ಎಂ.ಎಸ್.ಸುಬ್ಬುಲಕ್ಷ್ಮಿಗೆ ಗೂಗಲ್‌ ಸಂಗೀತಾ ನಮನ

Posted By:

ಇಂದು ಭಾರತದ ಶ್ರೇಷ್ಟ ಕರ್ನಾಟಕ ಸಂಗೀತ ಗಾಯಕಿ ಎಂ.ಎಸ್.ಸುಬ್ಬುಲಕ್ಷ್ಮಿ 97ನೇ ಜನುಮ ದಿನ ಈ ದಿನಕ್ಕೆ ಗೂಗಲ್‌ ವೀಣೆ ತಬಲಾ,ಮೃದಂಗವಿರುವ ಗೂಗಲ್‌ ಡೂಡಲ್‌ ರಚಿಸಿ ಎಂ.ಎಸ್.ಸುಬ್ಬುಲಕ್ಷ್ಮಿ ಅವರಿಗೆ ಸಂಗೀತಾ ನಮನ ಸಲ್ಲಿಸಿದೆ.

ಷಣ್ಮುಖವಡಿವು ಸುಬ್ಬುಲಕ್ಷ್ಮಿ ಹುಟ್ಟಿದ್ದು 1916 ಸೆಪ್ಟಂಬರ್ 16 ರಂದು ಮದುರೈ ಪಟ್ಟಣದಲ್ಲಿ.ಸುಬ್ಬುಲಕ್ಷ್ಮಿ ತಂದೆ ಸುಬ್ರಹ್ಮಣ್ಯ ಐಯ್ಯರ್‌, ತಾಯಿ ವೀಣಾ ವಿಶಾರದೆ ಶನ್ಮುಖವಡಿವರ್‌ ಅಮ್ಮಾಳ್‌.ಮನೆಯ ಸಂಗೀತಾ ಪರಿಸರದ ಪ್ರಭಾವದಿಂದ ಹತ್ತನೇಯ ವಯಸ್ಸಿನಲ್ಲೇ ಸುಬ್ಬುಲಕ್ಷ್ಮಿಯವರ ಮೊದಲ ಧ್ವನಿ ಮುದ್ರಣ ಹೊರಬಂದಿತು. ನಂತರ ಸೆಮ್ಮಂಗುಡಿ ಶ್ರೀನಿವಾಸ ಐಯ್ಯರ್ ಕರ್ನಾಟಕ ಸಂಗೀತಾ, ಪಂಡಿತ್ ನಾರಾಯಣ್ ರಾವ್ ವ್ಯಾಸ್ ರಿಂದ ಹಿಂದುಸ್ತಾನಿ ಸಂಗೀತಾದ ಪಾಠ. ಸಂಗೀತ ಸಾಧನೆಗಾಗಿ ಭಾರತ ರತ್ನ ಪಡೆದ ಮೊದಲ ಸಂಗೀತಗಾರ್ತಿ,ಏಷ್ಯಾದ ಪ್ರತಿಷ್ಠಿತ ನಾಗರೀಕ ಪ್ರಶಸ್ತಿ ಮ್ಯಾಗ್ಸೆಸೆ ಪಡೆದ ಭಾರತ ಮೊದಲ ಸಂಗೀತ ಸಾಧಕಿ. ವಿಶ್ವದೆಲ್ಲೆಡೆ ಸಂಗೀತಾ ಅಭಿಮಾನಿಗಳಿಗಳನ್ನು ಪಡೆದಿದ್ದ ಸುಬ್ಬುಲಕ್ಷ್ಮಿಯವರು 2004, ಡಿ.11ರಂದು ಚೆನ್ನೈನಲ್ಲಿ ತೀರಿಕೊಂಡರು.

ಎಂ.ಎಸ್.ಸುಬ್ಬುಲಕ್ಷ್ಮಿಗೆ ಗೂಗಲ್‌ ಸಂಗೀತಾ ನಮನ

ಗೂಗಲ್‌ ಡೂಡಲ್‌
ವಿಶ್ವದ ಶ್ರೇಷ್ಠ ವ್ಯಕ್ತಿ/ವಿಜ್ಞಾನಿಗಳ ಹುಟ್ಟುಹಬ್ಬ,ದೊಡ್ಡ ಕ್ರೀಡೆಗಳು, ಅಲ್ಲದೇ ದೇಶದ ರಾಷ್ಟ್ರೀಯ ಹಬ್ಬಗಳ ಸಂದರ್ಭಲ್ಲಿ ಗೂಗಲ್‌ ತನ್ನ ಡೂಡಲ್‌ ಬದಲಾಯಿಸುತ್ತಿರುತ್ತದೆ.

ಇದನ್ನೂ ಓದಿ: ಗೂಗಲ್‌ ಡೂಡಲ್‌ನಲ್ಲಿ ಪೆಟ್ರಿ ತಟ್ಟೆ

ಇದನ್ನೂ ಓದಿ: ಗೂಗಲ್ ಟಾಪ್‌ 8 ಪ್ರೊಡಕ್ಟ್‌ಗಳನ್ನು ತಿಳಿದಿದ್ದೀರಾ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot