ಜಿಯೋಗೆ ಸೆಡ್ಡು...ಭಾರತಕ್ಕೆ ಉಚಿತ ಇಂಟರ್‌ನೆಟ್ ನೀಡಲಿದೆ ಆಲಿಬಾಬಾ!!!

Written By:

ಚೀನಾದ ದೈತ್ಯ ಆಲಿಬಾಬಾ ಕಂಪೆನಿ ಭಾರತದಲ್ಲಿ ಉಚಿತ ಇಂಟರ್'ನೆಟ್ ನೀಡುವ ಯೋಜನೆಯೊಂದನ್ನು ರೂಪಿಸುತ್ತಿದೆ ಎಂದು ವರದಿಯಾಗಿದೆ. ಜಿಯೋ ಬಳಿಕ ಇದೀಗ ಚೀನಾದ 'ಆಲಿಬಾಬಾ' ಕಂಪೆನಿ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಲು ಸಜ್ಜಾಗಿದೆ.

ಆಲಿಬಾಬಾ ಕಂಪೆನಿಯ ಬಿಸ್‌ನೆಸ್ ಓವರ್ ಸೀಸ್ ಅಧ್ಯಕ್ಷ ಜಾಕ್ ಹುವಾಂಗ್ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಯೋಜನಾ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಭಾರತೀಯ ಟೆಲಿಕಾಂ ಕಂಪೆನಿಗಳು ನೀಡುತ್ತಿರುವ ಉಚಿತ ಅಂತರ್ಜಾಲ ವ್ಯವಸ್ಥೆ ನೀಡುವ ಕುರಿತಾಗಿ ಅಂತಿಮ ಸುತ್ತಿನ ಮಾತುಕತೆ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಜಿಯೋಗೆ ಸೆಡ್ಡು...ಭಾರತಕ್ಕೆ ಉಚಿತ ಇಂಟರ್‌ನೆಟ್ ನೀಡಲಿದೆ ಆಲಿಬಾಬಾ!!!

5 ಅಪಾಯಕಾರಿ ಇಂಟರ್‌ನೆಟ್ ಕಾರ್ಯಗಳು ನಿಮ್ಮನ್ನು ಜೈಲಿಗಟ್ಟುತ್ತವೆ!!

ಭಾರತದಲ್ಲಿ ಈಗಾಗಲೇ ಈ ಕಂಪೆನಿ ಯುಸಿ ವೆಬ್ ಹೆಸರಿನಲ್ಲಿ ಇಂಟರ್‌ನೆಟ್ ಸಾಫ್ಟ್‌ವೇರ್ ಹಾಗೂ ಸರ್ವಿಸ್ ಪ್ರೊವೈಡ್ ಮಾಡುತ್ತಿದ್ದು, ಬಳಕೆದಾರರಿಗೆ ಕಡಿಮೆ ದರದಲ್ಲಿ ಇಂಟರ್ನೆಟ್ ಸೌಲಭ್ಯ ನೀಡಬೇಕು ಎಂಬುದು ಕಂಪೆನಿಯ ಉದ್ದೇಶ ಎಂದು ಹೇಳಿಕೊಂಡಿದೆ.

ಜಿಯೋಗೆ ಸೆಡ್ಡು...ಭಾರತಕ್ಕೆ ಉಚಿತ ಇಂಟರ್‌ನೆಟ್ ನೀಡಲಿದೆ ಆಲಿಬಾಬಾ!!!

ಇನ್ನು ಈ ಮೊದಲು ಫೇಸ್'ಬುಕ್ ಮತ್ತು ಗೂಗಲ್ ಸಹ ಫ್ರೀ ಬೇಸಿಕ್ ಇಂಟರ್‌ನೆಟ್ ನೀಡುವ ಪ್ರಸ್ತಾಪವನ್ನು ಇಟ್ಟಿದ್ದವು. ಆದರೆ, ಭಾರತ ಸರ್ಕಾರ ಅದಕ್ಕೆ ಅನುಮತಿ ನೀಡಿರಲಿಲ್ಲ!!

English summary
We already have Jio providing free 4G internet across the country. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot