Subscribe to Gizbot

ಗೂಗಲ್‌ ಇಂಪ್ಯಾಕ್ಟ್ ಪ್ರಶಸ್ತಿಗೆ ಅರ್ಜಿ ಹಾಕಿ: 4 ಕೋಟಿ ಬಹುಮಾನಗಳಿಸಿ

Posted By:

ಭಾರತ ಮತ್ತು ವಿಶ್ವದ ನಾನಾ ಸಮಸ್ಯೆಗಳನ್ನು ನಿರ್ವ‌ಹಿಸಲು ವಿಶಿಷ್ಟ ತಂತ್ರಜ್ಞಾನವನ್ನು ಕಂಡುಹಿಡಿದ ಲಾಭ ರಹಿತ ಸಾಮಾಜಿಕ ಸಂಸ್ಥೆಗಳಿಗೆ ಕೊಡಮಾಡುವ ಈ ವರ್ಷದ ಗೂಗಲ್‌ ಗ್ಲೋಬಲ್‌ ಇಂಪ್ಯಾಕ್ಟ್‌ ಪ್ರಶಸ್ತಿಗೆ ಅರ್ಜಿ‌ಗಳನ್ನು ಆಹ್ವಾನಿಸಲಾಗಿದೆ.

ಪ್ರತಿವರ್ಷ‌ ವಿಶ್ವದ ಪ್ರಮುಖ ಸಮಸ್ಯೆಗಳಿಗೆ ವಿಶಿಷ್ಟ ತಂತ್ರಜ್ಞಾನವನ್ನು ಕಂಡುಹಿಡಿದ ಸಂಸ್ಥೆಗಳ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ಗೂಗಲ್‌ ಈ ಪ್ರಶಸ್ತಿಯನ್ನು ನೀಡುತ್ತಿದೆ. ನಾಲ್ಕು ಲಾಭ ರಹಿತ ಸಂಸ್ಥೆಗಳನ್ನು ಆರಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಆರ್ಹಸಂಸ್ಥೆಗೆ ತಲಾ ಮೂರು ಕೋಟಿ ರೂ. ಹಾಗೂ ಈ ಸಂಸ್ಥೆ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಕಾರ್ಯ‌ರೂಪಕ್ಕೆ ತರಲು ಗೂಗಲ್‌ ತಾಂತ್ರಿಕ ಸಹಾಯ ನೀಡಲಿದೆ.

ಮೊದಲ ಮೂರು ವಿಜೇತರನ್ನು ಗೂಗಲ್‌ ಗ್ಲೋಬಲ್‌ ಇಂಪ್ಯಾಕ್ಟ್‌ ಪ್ರಶಸ್ತಿ ಸಮಿತಿಯು ಘೋಷಿಸಲಿದ್ದು, ಕೊನೆಯ ವಿಜೇತರನ್ನು ಸಾರ್ವಜನಿಕರ ಮತ ಚಲಾವಣೆ ಮೂಲಕ ಆಯ್ಕೆ ಮಾಡಲಾಗುವುದು ಎಂದೂ ಗೂಗಲ್‌ ಸ್ಪಷ್ಟಪಡಿಸಿದೆ.

ಗೂಗಲ್‌ ಇಂಪ್ಯಾಕ್ಟ್ ಪ್ರಶಸ್ತಿಗೆ ಅರ್ಜಿ ಹಾಕಿ: 4 ಕೋಟಿ ಬಹುಮಾನಗಳಿಸಿ

ಗೂಗಲ್‌ ಗ್ಲೋಬಲ್‌ ಇಂಪ್ಯಾಕ್ಟ್‌ ಪ್ರಶಸ್ತಿ 2013- ಟೈಮ್‌ಲೈನ್‌

ಆನ್‌ಲೈನ್‌ ಮೂಲಕ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್‌ 5
ಗೂಗಲ್‌ ಆಯ್ಕೆ ಸಮತಿ ಅರ್ಜಿ‌ಗಳನ್ನು ಪರಿಶೀಲಿಸಿ 10 ಅಭ್ಯರ್ಥಿಗಳನ್ನು ಘೋಷಿಸುವ ದಿನಾಂಕ: ಅಕ್ಟೋಬರ್‌ 21
ಈ ವರ್ಷದ ಗೂಗಲ್‌ ಗ್ಲೋಬಲ್‌ ಇಂಪ್ಯಾಕ್ಟ್ ಪ್ರಶಸ್ತಿ ಪ್ರಧಾನ ನಡೆಯುವ ಸಮಾರಂಭದ ದಿನಾಂಕ: ಅಕ್ಟೋಬರ್‌ 31

ಗೂಗಲ್‌ ಗ್ಲೋಬಲ್‌ ಇಂಪ್ಯಾಕ್ಟ್‌ ಪ್ರಶಸ್ತಿಗೆ ಸಂಬಂಧಿಸಿದ ಸಂಪೂರ್ಣ ವಿವರ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ: ಗೂಗಲ್‌ ಗ್ಲೋಬಲ್‌ ಇಂಪ್ಯಾಕ್ಟ್‌ ಪ್ರಶಸ್ತಿ 2013

ಯಾವುದೇ ಲಾಭ ರಹಿತ ಸಾಮಾಜಿಕ ಸಂಸ್ಥೆ ಈ ಪ್ರಶಸ್ತಿಗೆ ಅರ್ಜಿ‌ ಸಲ್ಲಿಸಬಹುದು. ಈ ಸುದ್ದಿಯನ್ನು ನೀವು ಓದಿದಂತೆ ಉಳಿದ ಸ್ನೇಹಿತರಿಗೂ ತಿಳಿಸಿ, ಸಂಶೋಧನೆ ಸಹಕರಿಸಿ.

ಇದನ್ನೂ ಓದಿ: ಗೂಗಲ್‌ನಿಂದ ಎರಡು ಕನ್ನಡ ಹೊಸ ಫಾಂಟು
ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot