ನವೀಕರಿಸಬಹುದಾದ ಇಂಧನ ಮೂಲಗಳತ್ತ ಭಾರತದ ಹೆಜ್ಜೆ

Posted By:

ಭಾರತ ನಿಧನವಾಗಿ ನವೀಕರಿಸಬಹುದಾದ ಶಕ್ತಿಯತ್ತ ಹಜ್ಜೆ ಹಾಕಲು ಆರಂಭಿಸಿದೆ. ಇಲ್ಲಿಯವರೆಗೆ ಜಲಾಶಯಗಳಿಂದ ವಿದ್ಯುತ್‌ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡುತ್ತಿರುವ ಸರ್ಕಾರಗಳು ಈಗ ಇದರ ಜೊತೆಗೆ ಸೌರಶಕ್ತಿ,ಪವನ ಶಕ್ತಿ, ಕಾಲುವೆಯಿಂದ ವಿದ್ಯುತ್‌ ಉತ್ಪಾದನೆಗೆ ಯೋಜನೆ ಆರಂಭಿದೆ.

ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಈಗಾಗಲೇ ಈ ಯೋಜನೆಗಳನ್ನು ಆರಂಭಿಸಿ ವಿದ್ಯುತ್‌ ಉತ್ಪಾದಿಸುತ್ತಿದ್ದು ಭಾರತ ಈಗ ಎಚ್ಚೆತ್ತಿದ್ದು ಮುಂದಿನ ವರ್ಷ‌ಗಳಲ್ಲಿ ಈ ಯೋಜನೆಗಳಿಂದ ಉತ್ಪಾದನೆಯಾದ ವಿದ್ಯುತ್‌ ನಮಗೆಲ್ಲ ದೊರೆಯಲಿದೆ.ಹೀಗಾಗಿ ಭಾರತ ಸರ್ಕರದ ಮಹತ್ವಕಾಂಕ್ಷಿ ಯೋಜನೆಗಳು ಮತ್ತು ಈಗಾಗಲೇ ರಾಜ್ಯ ಸರ್ಕಾರ ಸ್ಥಾಪಿಸಿರುವ ಯೋಜನೆಗಳ ಕಿರು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಜಗತ್ತಿನ ಪ್ರಥಮ ಸೋಲಾರ್‌ ವಿಮಾನ ಹೇಗಿದೆ ನೋಡಿದ್ದೀರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ರಾಜಸ್ತಾನದಲ್ಲಿ ವಿಶ್ವದ ದೊಡ್ಡ ಸೋಲಾರ್‌ ಘಟಕ ಸ್ಥಾಪನೆ

ರಾಜಸ್ತಾನದಲ್ಲಿ ವಿಶ್ವದ ದೊಡ್ಡ ಸೋಲಾರ್‌ ಘಟಕ ಸ್ಥಾಪನೆ

ನವೀಕರಿಸಬಹುದಾದ ಇಂಧನ ಮೂಲಗಳತ್ತ ಭಾರತದ ಹೆಜ್ಜೆ


ರಾಜಸ್ಥಾನ ಸಂಭಾರ್‌ ಸರೋವರ ಬಳಿ ವಿಶ್ವದ ದೊಡ್ಡ ಸೋಲಾರ್‌ ಘಟಕ ಸ್ಥಾಪಿಸಲು ಸರ್ಕಾರ ಮುಂದಾಗಿದೆ.4,000 ಮೇಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುವ ಯೋಜನೆ ಇದಾಗಿದ್ದು,ಸುಮಾರು 23 ಸಾವಿರ ಎಕರೆ ಪ್ರದೇಶದಲ್ಲಿ ಈ ಸೌರ ಘಟಕ ಸ್ಥಾಪನೆಯಾಗಲಿದೆ.ಐದು ಸಾರ್ವ‌ಜನಿಕ ಕಂಪೆನಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದು,2022ಕ್ಕೆ ಈ ಯೋಜನೆ ಪೂರ್ಣ‌ಗೊಳ್ಳಲಿದೆ. ಪೂರ್ಣ‌ಗೊಂಡ ಬಳಿಕ ವಾರ್ಷಿಕವಾಗಿ 6 ಸಾವಿರ ದಶಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗಲಿದೆ.

 ಹಸಿರು ಸಂಪತ್ತು ಕಾರಿಡಾರ್:

ಹಸಿರು ಸಂಪತ್ತು ಕಾರಿಡಾರ್:

ನವೀಕರಿಸಬಹುದಾದ ಇಂಧನ ಮೂಲಗಳತ್ತ ಭಾರತದ ಹೆಜ್ಜೆ


ಭಾರತದ ಏಳು ರಾಜ್ಯಗಳಲ್ಲಿ 7.9 ಶತಕೋಟಿ ಡಾಲರ್‌ ವೆಚ್ಚದ ನವೀಕರಿಸಬಹುದಾದ ಶಕ್ತಿಯಿಂದ ವಿದ್ಯುತ್‌ ಉತ್ಪಾದಿಸಲು ಸರ್ಕಾರ ಮುಂದಾಗಿದೆ.ದಕ್ಷಿಣ ವಿದ್ಯುತ್‌ ಪ್ರಸರಣ ಗ್ರಿಡ್‌ ಅನ್ನು ನ್ಯಾಷನಲ್‌ ಪವರ್‌ ಗ್ರಿಡ್‌ ಜೊತೆ ಮುಂದಿನ ಜನವರಿ ಒಳಗೆ ಸೇರ್ಪಡೆ ಮಾಡಲು ಈ ಕಾರಿಡಾಡ್‌‌ ಆರಂಭಿಸುತ್ತಿದ್ದು, 5-6 ವರ್ಷದಲ್ಲಿ ಈ ಯೋಜನೆ ಪೂರ್ಣ‌ಗೊಳ್ಳಲ್ಲಿದೆ.ವಿಶ್ವ ಬ್ಯಾಂಕ್‌‌ ಏಷಿಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಮತ್ತು ಜರ್ಮ‌ನಿ ದೇಶಗಳು ಈ ಯೋಜನೆಗೆ ಹಣಕಾಸಿನ ನೆರವು ನೀಡಲಿದೆ.

 ಗುಜರಾತ್‌ ಸೋಲಾರ್‌ ಪಾರ್ಕ್‌

ಗುಜರಾತ್‌ ಸೋಲಾರ್‌ ಪಾರ್ಕ್‌

ನವೀಕರಿಸಬಹುದಾದ ಇಂಧನ ಮೂಲಗಳತ್ತ ಭಾರತದ ಹೆಜ್ಜೆ


ರಾಜ್ಯದಲ್ಲಿ ಸೌರ ವಿದ್ಯುತ್‌ ಉತ್ಪಾದನೆ ಮಾಡಲು ಗುಜರಾತ್‌ ಸರ್ಕಾರ ವಿವಿಧ ಸೋಲಾರ್‌ ವಿದ್ಯುತ್‌ ತಯಾರಿಸುವ 84 ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು,ಈ ಸೋಲಾರ್‌ ಕಂಪೆನಿಗಳು ರಾಜ್ಯದ ವಿವಿಧೆಡೆ ತಮ್ಮ ಪಾರ್ಕ್‌ನ್ನು ಸ್ಥಾಪಿಸಿ ವಿದ್ಯುತ್‌ ತಯಾರಿಸುತ್ತಿವೆ. ಸೋಲಾರ್‍ ಪಾರ್ಕ್‌ ದಿನಕ್ಕೆ 500 ಮೆ.ವಾ. ವಿದ್ಯುತ್‌ನ್ನು ಉತ್ಪಾದಿಸುವ ಮೂಲಕ ಏಷ್ಯಾದ ನಂಬರ್‌ ಒನ್ ಸೋಲಾರ್‌ ಪಾರ್ಕ್‌ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

 ಕಾಲುವೆಯಿಂದ ವಿದ್ಯುತ್‌ ಉತ್ಪಾದನೆ:

ಕಾಲುವೆಯಿಂದ ವಿದ್ಯುತ್‌ ಉತ್ಪಾದನೆ:

ನವೀಕರಿಸಬಹುದಾದ ಇಂಧನ ಮೂಲಗಳತ್ತ ಭಾರತದ ಹೆಜ್ಜೆ


ಸೋಲಾರ್‌ ಪಾರ್ಕ್‌ಗಳ ಜೊತೆಗೆ ವಿಶ್ವದ ಮೊದಲ ಕಾಲುವೆಯಿಂದ ವಿದ್ಯುತ್‌ ತಯಾರಿಸುವ ಯೋಜನೆ ಗುಜರಾತ್‌ನಲ್ಲಿದೆ.ಚಂದ್ರಾಸನ ಎಂಬ ಗ್ರಾಮದಲ್ಲಿ ಸರ್ದಾರ್‌ ಸರೋವರ ನರ್ಮದಾ ನಿಗಮ ಲಿಮಿಟೆಡ್‌ನ‌ ಹಾದು ಹೋಗುವ ಉಪ ಕಾಲುವೆಯೊಂದರ ಮೇಲೆ 750 ಮೀಟರ್‌ ಉದ್ದಕ್ಕೆ ಈ ಸ್ಥಾವರ ನಿರ್ಮಾ‌ಣವಾಗಿದೆ. ಒಂದು ವರ್ಷ‌ಕ್ಕೆ1.6 ದಶಲಕ್ಷ ವಿದ್ಯುತ್‌ ಈ ಸ್ಥಾವರದಲ್ಲಿ ತಯಾರಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot