ನೋಕಿಯಾ 1100; ಬ್ಯಾಕ್‌ ಟು ಸೇಲ್‌

Written By:

ನೋಕಿಯಾ 1100, ಬೇಸಿಕ್‌ ಜಿಎಸ್ಎಂ ಮೊಬೈಲ್‌. ಮೊಬೈಲ್‌ ಮಾರುಕಟ್ಟೆಯಲ್ಲಿ 2011 ರಲ್ಲಿ 250 ದಶಲಕ್ಷ ಜನರು ಖರೀದಿಸಿದ ಪ್ರಖ್ಯಾತ ಮೊಬೈಲ್‌.

ಈಗಲೂ ಸಹ ಕೆಲವರಿಗೆ 'ನೋಕಿಯಾ 1100' ಸೆಟ್‌ ಅಂದ್ರೆ ಎಲ್ಲಿಲ್ಲದ ಪ್ರೀತಿ. ಯಾಕಂದ್ರೆ ಎಲ್ಲಾ ರೀತಿಯಿಂದಲೂ ಉತ್ತಮ ಗುಣಮಟ್ಟದ್ದು. ನೋಕಿಯಾ ಕಂಪನಿ ಮಾರುಕಟ್ಟೆಯಲ್ಲಿ ಸೋತರು ಸಹ, 'ನೋಕಿಯಾ 1100' ಮೊಬೈಲ್‌ ಮಾತ್ರ ಇಂದಿಗೂ ಎಲ್ಲರನ್ನೂ ಆಕರ್ಷಿಸುತ್ತದೆ. ಒಂದೇ ದಿನದೊಳಗೆ ಬಹುಬೇಗ ಬ್ಯಾಟರಿ ಪವರ್‌ ಖಾಲಿಯಾಗುವ ಸ್ಮಾರ್ಟ್‌ಫೋನ್‌ಗಳ ಜೊತೆಗೆ 3 ರಿಂದ 4 ದಿನಗಳ ಕಾಲ ಬ್ಯಾಟರಿ ಬಾಳಿಕೆ ಬರುವ 'ನೋಕಿಯಾ 1100' ಸೆಟ್‌ ಜೊತೆಗಿದ್ರೆ ಅನುಕೂಲ ಅಲ್ವಾ..

ಎಲ್ಲರಿಗೂ ಆಶ್ಚರ್ಯವಾಗೋ ವಿಷಯ ಅಂದ್ರೆ 'ನೋಕಿಯಾ 1100' ಸೆಟ್‌ ಈಗ ಬ್ಯಾಕ್‌ ಟು ಸೇಲ್‌. ಮಾರಾಟಗಾರರು ನವೀಕರಿಸಿದ್ದು, ನಿಮಗೆನಾದ್ರೂ 'ನೋಕಿಯಾ 1100' ಮೊಬೈಲ್ ಬೇಕಾದ್ರೆ ಹಾಗೆ ಒಮ್ಮೆ ಇಂಟರ್ನೆಟ್‌ನಲ್ಲಿ 'Nokia 1100' ಎಂದು ಟೈಪ್ ಮಾಡಿ ಆನ್‌ಲೈನ್‌ ಮೂಲಕ ಖರೀದಿಸಬಹುದು. ವಾರಂಟಿ ಸಹ ನೀಡಲಾಗುತ್ತಿದೆ. ಆದ್ರೆ ಖರೀದಿಸುವ ಮುನ್ನ ಲೇಖನದ ಸ್ಲೈಡರ್‌ನಲ್ಲಿನ ಮಾಹಿತಿಗಳನ್ನು ಎಚ್ಚರದಿಂದ ಓದಿ ತಿಳಿಯಿರಿ.

ನೋಕಿಯಾ ಫೋನ್ಸ್‌: 'ಓಲ್ಡ್‌ ಈಸ್‌ ಗೋಲ್ಡ್‌ ' ಏಕೆ ಗೊತ್ತೇ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 1100

ನೋಕಿಯಾ 1100

1

''ನೋಕಿಯಾ 1100' ಮೊಬೈಲ್‌ಗೆ ಹಲವು ದೇಶಗಳು ಈಗ ಹೊಸ ಲುಕ್ ನೀಡಿ ಮಾರುಕಟ್ಟೆಗೆ ತರಲು ಯೋಜನೆ ಸಿದ್ದಪಡಿಸಿವೆ. ಆದರೆ ಹಳೆಯ ''ನೋಕಿಯಾ 1100' ಮೊಬೈಲ್‌ಗಳನ್ನು ಕಂಪನಿ ಸರ್ವೀಸ್ ಮಾಡಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಸಿದ್ದಪಡಿಸಿದೆ.

ನೋಕಿಯಾ 1100

ನೋಕಿಯಾ 1100

2

2011 ರಲ್ಲಿ 250 ಕ್ಕೂ ಹೆಚ್ಚು ಜನರು ಖರೀದಿಸಿದ್ದ ಈ ಸ್ಮಾರ್ಟ್‌ಫೋನ್‌, ಹಲವರಿಗೆ ಈಗಲೂ ಅಚ್ಚುಮೆಚ್ಚು. ಆದರೆ ಖರೀದಿಸಲು ಎಲ್ಲೂ ಸಿಗೋದಿಲ್ಲವಲ್ಲ ಎಂದು ಕೊಂಡಿದ್ದಾರೆ. ಆದ್ರೆ ಆ ಚಿಂತೆ ಬಿಟ್ಟು ಆನ್‌ಲೈನ್‌ ಮೂಲಕ ''ನೋಕಿಯಾ 1100' ಖರೀದಿಸಬಹುದಾಗಿದೆ.

ಫೀಚರ್‌ ಏನ್‌ ಗೊತ್ತಾ?

ಫೀಚರ್‌ ಏನ್‌ ಗೊತ್ತಾ?

3

ಬ್ಯಾಟರಿ ಬಾಳಿಕೆ ಪಕ್ಕಾ 3 ದಿನ ಗ್ಯಾರಂಟಿ. ಇಂದು ಒಮ್ಮೆ ಪೂರ್ಣವಾಗಿ ಬ್ಯಾಟರಿ ಚಾರ್ಜ್‌ ಮಾಡಿದ್ದಲ್ಲಿ 3 ರಿಂದ 4 ದಿನ ಬ್ಯಾಟರಿ ಬಾಳಿಕೆ ಬರುತ್ತದೆ. ಸ್ಮಾರ್ಟ್‌ಫೋನ್‌ಗಳ ರೀತಿ ಒಂದು ದಿನದೊಳಗೆ ಪುನಃ ಚಾರ್ಜ್‌ ಮಾಡುವ ಅಗತ್ಯವಿಲ್ಲ.

ನೀರಿಗ್‌ ಬಿದ್ರು ವರ್ಕ್‌ ಆಗುತ್ತೆ!

ನೀರಿಗ್‌ ಬಿದ್ರು ವರ್ಕ್‌ ಆಗುತ್ತೆ!

4

ಆಕಸ್ಮಿಕವಾಗಿ ''ನೋಕಿಯಾ 1100' ನೀರಿಗ್‌ ಬಿದ್ರೆ ಪರವಾಗಿಲ್ಲ. ಹಾಗೆ ಸ್ವಲ್ಪ ಸಮಯಗಳ ಕಾಲ ಓಪನ್‌ ಮಾಡಿ ಬಿಸಿಲಿಗೆ ಇಟ್ಟು ಮತ್ತೆ ಉಪಯೋಗಿಸಲು ಅವಕಾಶವಿರುತ್ತದೆ.

ಅನ್‌ಲಿಮಿಟೆಡ್‌‌ ಸ್ಪೀಡ್‌ ಟೆಕ್ಸ್ಟಿಂಗ್‌

ಅನ್‌ಲಿಮಿಟೆಡ್‌‌ ಸ್ಪೀಡ್‌ ಟೆಕ್ಸ್ಟಿಂಗ್‌

5

ನೀವು ಎಷ್ಟು ವೇಗವಾಗಿ ಟೈಪ್‌ ಮಾಡುವ ಸಾಮರ್ಥ್ಯವಿದೆಯೋ ಅಷ್ಟು ವೇಗವಾಗಿ ಟೈಪ್‌ ಮಾಡಲು ಉತ್ತಮ ಕೀಪ್ಯಾಡ್‌ ಹೊಂದಿದೆ.

ಫ್ಲಾಶ್‌ ಲೈಟ್‌

ಫ್ಲಾಶ್‌ ಲೈಟ್‌

6

ರಾತ್ರಿ ವೇಳೆ ಬೆಳಕಿಗಾಗಿ ಫ್ಲಾಶ್‌ ಲೈಟ್ ಅನ್ನು 'ನೋಕಿಯಾ 1100' ಮೊಬೈಲ್‌ನಲ್ಲಿ ಇನ್‌ಬಿಲ್ಟ್‌ ಮಾಡಲಾಗಿದೆ.

ಫೀಚರ್‌ಗಳು

ಫೀಚರ್‌ಗಳು

7

ಅಲಾರಂ ಕ್ಲಾಕ್‌, ಸ್ಟಾಪ್‌ವಾಚ್‌, ಕ್ಯಾಲ್ಕುಲೇಟರ್‌, ಕಂಪೋಸರ್‌, ಸ್ಕ್ರೀನ್‌ಸೇವರ್‌ ಫೀಚರ್‌ಗಳಿವೆ.

ಡಸ್ಟ್‌ಪ್ರೂಫ್‌ ಕೀಪ್ಯಾಡ್‌

ಡಸ್ಟ್‌ಪ್ರೂಫ್‌ ಕೀಪ್ಯಾಡ್‌

8

ಇತರೆ ಮೊಬೈಲ್‌ಗಳ ರೀತಿಯಲ್ಲಿ ಕೀಪ್ಯಾಡ್‌ ಅನ್ನು ಆಗಾಗ ಕ್ಲೀನ್‌ ಮಾಡುವ ಅಗತ್ಯವಿಲ್ಲ. ಯಾಕಂದ್ರೆ ಕೀಪ್ಯಾಡ್‌ ಡಸ್ಟ್‌ಪ್ರೂಫ್‌, ವಾಟರ್‌ ಪ್ರೂಫ್‌ ಸಹ ಆಗಿದ್ದು, ನೀರನ್ನು ಸಹ ತೆಗೆದುಕೊಳ್ಳುವುದಿಲ್ಲ.

ಗೇಮ್ಸ್‌

ಗೇಮ್ಸ್‌

9

ಸ್ನೇಕ್‌ ಮತ್ತು ಸ್ಪೇಸ್‌ ಇಂಪ್ಯಾಕ್ಟ್‌ ಎಂಬ ಎರಡು ಗೇಮ್‌ಗಳಿವೆ. ಡೈನಾಮಿಕ್‌ ಪೋನ್‌ಬುಕ್‌ ಮೆಮೊರಿ ಸಹ ಇದೆ.

 ಖರೀದಿ ಮತ್ತು ವಾರಂಟಿ

ಖರೀದಿ ಮತ್ತು ವಾರಂಟಿ

10

eBayನಲ್ಲಿ 'ನೋಕಿಯಾ 1100' ಮೊಬೈಲ್‌ ಖರೀದಿಸಲು ಲಭ್ಯವಿದ್ದು, ಮಾರಾಟಗಾರರು ನವೀಕರಿಸಿದ ಮೊಬೈಲ್‌ಗಳಿಗೆ ವಾರಂಟಿಯನ್ನು ಸಹ ನೀಡಲಾಗುತ್ತದೆ. ಒಂದೇ ದಿನಕ್ಕೆ ಬ್ಯಾಟರಿ ಚಾರ್ಜ್‌ ಖಾಲಿಯಾಗುವ ಸ್ಮಾರ್ಟ್‌ಫೋನ್‌ಗಳ ಜೊತೆಗೆ ''ನೋಕಿಯಾ 1100' ಇಟ್ಟುಕೊಂಡಿದ್ರೆ ಅನುಕೂಲ ಹೆಚ್ಚು ಅಲ್ವಾ.....

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Nokia 1100; Back to Sale with low price. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot