ಭಾರತದ ಗಡಿ ಕಾಯಲಿದ್ದಾರೆ ರೊಬೊಟ್‌ ಸೈನಿಕರು.!

Posted By:

ರೊಬೊಟ್‌ ಸೈನಿಕರು ಇನ್ನು ಮುಂದೆ ಭಾರತದ ಗಡಿಯನ್ನು ಕಾಯಲಿದ್ದಾರೆ. ಶತ್ರುಗಳ ಮೇಲೆ ಹೋರಾಡಲು ಮಾನವ ರಹಿತ ಸೈನಿಕರನ್ನು ಸೃಷ್ಟಿಸುವ ಯೋಜನೆಗೆ ಭಾರತ ಮುಂದಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ವೈರಿ ಮತ್ತು ಸ್ನೇಹಿತನ ವೈತ್ಯಾಸ ತಿಳಿದುಕೊಳ್ಳುವ, ಅಪಾರ ಬುದ್ದಿಯನ್ನು ಹೊಂದಿರುವ ರೊಬೊಟ್‌ ಅಭಿವೃದ್ಧಿ ಪಡಿಸಲಾಗುವುದು ಎಂದು ಡಿಆರ್‌ಡಿಒ ಮುಖ್ಯಸ್ಥ ಅವಿನಾಶ್‌ ಚಂದರ್‌ ತಿಳಿಸಿದ್ದಾರೆ.

ಭಾರತದ ಗಡಿ ಕಾಯಲಿದ್ದಾರೆ ರೊಬೊಟ್‌ ಸೈನಿಕರು.!

ಈಗಾಗಲೇ ಕೆಲವು ದೇಶಗಳು ರೊಬೋಟ್‌ ಸೈನಿಕರನ್ನು ಅಭಿವೃದ್ಧಿ ಪಡಿಸಲು ಮುಂದಾಗಿವೆ. ಭೂಮಿ ಮೇಲೆ ಮತ್ತು ಆಕಾಶದಲ್ಲಿ ರೊಬೋಟ್‌ಗಳು ಯುದ್ಧ ಮಾಡುವುದು ಭವಿಷ್ಯದ ಸಮರ ತಂತ್ರವಾಗಲಿದೆ ಹೀಗಾಗಿ ಭಾರತವು ಈ ನಿಟ್ಟಿನಲ್ಲಿ ಈ ರೊಬೊಟ್‌ ಅಭಿವೃದ್ಧಿಗೆ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.

ಬಾಂಬ್‌ ನಿಷ್ಕ್ರಿಯಗೊಳಿಸುವ ಕೆಲಸಗಳಿಗೆ ರೊಬೊಟ್‌ನ್ನು ಕೆಲವು ದೇಶಗಳು ಬಳಸುತ್ತಿವೆ. ಭಾರತದ ರೊಬೊಟ್‌ ಸೈನಿಕರು ಇದಕ್ಕೂ ಒಂದು ಹೆಜ್ಜೆ ಮುಂದಿರುತ್ತಾರೆ. ಆರಂಭದಲ್ಲಿ ರೊಬೊಟ್‌ ಯೋಧರಿಗೆ ವೈರಿ ಸೈನಿಕರನ್ನು ತೋರಿಸಿ ಕೊಡಬೇಕಾಗುತ್ತದೆ. ನಂತರ ರೊಬೊಟ್‌ ಸೈನಿಕರು ಶತ್ರು ಸೈನಿಕರನ್ನು ಗುರುತಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಲಿದ್ದಾರೆ ಎಂದು ಚಂದರ್‌ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ರೊಬೊಟ್‌ ಸೈನಿಕರ ಕುರಿತ ಹೆಚ್ಚಿನ ಸುದ್ದಿಗಾಗಿ ಈ ಸುದ್ದಿಗಳನ್ನು ಓದಿ:

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot