ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನ ಫಾಂಟ್ ಚೇಂಜ್ ಮಾಡುವುದು ಹೇಗೆ..!!! ಇಲ್ಲದೇ ನೋಡಿ ಸಿಂಪಲ್ ಸ್ಟೇಪ್ಸ್

ನಿಮ್ಮ ಆಂಡ್ರಾಯ್ಡ್ ಪೋನಿನಲ್ಲಿ ನಿಮಗೆ ಇಷ್ಟವಾದ ಫಾಂಟ್‌ಗಳನ್ನು ಹಾಕಿಕೊಳ್ಳುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

|

ಇಂದಿನ ದಿನದಲ್ಲಿ ಎಲ್ಲರ ಕೈನಲ್ಲೂ ಸ್ಮಾರ್ಟ್‌ಪೋನು ನೋಡಬಹುದಾಗಿದೆ. ಅದರಲ್ಲೂ ಹೆಚ್ಚಿನ ಜನರ ಕೈನಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಪೋನು ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ನಿಮ್ಮ ಆಂಡ್ರಾಯ್ಡ್ ಪೋನಿನಲ್ಲಿ ನಿಮಗೆ ಇಷ್ಟವಾದ ಫಾಂಟ್‌ಗಳನ್ನು ಹಾಕಿಕೊಳ್ಳುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನ ಫಾಂಟ್ ಚೇಂಜ್ ಮಾಡುವುದು ಹೇಗೆ..!!!

ಓದಿರಿ: ವಾಟ್ಸ್ಆಪ್ ಹಳೇ ಸ್ಟೆಟಸ್ ಮತ್ತೇ ಬಂತು..!! ಹೆಸರು ಬದಲಾಗಿದೆ ಅಷ್ಟೆ.!!

ಇಲ್ಲಿ ಆಂಡ್ರಾಯ್ಡ್ ಪೋನಿನಲ್ಲಿ ಎರಡು ಮಾದರಿಯಲ್ಲಿ ಫಾಂಟ್ ಬದಲಾವಣೆ ಮಾಡಬಹುದಾಗಿದೆ. ಒಂದು ರೀಬೂಟ್ ಮಾಡುವುದು, ಇನ್ನೊಂದು ರೀಬೂಟ್ ಮಾಡದೇ ಯಾವ ಆಪ್‌ಗಳನ್ನು ಬಳಸಿಕೊಂಡು ನಿಮ್ಮ ಇಷ್ಟದ ಫಾಂಟ್ ಗಳನ್ನು ಹಾಕಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಗೋ ಲಾಂಚರ್ ಡೌನ್‌ಲೋಡ್ ಮಾಡಿಕೊಳ್ಳಿ

ಗೋ ಲಾಂಚರ್ ಡೌನ್‌ಲೋಡ್ ಮಾಡಿಕೊಳ್ಳಿ

ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ಪ್ಲೇ ಸ್ಟೋರ್ ಓಪನ್ ಮಾಡಿರಿ. ನಂತರ ಅದರಲ್ಲಿ ಗೋ ಲಾಂಚರ್ ಅನ್ನು ಹುಡುಕಿ, ಡೌನ್‌ಲೋಡ್ ಮಾಡಿಕೊಳ್ಳಿರಿ. ನಂತರ ಇನ್‌ಸ್ಟಾಲ್ ಮಾಡಿಕೊಳ್ಳಿ.

ಗೋ ಲಾಂಚರ್ ಫಾಂಟ್ ಡೌನ್‌ಲೋಡ್ ಮಾಡಿಕೊಳ್ಳಿ:

ಗೋ ಲಾಂಚರ್ ಫಾಂಟ್ ಡೌನ್‌ಲೋಡ್ ಮಾಡಿಕೊಳ್ಳಿ:

ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ಪ್ಲೇ ಸ್ಟೋರಿನಿಂದ ಗೋ ಲಾಂಚರ್ ಡೌನ್‌ಲೋಡ್ ಮಾಡಿಕೊಂಡ ಮಾದರಿಯಲ್ಲೇ ಗೋ ಲಾಂಚರ್ ಫಾಂಟ್ ಡೌನ್‌ಲೋಡ್ ಮಾಡಿಕೊಳ್ಳಿರಿ, ನಂತರ ಇನ್‌ಸ್ಟಾಲ್ ಮಾಡಿಕೊಳ್ಳಿ.

ನಿಮ್ಮ ಇಷ್ಟವಾದ ಫಾಂಟ್ ಆಯ್ಕೆ ಮಾಡಿಕೊಳ್ಳಿ:

ನಿಮ್ಮ ಇಷ್ಟವಾದ ಫಾಂಟ್ ಆಯ್ಕೆ ಮಾಡಿಕೊಳ್ಳಿ:

ಪ್ಲೇ ಸ್ಟೋರಿನಿಂದ ಡೌನ್‌ಲೋಡ್ ಮಾಡಿಕೊಂಡ ಗೋ ಲಾಂಚರ್ ಫಾಂಟ್‌ಗಳಲ್ಲಿ ನಿಮ್ಮ ಇಷ್ಟವಾದ ಫಾಂಟ್ ಆಯ್ಕೆ ಮಾಡಿಕೊಂಡು, ನಂತರ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿರಿ. ನಂತರ ಇನ್‌ಸ್ಟಾಲ್ ಮಾಡಿಕೊಳ್ಳಿ.

ಗೋ ಲಾಂಚರ್  ಸೆಲೆಕ್ಟ್ ಮಾಡಿಕೊಳ್ಳಿ:

ಗೋ ಲಾಂಚರ್ ಸೆಲೆಕ್ಟ್ ಮಾಡಿಕೊಳ್ಳಿ:

ಫಾಂಟ್ ಆಯ್ಕೆ ಮಾಡಿಕೊಂಡು ಡೌನ್‌ಲೋಡ್ ಮಾಡಿಕೊಂಡ ನಂತರದಲ್ಲಿ ನಿಮ್ಮ ಸ್ಮಾರ್ಟ್‌ಪೊನಿನ ಹೋಮ್ ಸ್ಕ್ರಿನ್‌ನಲ್ಲಿರುವ ಸೆಟ್ಟಿಂಗ್‌ ಓಪನ್ ಮಾಡಿ, ಅಲ್ಲಿರುವ ಡಿಫಲ್ಟ್ ಲಾಂಚರ್‌ನಲ್ಲಿ ಗೋ ಲಾಂಚರ್ ಸೆಲೆಕ್ಟ್ ಮಾಡಿಕೊಳ್ಳಿ.

ನಂತರ ನಿಮ್ಮ ಫಾಂಟ್ ಬಳಸಿರಿ:

ನಂತರ ನಿಮ್ಮ ಫಾಂಟ್ ಬಳಸಿರಿ:

ನಂತರ ಗೋ ಲಾಂಚರ್ ನಲ್ಲಿರುವ ಫಾಂಟ್‌ ಆಯ್ಕೆಯನ್ನು ಓಪನ್ ಮಾಡಿಕೊಂಡು ಅಲ್ಲಿ ನೀವು ಇಷ್ಟಪಟ್ಟು ಡೌನ್‌ಲೋಡ್ ಮಾಡಿದ ಫಾಂಟ್‌ಅನ್ನು ಆಯ್ಕೆ ಮಾಡಿಕೊಂಡು ಬಳಕೆ ಮಾಡಲು ಶುರು ಮಾಡಿರಿ.

Best Mobiles in India

Read more about:
English summary
The default font for Android is pretty good and easier to read things, but if you think that you guys need to change the font, then you can easily do it. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X