Subscribe to Gizbot

ಸೇವಾತೆರಿಗೆ ಹೆಚ್ಚಳ: ಫೋನ್ ಕರೆ ದುಬಾರಿ

Written By:

ಇನ್ನು ಮೊಬೈಲ್ ಫೋನ್‌ಗಳಲ್ಲಿ ಕರೆಮಾಡುವಿಕೆಯಲ್ಲಿ ಹೆಚ್ಚಿನ ದರವನ್ನು ಕಂಡುಕೊಳ್ಳುವ ಸೇವಾ ತೆರಿಗೆಯನ್ನು ಬಳಕೆದಾರರು ಪಡೆದುಕೊಳ್ಳಲಿದ್ದಾರೆ. 14 ಶೇಕಡದಷ್ಟು ಈ ತೆರಿಗೆ ಏರಿಕೆಯಾಗಬಹುದು ಎಂಬುದು ಮೂಲಗಳಿಂದ ದೊರೆತ ಮಾಹಿತಿಯಾಗಿದೆ.

ಸೇವಾತೆರಿಗೆ ಹೆಚ್ಚಳ: ಫೋನ್ ಕರೆ ದುಬಾರಿ

ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಬಜೆಟ್‌ನಲ್ಲಿ ಸೇವಾ ತೆರಿಗೆಯನ್ನು 12.36 ಶೇಕಡಾದಿಂದ 14 ಕ್ಕೆ ಏರಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ತೆರಿಗೆಯು ಈ ವಾರದಿಂದ ಜಾರಿಗೆ ಬರುತ್ತಿದೆ.

ಓದಿರಿ: ಅರಳು ಹುರಿದಂತೆ ಇಂಗ್ಲೀಷ್ ಮಾತನಾಡಲು ಈ ಅಪ್ಲಿಕೇಶನ್ ಸಾಕು

ಇನ್ನು ಕೆಲವೊಂದು ಪ್ರಮುಖ ಸೇವೆಗಳು ಹೆಚ್ಚುವರಿ ತೆರಿಗೆಯನ್ನು ಪಡೆದುಕೊಳ್ಳುತ್ತಿದ್ದು ಇದು ಇನ್ನಷ್ಟು ದುಬಾರಿಯಾಗಲಿದೆ: ರೈಲ್ವೇ, ವಿಮಾನಯಾನ, ಇನ್‌ಶೂರೆನ್ಸ್, ಜಾಹೀರಾತು, ಕ್ರೆಡಿಟ್ ಕಾರ್ಡ್ಸ್ ಮೊದಲಾದವು ಈ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತಿದೆ.

ಸೇವಾತೆರಿಗೆ ಹೆಚ್ಚಳ: ಫೋನ್ ಕರೆ ದುಬಾರಿ

ಮೊಬೈಲ್ ಆಪರೇಟರ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಕಂಪೆನಿಗಳು ಚಂದಾದಾರರಿಗೆ ಸಂದೇಶಗಳನ್ನು ಕಳುಹಿಸಲು ಈಗಾಗಲೇ ಆರಂಭಿಸಿದ್ದು ಬಿಲ್‌ಗಳನ್ನು ಪಾವತಿ ಮಾಡುವಾಗ ಸೇವಾ ತೆರಿಗೆಯಲ್ಲಿನ ಹೆಚ್ಚಳವನ್ನು ಭರಿಸಬೇಕಾಗುತ್ತದೆ ಎಂಬ ಅಂಶವನ್ನು ಈ ಸಂದೇಶ ಒಳಗೊಂಡಿದೆ.

ಓದಿರಿ: ಉಗುರಿನ ಆಕಾರದ ಎಸ್‌ಡಿ ಕಾರ್ಡ್‌ ಕರಾಮತ್ತು ಬಲ್ಲಿರಾ?

ಇನ್ನು ರೈಲ್ವೇ ವಲಯದ ಮಾಹಿತಿ ಪ್ರಕಾರ, ಪ್ರಥಮ ದರ್ಜೆ ಅಂತೆಯೇ ಹವಾನಿಯಂತ್ರಿತ ಬೋಗಿಗಳ ದರ ಜೂನ್‌ನಿಂದ 0.5 ಶೇಕಡಾ ಹೆಚ್ಚಳವಾಗುತ್ತಿದೆ.

ರಾಷ್ಟ್ರ ಮತ್ತು ರಾಜ್ಯಮಟ್ಟಗಳಲ್ಲಿ ಸೇವೆಗಳ ಮೇಲಿನ ಟ್ಯಾಕ್ಸ್ ಸಂಗ್ರಹಿಸಲು ಸೇವಾ ತೆರಿಗೆಗಳಲ್ಲಿ ಶೇಕಡಾವಾರು ದರವನ್ನು ಹೆಚ್ಚಿಸುವುದು ಅಗತ್ಯವಾಗಿದ್ದು ಇದು 12.36 ಶೇಕಡಾದಿಂದ 14 ಶೇಕಡಾವನ್ನು ತಲುಪಲಿದೆ. ಎಂದು ಜೇಟ್ಲಿ ತಿಳಿಸಿದ್ದಾರೆ.

English summary
People will have to shell out more from Monday while using mobiles, eating out and travelling as the service tax rate goes up to 14 percent.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot