Subscribe to Gizbot

ಜಿಯೋಯಿಂದ ಲೈಫ್‌ಟೈಮ್ ಉಚಿತ ಸೇವೆ!!

Written By:

ಜಿಯೋಗೆ ಬೇಕಾದ ಸವಲತ್ತುಗಳನ್ನು ಒದಗಿಸಲು ಟ್ರಾಯ್ ಸಂಪೂರ್ಣವಾಗಿ ಬೆಂಬಲಕ್ಕೆ ನಿಂತಿದೆ ಎಂದು ಎಲ್ಲಾ ಟೆಲಿಕಾಂಗಳು ಟ್ರಾಯ್ ಮೇಲೆ ಕೆಂಡಕಾರುತ್ತದ್ದರೆ ಇತ್ತ ಟ್ರಾಯ್ ಮತ್ತೆ ಜಿಯೋ ಪರವಾಗಿ ಹಲವು ನಿಯಮಗಳನ್ನು ಜಾರಿಗೆ ತರುತ್ತದೆ.!!

ಹೌದು, ಏರ್‌ಟೆಲ್ ಮತ್ತು ಇತರ ಟೆಲಿಕಾಂಗಳು ಭಾರತೀಯ ಟೆಲಿಕಾಂ ನಿಯಂತ್ರಣ ಮಂಡಳಿ ಜಿಯೋಗೆ ಸಹಕಾರಿಯಾಗಿದೆ ಎಂದು ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದರೂ ಸಹ, ಇದೀಗ ಜಿಯೋಗೆ ಅನುಕೂಲವಾಗುವಂತೆ ಮತ್ತೆ ಕೆಲವು ಟೆಲಿಕಾಂ ನಿಯಮಗಳನ್ನು ಬದಲಾವಣೆಗಳನ್ನು ಮಾಡಿದೆ ಎನ್ನುವ ಮಾಹಿತಿ ದೊರೆತಿದೆ.!

ಜಿಯೋಯಿಂದ ಲೈಫ್‌ಟೈಮ್ ಉಚಿತ ಸೇವೆ!!

ಜಿಯೋಗೆ ಸೆಡ್ಡು...ಭಾರತಕ್ಕೆ ಉಚಿತ ಇಂಟರ್‌ನೆಟ್ ನೀಡಲಿದೆ ಆಲಿಬಾಬಾ!!!

ಟೆಲಿಕಾಂಗಳ ಮಧ್ಯೆ ಇದ್ದ ಒಪ್ಪಂದ( ಇಂಟರ್‌ಕನೆಕ್ಟ್) ಬಳಕೆ ಶುಲ್ಕದ ದರದ ನಿಯಮಗಳನ್ನು ಟ್ರಾಯ್ ಸಡಿಲಿಸಲು ಮುಂದಾಗಿದ್ದು, ಇದರಿಂದ ಜಿಯೋ ಲೈಫ್‌ಟೈಮ್ ಉಚಿತ ಕಾಲ್ ಸೇವೆ ನೀಡುವಂತೆ ಮಾಡಲು ಟ್ರಾಯ್ ಸಹಾಯ ಮಾಡುತ್ತಿದೆ ಎನ್ನುವ ಮಾತು ಟೆಲಿಕಾಂನಲ್ಲಿ ಹರಿದಾಡಿದೆ.

ಜಿಯೋಯಿಂದ ಲೈಫ್‌ಟೈಮ್ ಉಚಿತ ಸೇವೆ!!

ಒಂದು ಟೆಲಿಕಾಂ ಕಂಪೆನಿ ಗ್ರಾಹಕ ಮತ್ತೊಂದು ಟೆಲಿಕಾಂ ಕಂಪೆನಿಗೆ ಕರೆಮಾಡಿದರೆ, ಕಾಲ್ ಮಾಡಿದ ಗ್ರಾಹಕನ ಕಂಪೆನಿ 14 ಪೈಸೆಗಳನ್ನು ಇತರ ಕಂಪೆನಿಗೆ ನೀಡಬೇಕಾಗುತ್ತದೆ. ಇದು ಜಿಯೋ ಉಚಿತ ವಾಸ್ಸ್ ಕಾಲ್ ಆಫರ್‌ಗೆ ತಡೆಯಾಗಲಿದೆ.

ಹಾಗಾಗಿ ಈ ನಿಯಮವನ್ನು ಸಡಿಲಗೊಳಿಸಲು ಟ್ರಾಯ್ ತಂತ್ರ ಹೂಡಿದೆ ಎನ್ನಲಾಗಿದೆ. ಇನ್ನು ಈ ನಿಯಮವೇನಾದರೂ ಜಾರಿಯಾದರೆ ಜಿಯೋ ಸಂಪೂರ್ಣವಾಗಿ ಉಚಿತ ಕಾಲ್‌ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಸೆಕ್ಸ್ ವಿಡಿಯೋ ನೋಡದಿದ್ದರೂ ಸಹ ಈ ಸೆಕ್ಸ್‌ವೆಬ್‌ಸೈಟ್ ನೋಡಿ!!

English summary
Reliance Jio Infocomm is likely to get a major boost as the sector regulator Trai is considering to de-link call tariff from that of interconnect usage charge (IUC)
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot