ದೇಶದ 115 ರೈಲ್ವೆ ನಿಲ್ದಾಣಗಳಲ್ಲಿ ವೇಗದ ಉಚಿತ Wi-Fi, 50 ಲಕ್ಷ ಬಳಕೆದಾರರು.!!

Written By:

ದೇಶದಲ್ಲಿ ಅತೀ ಹೆಚ್ಚು ಜನರ ಸಾರಿಗೆ ಸಂಪರ್ಕದ ಪ್ರಮುಖ ವ್ಯವಸ್ಥೆಯಾದ ರೈಲ್ವೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತ ವೈಫೈ ಸೇವೆಯನ್ನು ನೀಡಲು ಗೂಗಲ್ ಮುಂದಾಗಿರುವುದು ತಿಳಿದಿರುವ ವಿಚಾರ. ಈ ಹಿನ್ನಲೆಯಲ್ಲಿ ದೇಶದ 115 ರೈಲು ನಿಲ್ದಾಣಗಳಲ್ಲಿ 50ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರಿಗೆ ಉಚಿತ ಇಂಟರ್‌ನೆಟ್ ಸೇವೆಯನ್ನು ನೀಡಲಾಗಿದೆ ರಾಜ್ಯಸಭೆಯಲ್ಲಿ ತಿಳಿಸಲಾಗಿದೆ.

ದೇಶದ 115 ರೈಲ್ವೆ ನಿಲ್ದಾಣಗಳಲ್ಲಿ ವೇಗದ ಉಚಿತ Wi-Fi, 50ಲಕ್ಷ ಬಳಕೆದಾರರು.!!

ಓದಿರಿ: ಮೈ ಏರ್‌ಟೆಲ್ ಆಪ್‌ ಇನ್‌ಸ್ಟಾಲ್ ಮಾಡಿ 30GB 4G ಡೇಟಾ ಉಚಿತ ಪಡೆಯಿರಿ..!!

ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೈಲ್ವೆ ಸಚಿವ ಸುರೇಶ್ ಪ್ರಭು, ದೇಶದಲ್ಲಿ 400 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಪೈ ಸೇವೆಯನ್ನು ನೀಡಲು ಸರಕಾರವು ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.

ಫೆಭ್ರವರಿ ಅಂತ್ಯದ ವೇಳೆಗೆ ಸುಮಾರು 115 ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಚಿತ ವೈಫೈ ಸೇವೆಯನ್ನು ಓದಗಿಸಲಾಗಿದೆ. ಅಲ್ಲದೇ ಸರಿ ಸುಮಾರು 50 ಲಕ್ಷ ಮಂದಿ ಈ ಸೇವೆಯ ಲಾಭವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಚಲಿಸುತ್ತಿರುವ ರೈಲಿನಲ್ಲಿ ವೈಫೈ ನೀಡುವ ಪ್ರಯತ್ನವು ನಡೆಯುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ದೇಶದ 115 ರೈಲ್ವೆ ನಿಲ್ದಾಣಗಳಲ್ಲಿ ವೇಗದ ಉಚಿತ Wi-Fi, 50ಲಕ್ಷ ಬಳಕೆದಾರರು.!!

ಓದಿರಿ: ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನ ಫಾಂಟ್ ಚೇಂಜ್ ಮಾಡುವುದು ಹೇಗೆ..!!! ಇಲ್ಲದೇ ನೋಡಿ ಸಿಂಪಲ್ ಸ್ಟೇಪ್ಸ್

ಟೆಲಿಕಾಂ ಸಚಿವಾಲಯದ ನಿರ್ದೇಶನದಂತೆಯೇ ರೈಲ್ಬೆ ಪ್ರಯಾಣಿಕರಿಗೆ ಉಚಿತ ಸೇವೆಯನ್ನು ನೀಡಲಾಗುತ್ತಿದ್ದು, ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ಎಂದ ಅವರು, ಗೂಗಲ್ ಮಾಹಿತಿ ಪ್ರಕಾರ ರೈಲ್ವೆ ನಿಲ್ದಾಣಗಳಲ್ಲಿ ನೀಡಿರುವ ವೈಫೈ ಇಡೀ ವಿಶ್ವದಲ್ಲೇ ಅತ್ಯಂತ ವೇಗದ ಸಾರ್ವಜನಿಕ ವೈಫೈ ಆಗಿದೆ ಎಂದು ಅವರು ತಿಳಿಸಿದ್ದಾರೆ.

Read more about:
English summary
Free Wi-Fi services have been provided to 50 lakh passengers at 115 railway stations across the country. to know more visit.kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot