸ್‌ಬುಕ್‌ ಕೇವಲ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಫೇಸ್‌ಬುಕ್‌ ಆಪ್‌ ಅನ್ನು ಅಭಿವೃದ್ದಿಪಡಿಸಿತ್ತು.

ಫೇಸ್‌ಬುಕ್‌

ಫೇಸ್‌ಬುಕ್‌

3

ಫೇಸ್‌ಬುಕ್ ತನ್ನ ಗಮನವನ್ನು 'ವಿಂಡೋಸ್‌ 10' ವೇದಿಕೆ ಕಡೆ ತೋರಿದ್ದ ಕಾರಣ 'ಮೈಕ್ರೋಸಾಫ್ಟ್‌ ವಿಂಡೋಸ್‌ 10'ಗಾಗಿ ಅಪ್ಲಿಕೇಶನ್‌ ಬಿಡುಗಡೆ ಮಾಡಿದೆ ಎಂದು 'windowscentral.com ವರದಿ ಮಾಡಿದೆ.

ಫೇಸ್‌ಬುಕ್‌ನಿಂದ ಅಭಿವೃದ್ದಿಯಾದ ಆಪ್‌

ಫೇಸ್‌ಬುಕ್‌ನಿಂದ ಅಭಿವೃದ್ದಿಯಾದ ಆಪ್‌

4

ಫೇಸ್‌ಬುಕ್‌ ಇಷ್ಟುದಿನ ಹೊಂದಿದ್ದ ಸ್ಮಾರ್ಟ್‌ಫೋನ್‌ಗಳಲ್ಲಿನ ಆಪ್‌ ಅನ್ನು ಮೈಕ್ರೋಸಾಫ್ಟ್‌ ಅಭಿವೃದ್ದಿಪಡಿಸಿತ್ತು. ಆದರೆ ಪ್ರಸ್ತುತದ ಫೇಸ್‌ಬುಕ್ ಅಧಿಕೃತ ಅಪ್ಲಿಕೇಶನ್‌ ಅನ್ನು ಸಾಮಾಜಿಕ ತಾಣ ಧೈತ್ಯ ಫೇಸ್‌ಬುಕ್‌ ಅಭಿವೃದ್ದಿಪಡಿಸಿ, ಪ್ರಕಟಿಸುತ್ತಿದೆ.

'ವಿಂಡೋಸ್‌ 10'

'ವಿಂಡೋಸ್‌ 10'

5

'ವಿಂಡೋಸ್‌ 10' ಮೊಬೈಲ್‌ ಡಿವೈಸ್‌ನಲ್ಲಿನ ಫೇಸ್‌ಬುಕ್‌ ಅಪ್ಲಿಕೇಶನ್‌ ಫೇಸ್‌ಬುಕ್‌ ಬ್ರ್ಯಾಂಡ್, ವಿನ್ಯಾಸ ಸೂಚನೆಗಳು, API ಪ್ರವೇಶವನ್ನು ಕ್ಯಾರಿ ಮಾಡುತ್ತಿದ್ದು, ಇದನ್ನು ಮೈಕ್ರೋಸಾಫ್ಟ್‌ ಅಭಿವೃದ್ದಿ ಪಡಿಸಿದೆ.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಫೇಸ್‌ಬುಕ್‌

ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Facebook is finally releasing an official app for Windows 10. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot