ನಿಮ್ಮ ಕನಸಿನ ಸ್ಮಾರ್ಟ್‌ಫೋನ್‌ನಲ್ಲಿ ಈ ಅಂಶಗಳು ಇರಬೇಕೇ?

By Shwetha
|

ಹೆಚ್ಚಿನ ಆಂಡ್ರಾಯ್ಡ್ ಗ್ರಾಹಕರು ಸ್ಮಾರ್ಟ್‌ಫೋನ್ ತಯಾಕರಿಂದ ವಿಭಿನ್ನ ಅಂಶಗಳನ್ನು ಬಯಸುತ್ತಾರೆ. ಆದರೆ ಬಳಕೆದಾರ ಬಯಸುವ ಪ್ರತಿಯೊಂದನ್ನು ಫೋನ್‌ನಲ್ಲಿ ಅಳವಡಿಸುವುದು ಅಷ್ಟೊಂದು ಸುಲಭವಲ್ಲ. ಅದಾಗ್ಯೂ ಮಾರುಕಟ್ಟೆಗೆ ಕಾಲಿಡುತ್ತಿರುವ ಹೆಚ್ಚಿನ ಫೋನ್‌ಗಳು ಇಂದು ಕೆಲವೊಂದು ಬಳಕೆದಾರ ಬೇಡಿಕೆಗಳಿಗೆ ಅನುಗುಣವಾಗಿ ಇದೆ.

ನಿಮ್ಮ ಕನಸಿನ ಸ್ಮಾರ್ಟ್‌ಫೋನ್‌ನಲ್ಲಿ ಈ ಅಂಶಗಳು ಇರಬೇಕೇ?

ಹಾಗಿದ್ದರೆ ನಿಮ್ಮ ಕನಸಿನ ಫೋನ್ ನಿಮ್ಮ ಏನೆಲ್ಲಾ ಅವಶ್ಯಕತೆಗಳನ್ನು ಪೂರೈಸುವಂತೆ ಇರಬೇಕು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೋಡಲಿರುವೆವು. ಹೌದು ನಿಮ್ಮ ಮನಸ್ಸಿಗೆ ಹಿಡಿಸುವ ಫೋನ್‌ನಲ್ಲಿ ಏನೆಲ್ಲಾ ಇರಬೇಕು ಎಂಬುದನ್ನೇ ಕೆಳಗಿನ ಸ್ಲೈಡರ್ ಹೊಂದಿದ್ದು ಅವುಗಳನ್ನು ಪರಿಶೀಲಿಸಿ.

ಉತ್ತಮ ವಿನ್ಯಾಸ, ಅತ್ಯುತ್ತಮ ಹಾರ್ಡ್‌ವೇರ್

ನಿಮ್ಮ ಕನಸಿನ ಸ್ಮಾರ್ಟ್‌ಫೋನ್‌ನಲ್ಲಿ ಈ ಅಂಶಗಳು ಇರಬೇಕೇ?

ಉತ್ತಮ ನೋಟವಿರುವ, ಗಂಭೀರವಾಗಿರುವ ಸ್ಮಾರ್ಟ್‌ಫೋನ್‌ಗಳ ತಯಾರಿಯಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್‌ ತಯಾರಕರು ಗಮನವೀಯುತ್ತಿದ್ದಾರೆ. ಐಫೋನ್ ವಿನ್ಯಾಸಕ್ಕೆ ಮಾರುಹೋಗಿ ಅದನ್ನು ಕೊಳ್ಳುವ ಬಳಕೆದಾರರಿದ್ದರೆ ಇನ್ನು ಕೆಲವರು ಸ್ಯಾಮ್‌ಸಂಗ್ ನೋಟಕ್ಕೆ ಮರುಳಾಗುತ್ತಾರೆ. ಇನ್ನು ವಿನ್ಯಾಸದ ಜೊತೆಗೆ ಒಳ್ಳೆಯ ಹಾರ್ಡ್‌ವೇರ್ ಅನ್ನು ಡಿವೈಸ್ ಒಳಗೊಂಡಿರಬೇಕು. ಸ್ಲಿಮ್ ನೋಟದೊಂದಿಗೆ ಪರಿಣಾಮಕಾರಿಯಾಗಿರುವ ಹಾರ್ಡ್‌ವೇರ್ ಕೂಡ ಫೋನ್ ಬಾಳ್ವಿಕೆಗೆ ಅತಿ ಮುಖ್ಯ.

ದೀರ್ಘ ಬ್ಯಾಟರಿ ಬಾಳ್ವಿಕೆ

ಇನ್ನು ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿ ಹೆಚ್ಚು ಮುಖ್ಯವಾಗಿದ್ದು ದೀರ್ಘ ಸಮಯದ ಬ್ಯಾಟರಿ ಫೋನ್ ಜೀವಾಳವಾಗಿದೆ. ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಕರು ಈ ನಿಟ್ಟಿನಲ್ಲಿ ಗಮನವೀಯುತ್ತಿದ್ದು ಯಾವುದೇ ಫೋನ್ ದೀರ್ಘ ಸಮಯದ ಬ್ಯಾಟರಿಗೆ ಮಹತ್ವವೀಯುತ್ತಿದೆ ಎಂದಾದಲ್ಲಿ ಅದರ ಮಾರುಕಟ್ಟೆ ಮೌಲ್ಯ ಅಧಿಕವಾಗಿರುತ್ತದೆ.

ಇದನ್ನೂ ಓದಿ: ಫೋನ್‌ನ ಬ್ಯಾಟರಿ ಬಾಳ್ವಿಕೆ ಉಳಿಸಲು ಟಾಪ್ ಸಲಹೆಗಳು

ಸಾಫ್ಟ್‌ವೇರ್‌ನೊಂದಿಗೆ ಉತ್ತಮ ಬಳಕೆದಾರ ಅನುಭವ

ನಿಮ್ಮ ಕನಸಿನ ಸ್ಮಾರ್ಟ್‌ಫೋನ್‌ನಲ್ಲಿ ಈ ಅಂಶಗಳು ಇರಬೇಕೇ?

ನಿಮ್ಮ ಫೋನ್ ಉತ್ತಮ ಬಳಕೆದಾರ ಅನುಭವವನ್ನು ನೀಡುತ್ತಿದೆಯೇ ಎಂಬುದನ್ನು ನೀವು ಪರಿಶೀಲಿಸುವುದು ಅತ್ಯಗತ್ಯವಾಗಿದೆ. ಸಾಫ್ಟ್‌ವೇರ್ ಬಳಕೆಯ ಜೊತೆಗೆ ಬಳಕೆದಾರ ಅನುಭವ ಕೂಡ ಅತಿಮುಖ್ಯವಾಗಿದೆ. ಬಗ್ ಫಿಕ್ಸಿಂಗ್ ವೈಶಿಷ್ಟ್ಯತೆಯನ್ನು ಫೋನ್ ಹೊಂದಿರುವುದು ಅತಿ ಮುಖ್ಯವಾಗಿದೆ.

ಅತಿ ಗಂಭೀರ ಕ್ಯಾಮೆರಾ

ಡಿಎಸ್‌ಎಲ್‌ಆರ್‌ಗಿಂತಲೂ ಅತ್ಯುತ್ತಮವಾಗಿರುವ ಕ್ಯಾಮೆರಾವನ್ನು ನಿಮ್ಮ ಫೋನ್ ಹೊಂದಿರಲೇಬೇಕು. ಅತಿ ಕಡಿಮೆ ಬೆಳಕಿರುವಲ್ಲೂ ಉತ್ತಮ ಫೋಟೋವನ್ನು ಇದು ನೀಡುವಂತಿರಬೇಕು. ನಿಮ್ಮ ಫೋನ್ ಬರಿಯ ಕ್ಯಾಮೆರಾ ಕೂಡ ಆಗಿರಬಾರದು ಸ್ಮಾರ್ಟ್‌ಫೋನ್ ಕೂಡ ಆಗಿರಬೇಕು.

ಇದನ್ನೂ ಓದಿ: ಉತ್ತಮ ಗುಣಮಟ್ಟದ ಫೋಟೋಗಾಗಿ ಟಾಪ್ ಫೋನ್ಸ್

ಮಾರಾಟ ಸೇವೆಯ ನಂತರ

ನಿಮ್ಮ ಕನಸಿನ ಸ್ಮಾರ್ಟ್‌ಫೋನ್‌ನಲ್ಲಿ ಈ ಅಂಶಗಳು ಇರಬೇಕೇ?

ಕೆಲವೊಂದು ಫೋನ್‌ಗಳು ಉತ್ತಮ ಬ್ರ್ಯಾಂಡ್ ಅನ್ನು ಹೊಂದಿದ್ದರೂ ಮಾರುಕಟ್ಟೆಯಲ್ಲಿ ಮಾರಾಟವನ್ನು ಕಾಣುತ್ತಿಲ್ಲ. ಇವುಗಳು ಎಡವುದು ಸೇವೆ ಮತ್ತು ಬೆಂಬಲ ನೀಡುವಲ್ಲಿ. ಇನ್ನು ಆಪಲ್ ಎಂಬುದು ಬಳಕೆದಾರರಿಗೆ ಭರವಸೆಯ ಸಂಕೇತವಾಗಿದೆ. ಹೀಗೆಯೇ ನಿಮ್ಮ ಫೋನ್ ಬ್ರ್ಯಾಂಡ್ ಬಳಕೆದಾರರಿಗೆ ಭರವಸೆಯನ್ನು ನೀಡಬೇಕು. ಹೆಚ್ಚು ದುಡ್ಡು ನೀಡಿದರೂ ಆ ಫೋನ್ ಖಾತ್ರಿಯನ್ನು ನೀಡುವುದಿಲ್ಲ ಎಂದಾದಲ್ಲಿ ಅದು ವ್ಯರ್ಥ.

Most Read Articles
Best Mobiles in India

English summary
Many Android consumers like myself demand different things from smartphone makers but getting everything you want is not easy. Most phones on the market today come with some compromise. Here I are the few things that we believe make up a good smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more