ಉಗುರಿನ ಆಕಾರದ ಎಸ್‌ಡಿ ಕಾರ್ಡ್‌ ಕರಾಮತ್ತು ಬಲ್ಲಿರಾ?

By Shwetha
|

ಗೂಗಲ್ ತನ್ನ ವಾರ್ಷಿಕ ಐ/ಒ (I/O) ಕಾರ್ಯಾಗಾರದಲ್ಲಿ ಪ್ರಾಜೆಕ್ಟ್ ವಾಲ್ಟ್ ಎಂಬ ಎಸ್‌ಡಿ ಕಾರ್ಡ್ ಅನ್ನು ಪ್ರಸ್ತುತಪಡಿಸಿದೆ. ಸಾಮಾನ್ಯ ಎಸ್‌ಡಿ ಕಾರ್ಡ್‌ಗಿಂತಲೂ ಇದು ಭಿನ್ನವಾಗಿದ್ದು ನಿಮ್ಮ ಉಗುರಿನಾಕಾರದಲ್ಲಿದೆ.

ಓದಿರಿ: ಗ್ಯಾಲಕ್ಸಿ ನೋಟ್ 4 ಡಿವೈಸ್‌ ವೇಗಗೊಳಿಸಲು ಟಾಪ್ ಸಲಹೆಗಳು

ಗೂಗಲ್‌ನ ಸುಧಾರಿತ ತಂತ್ರಜ್ಞಾನ ಹಾಗೂ ಪ್ರಾಜೆಕ್ಟ್ ಸಮೂಹವಾದ (ATAP) ಸಮೂಹ ಪ್ರಾಜೆಕ್ಟ್ ವಾಲ್ಟ್ ಅನ್ನು ವಿನ್ಯಾಸಪಡಿಸಿದ್ದು 4ಜಿಬಿ ಸಂಗ್ರಹಣಾ ಸಾಮರ್ಥ್ಯದೊಂದಿಗೆ ವಾಲ್ಟ್ ನಿಮ್ಮನ್ನು ಸಮೀಪಿಸುತ್ತಿದೆ. ಕಂಪ್ಯೂಟರ್‌ನೊಳಗೆ ಬಳಸಬಹುದಾದ ಮೈಕ್ರೋ ಎಸ್‌ಡಿ ಕಾರ್ಡ್ ಇದಾಗಿದ್ದು ಈ ಕಾರ್ಡ್ ಅನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ.

ಓದಿರಿ: ಸ್ಮಾರ್ಟ್‌ಫೋನ್‌ನಲ್ಲೂ ಮೋಡಿ ಮಾಡಲಿರುವ ವಿಂಡೋಸ್ 10 ಅಂಶಗಳು

ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಇದರ ಇನ್ನಷ್ಟು ವಿಶೇಷತೆಗಳನ್ನು ಅರಿತುಕೊಳ್ಳೋಣ.

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಸಾಮಾನ್ಯ ಮೈಕ್ರೋ ಎಸ್‌ಡಿ ಕಾರ್ಡ್‌ಗಿಂತಲೂ ಹೆಚ್ಚಿನ ಭದ್ರತೆಯನ್ನೊದಗಿಸುವ ಪ್ರಾಜೆಕ್ಟ್ ವಾಲ್ಟ್ ಅನ್ನು ಗೂಗಲ್ I/O ನಲ್ಲಿ ಘೋಷಿಸಲಾಗಿದೆ. ಇದನ್ನು ಪಿಸಿಗೆ ಸಂಪರ್ಕಪಡಿಸಿದಾಗ, ಇದು ಪರಿಪೂರ್ಣವಾದ ಸುಭದ್ರವಾದ ಸಂವಹನ ವ್ಯವಸ್ಥೆಯನ್ನು ನಿಮಗೆ ಒದಗಿಸಲಿದೆ.

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಗೂಗಲ್‌ನ ಸುಧಾರಿತ ತಂತ್ರಜ್ಞಾನ ಹಾಗೂ ಪ್ರಾಜೆಕ್ಟ್ ಸಮೂಹವಾದ (ATAP) ಸಮೂಹ ಪ್ರಾಜೆಕ್ಟ್ ವಾಲ್ಟ್ ಅನ್ನು ವಿನ್ಯಾಸಪಡಿಸಿದೆ.

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ನಿಮ್ಮ ಉಗುರಿನಾಕಾರಾದಲ್ಲಿರುವ ಈ ಡಿವೈಸ್ ಕಸ್ಟಮ್ ARM ಅನ್ನು ಪಡೆದುಕೊಂಡಿದ್ದು 4 ಜಿಬಿ ಸುಭದ್ರ ಸಂಗ್ರಹಣಾ ಸ್ಥಳವನ್ನು ಪಡೆದುಕೊಂಡಿದೆ.

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಇದು ತನ್ನದೇ ಆದ ಓಎಸ್ ಅನ್ನು ಚಾಲನೆಮಾಡುತ್ತಿದ್ದು ಇದು ಎನ್‌ಕ್ರಿಪ್ಶನ್ ಸೇವೆಗಳು ಮತ್ತು ಹಾರ್ಡ್‌ವೇರ್ ನಂಬರ್ ಜನರೇಟರ್ ವ್ಯವಸ್ಥೆಯನ್ನು ಪಡೆದುಕೊಂಡಿದೆ.

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಇದು ತನ್ನದೇ ಆದ ಎನ್‌ಎಫ್‌ಸಿ ಹಾರ್ಡ್‌ವೇರ್ ಅಂತೆಯೇ ಆಂಟೆನಾವನ್ನು ಹೊಂದಿದೆ. ಇನ್ನು ಎಸ್‌ಡಿ ಕಾರ್ಡ್ ಇಂಟರ್ಫೇಸ್ ಡೇಟಾ ಇನ್‌ಪುಟ್ ಮತ್ತು ಔಟ್‌ಪುಟ್ ನಿಭಾಯಿಸುತ್ತದೆ.

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಗೂಗಲ್ ಹೇಳುವಂತೆ ಇದು ಪಾರದರ್ಶಕವಾಗಿದ್ದು ಇತರ ಸಾಮಾನ್ಯ ಸ್ಟೋರೇಜ್ ಡಿಸ್ಟಿನೇಶನ್‌ನಂತೆಯೇ ಇದು ಕೆಲಸ ಮಾಡುತ್ತದೆ. ನೀವು ನೆಟ್‌ವರ್ಕ್‌ಗೆ ಪ್ಲಗಿನ್ ಆಗುವುದು ಅತ್ಯವಶ್ಯಕವಾಗಿದೆ.

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಈ ಡಿವೈಸ್‌ನಲ್ಲಿ ನಿಮಗೆ ಪರಿಪೂರ್ಣ ಭದ್ರತೆಯನ್ನು ಒದಗಿಸುತ್ತಿದ್ದು ಇದರಲ್ಲಿ ಕಾರ್ಯನಿರ್ವಹಿಸಲು ವಿಶೇಷ ಡ್ರೈವರ್ಸ್ ಅಥವಾ ಬಳಕೆದಾರ ಹಸ್ತಕ್ಷೇಪದ ಅಗತ್ಯವಿಲ್ಲ.

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಸಾಫ್ಟ್‌ವೇರ್ ಬೆಂಬಲಿತ ಪಠ್ಯ ಸಂದೇಶಿಸುವಿಕೆ, ವಾಯ್ಸ್ ಮತ್ತು ವೀಡಿಯೋ ಸ್ಟ್ರೀಮಿಂಗ್ ಮೊದಲಾದ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಇದರಲ್ಲಿರುವ ಅತಿ ವಿಶೇಷ ಹಾರ್ಡ್‌ವೇರ್ ನಿಮ್ಮ ಡಿವೈಸ್‌ನಲ್ಲಿರುವ ಮಾಹಿತಿಯನ್ನು ಯಾರಾದರೂ ಕಬಳಿಸಲು ಯತ್ನಿಸಿದಾಗ ನಿಮಗೆ ಸೂಚನೆ ನೀಡುತ್ತದೆ.

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಪ್ರಾಜೆಕ್ಟ್ ವಾಲ್ಟ್ ವಿಶೇಷತೆ

ಗೂಗಲ್ ಪ್ರಸ್ತುತ 500 ಪ್ರೊಟೊಟೈಪ್ ಕಾರ್ಡ್‌ಗಳನ್ನು ಉತ್ಪಾದಿಸುವ ಇರಾದೆಯನ್ನು ಹೊಂದಿದೆ.

Best Mobiles in India

English summary
One of the most interesting announcements made at Google I/O was Project Vault, a security-focused computer concealed within an ordinary microSD card. When plugged into a compatible PC, smartphone or other device, it can enable completely secure end-to-end communications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X