ಗೂಗಲ್ ಟಾಪ್‌ 8 ಪ್ರೊಡಕ್ಟ್‌ಗಳನ್ನು ತಿಳಿದಿದ್ದೀರಾ?

By Ashwath
|

ಈಗಂತೂ ಯಾರ ಜೊತೆಗೆ ಏನೇ ಮಾಹಿತಿ ಕೇಳಿದ್ರೂ, ವ್ಯಕ್ತಿ ಮಾಹಿತಿ ನೀಡಿದ ಬಳಿಕ ಕೊನೆಗೆ ಹೇಳುವುದು ಗೂಗಲ್‌ನ್ನು. ಗೂಗಲ್‌ಗೆ ಹೋಗಿ ಬೇಕಾದ ಮಾಹಿತಿಯ ಕೀ ವರ್ಡ್ ಟೈಪ್‌ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ ಎಂದು ಹೇಳುತ್ತಿರುತ್ತಾರೆ. ಒಟ್ಟಿನಲ್ಲಿ ಆಯಾ ಭಾಷೆಯ ಜನರಿಗೆ ಆಯಾ ಭಾಷೆಗಳಲ್ಲಿ ಮಾಹಿತಿ ನೀಡುತ್ತಿರುವ ಗೂಗಲ್‌ಗೆ ಎಷ್ಟು ಥ್ಯಾಕ್ಸ್‌ ಹೇಳಿದರೂ ಸಾಲದು.

ವಿಶ್ವದ ನಂಬರ್‌ ಕಂಪೆನಿಯ ಹೆಸರು ಹುಟ್ಟಿಕೊಂಡದ್ದು ಒಂದು ತಪ್ಪಿನಿಂದ.!ಗೂಗಲ್‌ ಸಂಸ್ಥಾಪಕರಾದ ಲಾರಿ ಪೇಜ್‌ ಮತ್ತು ಸರ್ಜಿ ಬ್ರಿನ್‌ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಆನ್‌ಲೈನ್‌ ಸರ್ಚ್ ಇಂಜಿನ್‌ ಬಗ್ಗೆ ಒಂದು ಪ್ರಾಜೆಕ್ಟ್‌ ಮಾಡುತ್ತಿದ್ದರು. ಅವರ ಪ್ರಾಜೆಕ್ಟ್‌ ಉದ್ದೇಶ ಸರಳ. ಯಾರದ್ರೂ ಕೀ ವರ್ಡ್ ಸರ್ಚ್ ಮಾಡಿದ್ರೆ ಆ ಕೀ ವರ್ಡ್ ಇರುವಂತಹ ಸಿಕ್ಕಾಪಟ್ಟೆ ಸೈಟ್‌ಗಳು ಬರುತ್ತಿತ್ತು.ಹೀಗಾಗಿ ಇದನ್ನು ನಿಯಂತ್ರಿಸಲು ಅವರು ಗೂಗಲ್‌ ನಂಬರ್‌ ತರಲು ಯೋಚಿಸಿದ್ದರು. ಈ ಗೂಗಲ್‌(Googol) ನಂಬರ್‌ ಅಂದರೆ ಒಂದು ಅಂಕೆಯ ಮುಂದೆ ನೂರು ಸೊನ್ನೆಗಳನ್ನು ಹಾಕಿದ್ರೆ ಎಷ್ಟು ಸಂಖ್ಯೆ ಬರುತ್ತದೋ ಅಷ್ಟು ಸೈಟ್‌ಗಳು ಮಾತ್ರ ಪೇಜ್‌ನಲ್ಲಿ ಬರಬೇಕು ಎನ್ನುವುದು ಇವರ ಉದ್ದೇಶವಾಗಿತ್ತು.ಇವರು ಪ್ರಾಜೆಕ್ಟ್‌ ಪೂರ್ಣಗೊಳಿಸಿ ಅದನ್ನು ಪರೀಶಿಲಿದ ಮೌಲ್ಯಮಾಪಕರು ಕೊನೆಗೆ ತನ್ನ ಪುಸ್ತಕದಲ್ಲಿ Googol ಪದದ ಬದಲಿಗೆ ತಪ್ಪಾಗಿ 'Google' ಎಂದು ಬರೆದರಂತೆ. ಹೀಗಾಗಿ ಮೇಲೆ ಮೌಲ್ಯಮಾಪಕರು ಬರೆದ 'Google' ಹೆಸರನ್ನೇ ಲಾರಿ ಪೇಜ್‌ ಮತ್ತು ಸರ್ಜಿ ಬ್ರಿನ್‌ ಇರಿಸಿ ಗೂಗಲ್ ಕಂಪೆನಿಯನ್ನು ಹುಟ್ಟು ಹಾಕಿದರು.

ಸೆಪ್ಟೆಂಬರ್ 4, 1998 ರಂದು ಆರಂಭಗೊಂಡ ಗೂಗಲ್‌ ಕಂಪೆನಿ ಇಂದು ಸರ್ಚ್‌ಇಂಚಿನ್‌, ಕ್ಲೌಡ್ ಕಂಪ್ಯೂಟಿಂಗ್, ತಂತ್ರಾಂಶ ಮತ್ತು ಆನ್‌ಲೈನ್‌ ಜಾಹೀರಾತುಗಳಿಂದ ವಿಶ್ವದ ಟಾಪ್‌ ಟೆಕ್‌ ಕಂಪೆನಿಯಾಗಿ ಬೆಳೆದಿದೆ. ಹೀಗಾಗಿ 15 ವರ್ಷ‌ ಪೂರ್ಣ‌ಗೊಂಡ ಹಿನ್ನೆಲೆಯಲ್ಲಿ ಗೂಗಲ್‌ನ ಪ್ರಮುಖ ಎಂಟು ವಿಶೇಷ ಪ್ರೊಡೆಕ್ಟ್‌ಗಳು ಇಲ್ಲಿವೆ, ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

 ಗೂಗಲ್‌ ಗ್ಲಾಸ್‌

ಗೂಗಲ್‌ ಗ್ಲಾಸ್‌


ಗೂಗಲ್‌ನ ಭಾರೀ ವಿವಾದ ಸೃಷ್ಟಿಸಿದ ಪ್ರಾಡೆಕ್ಟ್‌. ಕನ್ನಡಕದಲ್ಲೇ ಚಲಿಸುತ್ತಿರುವಾಗಲೇ ವೀಡಿಯೋ ರೆಕಾರ್ಡ್ ಮಾಡಬಹುದಾದ, ವಾಯ್ಸ್‌ ಕಮಾಂಡ್‌ ಆಯ್ಕೆಯ ಮೂಲಕ ಸುಲಭವಾಗಿ ಇಂಟರ್‌ನೆಟ್‌ ಸರ್ಚ್ ಮಾಡಬಹುದಾದ ಕನ್ನಡಕ. ಆಂಡ್ರಾಯ್ಡ್‌ ಓಎಸ್‌,5 ಎಂಪಿ ಕ್ಯಾಮೆರಾ,ವೈಫೈ ಬ್ಲೂಟೂತ್‌ 16ಜಿಬಿ ಮೆಮೋರಿ ಸಾಮರ್ಥ್ಯ ವಿಶೇಷತೆಯನ್ನು ಈ ಗೂಗಲ್‌ ಗ್ಲಾಸ್‌ ಒಳಗೊಂಡಿದೆ.

 ಗೂಗಲ್‌ ಕಾರ್‌

ಗೂಗಲ್‌ ಕಾರ್‌

ಗೂಗಲ್‌ ಕಾರ್‌ ಚಾಲಕ ರಹಿತ ಕಾರ್‌ನ್ನು ಟಯೊಟಾ ಸಹಯೋಗದೊಂದಿಗೆ ಗೂಗಲ್‌ ಕಳೆದ ವರ್ಷ‌ ಅಭಿವೃದ್ಧಿಪಡಿಸಿದೆ. ಅಮೆರಿಕದಲ್ಲಿ ಗೂಗಲ್‌ ಲೆಸ್ಸ್ ಕಾರನ್ನು ರಸ್ತೆಯಲ್ಲಿ ಚಲಾಯಿಸಲು ಪರವಾನಿಗೆ ದೊರಕಿದೆ. ಇಬ್ಬರು ಕಡ್ಡಾಯವಾಗಿ ಪ್ರಯಾಣಿಸಬೇಕು ಎಂದು ಪರವಾನಿಗೆ ನೀಡುವಾಗ ಸ್ಪಷ್ಟವಾಗಿ ತಿಳಿಸಲಾಗಿದೆ. ಯಾಕೆಂದರೆ ಎಲ್ಲಾದರೂ ಚಾಲಕ ರಹಿತವಾಹನದಲ್ಲಿ ಏನಾದರೂ ತೊಂದರೆ ಉಂಟಾದರೆ ಹಿಡಿತಕ್ಕೆ ತೆಗೆದುಕೊಳ್ಳಲು ಕಾರಿನೊಳಗೆ ಜನರಿರುವುದು ಕಡ್ಡಾಯ ಸರಕಾರ ಹೇಳಿದೆ.

 ಇಂಟರ್‌ನೆಟ್‌ ಬಲೂನ್‌

ಇಂಟರ್‌ನೆಟ್‌ ಬಲೂನ್‌

20 ಕಿ.ಮೀ ಎತ್ತರದ ಆಗಸದಲ್ಲಿ ಪಾರದರ್ಶಕ ಬಲೂನ್‌ಗಳನ್ನು ಹಾರಿಸಿ, ಅದರದಿಂದ 3ಜಿ ವೇಗದ ಇಂಟರ್‌ನೆಟ್‌ ಸಂಕೇತಗಳನ್ನು ಪಡೆಯುವ ಪ್ರೊಜೆಕ್ಟ್‌ ಲೂನ್‌ ಹೆಸರಿನ ಯೋಜನೆಯನ್ನು ಗೂಗಲ್‌ ಈ ವರ್ಷದಿಂದ ಆರಂಭಿಸಿದೆ.ಇದೇ ಜೂನ್‌ 16 ರಂದು ಗೂಗಲ್‌ ನ್ಯೂಜಿಲೆಂಡ್‌ನ ಟೆಕಾಪೋ(Tekapo) ಪ್ರದೇಶದಲ್ಲಿ ಪ್ರಯೋಗಕ್ಕಾಗಿ 30 ಬಲೂನ್‌ಗಳನ್ನು ಹಾರಿಸಿದ್ದು,ಈ ಪ್ರದೇಶದಲ್ಲಿರುವ 50 ಜನರು ಈಗ ಈ ಹೊಸ ಪ್ರಯೋಗದ ಸೇವೆಯನ್ನು ಪಡೆಯುತ್ತಿದ್ದಾರೆ.

 ಮೋಟೋ ಎಕ್ಸ್‌ ಸ್ಮಾರ್ಟ್‌ಫೋನ್‌

ಮೋಟೋ ಎಕ್ಸ್‌ ಸ್ಮಾರ್ಟ್‌ಫೋನ್‌


ಗೂಗಲ್‌ 2012ರಲ್ಲಿ ಮೋಟರೋಲಾವನ್ನು 12.5 ಶತಕೋಟಿ ಡಾಲರ್‌ ನೀಡಿ ಖರೀದಿಸಿ ನಂತರ ಬಿಡುಗಡೆಯಾದ ಮೊದಲ ಸ್ಮಾರ್ಟ್‌ಫೋನ್‌. ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌ 4.7 ಇಂಚಿನ AMOLED ಸ್ಕ್ರೀನ್‌ 1.7GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍ 2GB RAMನೊಂದಿಗೆ ಈ ಮೋಟೋ ಎಕ್ಸ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

 ಗೂಗಲ್‌ ಸ್ಟ್ರೀಟ್‌ ವ್ಯೂ

ಗೂಗಲ್‌ ಸ್ಟ್ರೀಟ್‌ ವ್ಯೂ


ಇಂಟರ್‌ನೆಟ್‌ ಮೂಲಕ ಮಹಾನಗರಗಳು ಹೇಗೆ ಇದೆಯೋ ಅದೇ ಚಿತ್ರಣವನ್ನು ಸಂಪೂರ್ಣವಾಗಿ ನೋಡುವ ಹೊಸ ಬಗೆಯ ನಕ್ಷೆಯೇ ಸ್ಟ್ರೀಟ್‌ ವ್ಯೂ.ಸಾರ್ವಜನಿಕರು ಇಂಟರ್ ನೆಟ್‌ ಸೌಲಭ್ಯವಿರುವ ಕಂಪ್ಯೂಟರ್/ಮೊಬೈಲ್‌ ಮೂಲಕವೇ ಇಡೀ ಬೀದಿ ಬೀದಿ ಹೇಗಿದೆ ಎಂದು ನೋಡಬಹುದು. ಗೂಗಲ್‌ ಸ್ಟ್ರೀಟ್‌ ವ್ಯೂ ಕಾರು,ಹಿಮ ಮೋಟಾರು ಗಾಡಿ ಮೂಲಕ ಕಂಪ್ಯೂಟರ್‌ಗಳು, ಕ್ಯಾಮೆರಾಗಳು, ಲೇಸರ್‌ಗಳನ್ನು ಜೋಡಿಸಿ ಜಿಪಿಎಸ್‌ ಸಾಧನ ಮೂಲಕ ಕ್ಯಾಮೆರಾವನ್ನು 360 ಡಿಗ್ರಿ ತಿರುಗಿವಂತೆ ಮಾಡಿ ಈ ಸ್ಟ್ರೀಟ್‌ ವ್ಯೂ ಸಂಪೂರ್ಣ ಚಿತ್ರವನ್ನು ಸೆರೆಹಿಡಿಯಲಾಗಿದೆ.

 ಗೂಗಲ್‌ ಫೈಬರ್‌

ಗೂಗಲ್‌ ಫೈಬರ್‌

ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ 1Gbps ವೇಗದಲ್ಲಿ ಡೌನ್‌ಲೋಡ್‌ ಮತ್ತು ಅಪ್‌ಲೋಡ್‌ ಮಾಡಬಹುದಾದ ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ನೀಡುವ ಫೈಬರ್‌ ಇಂಟರ್‌ನೆಟ್‌ ಸೇವೆಯನ್ನು ಗೂಗಲ್‌ 2011ರಲ್ಲಿ ಅಮರಿಕದಲ್ಲಿ ಆರಂಭಿಸಿತು. ಈ ಸೇವೆಯನ್ನು ಬಳಸುತ್ತಿರುವ ಗ್ರಾಹಕರು ಸಾಧಾರಣ ಅಮೆರಿಕದ ಜನತೆ ಬಳಸುತ್ತಿರುವ ಇಂಟರ್‌ನೆಟ್‌ ಸ್ಪೀಡ್‌ಗಿಂತಲೂ ನೂರು ಪಟ್ಟು ವೇಗದಲ್ಲಿ ಇಂಟರ್‌ನೆಟ್‌ನ್ನು ಬಳಸುತ್ತಿದ್ದಾರೆ.

 ಆಂಡ್ರಾಯ್ಡ್‌ ಓಎಸ್‌

ಆಂಡ್ರಾಯ್ಡ್‌ ಓಎಸ್‌

ಆಂಡ್ರಾಯ್ಡ್ ಓಎಸ್‌ನ್ನು ಮೊದಲು ಅಭಿವೃದ್ಧಿ ಪಡಿಸಿದ್ದು ಆಂಡ್ರಾಯ್ಡ್ ಇನ್ಕ್ ಎನ್ನುವ ಕಂಪೆನಿ. 2005 ರಲ್ಲಿ ಗೂಗಲ್‌ ಈ ಕಂಪೆನಿಯನ್ನು ಖರೀದಿಸಿತು. ವಿಶ್ವದಲ್ಲಿ ಶೇ. 80 ರಷ್ಟು ಆಂಡ್ರಾಯ್ಡ್‌ ಓಎಸ್‌ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಈ ಓಎಸ್‌ನ ಹೊಸ ಆವೃತ್ತಿಯನ್ನು ಗೂಗಲ್‌ ಪ್ರಕಟಿಸಿತ್ತು.

   ಹೊಸ ಪಾಸ್‌ವರ್ಡ್‌:

ಹೊಸ ಪಾಸ್‌ವರ್ಡ್‌:


ಗೂಗಲ್‌ ಪಾಸ್‌ವರ್ಡ್ ಸುರಕ್ಷತೆಗೆ ಹೆಚ್ಚಿನ ಪ್ರಮುಖ್ಯತೆ ನೀಡಿದ್ದು ಈಗ ಇರುವ ಪಾಸವರ್ಡ್ ಬದಲಿಗೆ ಎಲೆಕ್ಟ್ರಾನಿಕ್ ಟ್ಯಾಟೋ ಅಥವಾ ಬಯೋಸ್ಟ್ಯಾಂಪ್‌ ಪಾಸ್‌ವರ್ಡ್ ಸಂಶೋಧನೆಗೆ ಮುಂದಾಗುತ್ತಿದೆ. ದೇಹದಲ್ಲಿ ಟ್ಯಾಟೋಗಳು ಹೇಗೆ ಹಚ್ಚುತ್ತೇವೋ ಅದೇ ರೀತಿಯಾಗಿ ಈ ಟ್ಯಾಟೋಗಳನ್ನು ನಮ್ಮ ದೇಹದ ಯಾವ ಭಾಗಕ್ಕೂ ಅಂಟಿಸಿ ಸುಲಭವಾಗಿ ಇಮೇಲ್‌, ಮೊಬೈಲ್‌ ಅಕೌಂಟ್‌‌ ಓಪನ್‌ ಮಾಡಬಹುದಾಗಿದೆ. 2014ರಲ್ಲಿ ಈ ಹೊಸ ರೀತಿಯ ಪಾಸ್‌ವರ್ಡ್ ತಂತ್ರಜ್ಞಾನವನ್ನು ವಿಶ್ವದ ಜನರಿಗೆ ಪರಿಚಯಿಸಲಿದ್ದೇವೆ ಎಂದು ಗೂಗಲ್‌ ಮೊಟರೊಲಾ ಹೇಳಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X