ಚೀನಾದ ಅತಿದೊಡ್ಡ 'ಎಥಿಕಲ್ ಹ್ಯಾಕಿಂಗ್' ಗ್ರೂಪ್‌ನ 10 ಹ್ಯಾಕರ್ ಅರೆಸ್ಟ್

Written By:

ಚೀನಾ ಇತ್ತೀಚೆಗೆ 'ಎಥಿಕಲ್ ಹ್ಯಾಕಿಂಗ್‌' ಸಮುದಾಯದ 'WoonYun' ಸ್ಥಾಪಕನನ್ನು ಅರೆಸ್ಟ್‌ ಮಾಡಿದೆ. ಇವರ ಜೊತೆಗೆ ಇತರೆ 9 ಬಿಳಿ ಟೋಪಿ ಹ್ಯಾಕರ್‌ಗಳನ್ನು ಅರೆಸ್ಟ್‌ ಮಾಡಿದೆ.

ಚೀನಾದ ಅತಿದೊಡ್ಡ 'ಎಥಿಕಲ್ ಹ್ಯಾಕಿಂಗ್' ಗ್ರೂಪ್‌ನ 10 ಹ್ಯಾಕರ್ ಅರೆಸ್ಟ್

'WoonYun' ಎಂಬುದು ಚೀನಾದಲ್ಲಿ 5,000 ಉದ್ಯೋಗಿಗಳನ್ನು ಹೊಂದಿರುವ ಅತಿದೊಡ್ಡ ಬಿಳಿ ಟೋಪಿ ಸಮುದಾಯ. ಇದು ಬಿಳಿ ಟೋಪಿ ಹ್ಯಾಕರ್‌ಗಳ ಗುಂಪು ಹ್ಯಾಕರ್‌ಗಳ ದೊಡ್ಡ ಸಮುದಾಯವಾಗಿದ್ದು, ಕಂಪನಿಯು ಇತರೆ ಕಂಪನಿಗಳಿಗೆ ಪರಿಶೀಲನೆ ಮೂಲಕ ಹೊಸ ಸುರಕ್ಷತೆಗಳನ್ನು ನೀಡುತ್ತಾ ರಕ್ಷಣೋಪಾಯಗಳನ್ನು ಬಲಪಡಿಸುತ್ತಾ ಹೆಚ್ಚಿನ ಸಹಾಯ ಮಾಡುತ್ತಿತ್ತು. ಈಗ 'WoonYun' ಏಥಿಕಲ್‌ ಹ್ಯಾಕಿಂಗ್ ಕಂಪನಿಯ ಸ್ಥಾಪಕ 'ಫಾಂಗ್‌ ಕ್ಸಿಯೋಡನ್'‌ ಸೇರಿದಂತೆ ಇತರೆ 9 ಬಿಳಿ ಟೋಪಿ ಹ್ಯಾಕರ್‌ಗಳನ್ನು ಬಂಧಿಸಲಾಗಿದೆ.

ಪ್ರಪಂಚದ ಬ್ಯೂಟಿಪುಲ್‌ ಮಹಿಳಾ ಹ್ಯಾಕರ್‌ಗಳು ಯಾರು ಗೊತ್ತೇ?

ಯಾವುದೇ ನೋಟೀಸ್‌ ಇಲ್ಲದೇ ಪೊಲೀಸರಿಂದ 'WoonYun' ಎಥಿಕಲ್‌ ಹ್ಯಾಕಿಂಗ್‌ ಗ್ರೂಪ್‌ನ 10 ಹಿರಿಯ ಅಧಿಕಾರಿಗಳು ಮತ್ತು ಸ್ಥಾಪಕ ಫಾಂಗ್‌ ಕ್ಸಿಯೋಡನ್ ಅನ್ನು ಬಂಧಿಸಲಾಗಿದೆ. ಈ ಘಟನೆಯು ತಕ್ಷಣದಲ್ಲಿ ಶೀಘ್ರವಾಗ ನಡೆದಿದೆ. ಅಲ್ಲದೇ ಆಡಳಿತ ವ್ಯವಸ್ಥೆಯ ಪ್ರಕಾರ ಯಾವುದೇ ನೋಟಿಸ್‌ ಸಹ ಬಂದಿಲ್ಲ ಎಂದು WoonYun ಸದಸ್ಯರು ತಿಳಿಸಿದ್ದಾರೆ.

ಚೀನಾದ ಅತಿದೊಡ್ಡ 'ಎಥಿಕಲ್ ಹ್ಯಾಕಿಂಗ್' ಗ್ರೂಪ್‌ನ 10 ಹ್ಯಾಕರ್ ಅರೆಸ್ಟ್

ಅರಸ್ಟ್‌ ಆಗುವ ಹಿಂದಿನ ದಿನ WoonYun ಕಂಪನಿಯ ಅಧಿಕೃತ ವೆಬ್‌ಸೈಟ್‌ ಅಮಾನತುಗೊಂಡಿತು, ಫಾಂಗ್‌ ಕ್ಸಿಯೋಡನ್‌ ತಮ್ಮ ವಿಚಾಟ್‌ ಖಾತೆ ಅಪ್‌ಡೇಟ್‌ ಅನ್ನು ನಿಲ್ಲಿಸಿದ್ದರು. ಜುಲೈ 20 ರಂದು ವೆಬ್‌ಸೈಟ್‌ ದುರಸ್ಥಿಯಲ್ಲಿದ್ದು, ಶೀಘ್ರದಲ್ಲಿ ಮರಳುವ ಬಗ್ಗೆ ಹೇಳಿತ್ತು. ಆದರೆ ವೆಬ್‌ಸೈಟ್‌ನ ಈ ಘಟನೆಯು ಸಹ ನೆಡೆದಿರುವುದು ಸ್ಥಾಪಕರ ಬಂಧನಕ್ಕಿಂತ ಮೊದಲು.

ಉನ್ನತ ಮೂಲಗಳ ಪ್ರಕಾರ 'WoonYun' ವೆಬ್‌ಸೈಟ್‌ ಅನ್ನು ಕಂಪನಿಯ ಸದಸ್ಯರೇ ಸಮಸ್ಯೆ ಪರಿಹರಿಸಲು ಅಮಾನತು ಮಾಡಿದ್ದರು ಎಂಬುದನ್ನು ತಿಳಿಯಲಾಗಿದ್ದು, ಆದರೆ WoonYun ಸ್ಥಾಪಕ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವುದಕ್ಕೆ ಕಾರಣ ಮಾತ್ರ ನಿಗೂಢವಾಗಿದೆ.

17 ವರ್ಷದ ಬಾಲಕನಿಂದ ಕಂಪ್ಯೂಟರ್‌ ಹ್ಯಾಕ್: ಗ್ರೇಡ್‌ ಬದಲು

 

 

Read more about:
English summary
China recently arrested the founder of WooYun ethical hacking group along with 9 other white hat hackers. Let me tell you WooYun is one of the largest group of ethical hackers.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot