ಅಂತು ಇಂತು ಬಂತು ಸೆಲ್ಫ್‌ ಡ್ರೈವಿಂಗ್ ಬೈಸಿಕಲ್‌: ಗೂಗಲ್‌!!

Written By:

ಗೂಗಲ್‌ ಕಳೆದ ಕೆಲವು ದಿನಗಳ ಹಿಂದಷ್ಟೇ ಸೆಲ್ಫ್‌ ಡ್ರೈವಿಂಗ್‌ ಕಾರನ್ನು ಪರಿಚಯಿಸಿತ್ತು. ಈಗ ತನ್ನ ತಂತ್ರಜ್ಞಾನದ ಅಭಿವೃದ್ದಿಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸೆಲ್ಫ್‌ ‌ ಡ್ರೈವಿಂಗ್ ಬೈಸಿಕಲ್‌ ಅನ್ನು ಪರಿಚಯಿಸುತ್ತಿದೆ. ಹಾಗೆ ಒಮ್ಮೆ ಸೆಲ್ಫ್‌ ಡ್ರೈವಿಂಗ್‌ ಬೈಸಿಕಲ್‌ ಹೇಗಿರುತ್ತೆ, ಹೇಗೆ ಚಲಿಸುತ್ತೆ ಅಂತ ಕಲ್ಪನೆ ಮಾಡಿಕೊಳ್ಳಿ. ಗೂಗಲ್‌ ಅಭಿವೃದ್ದಿ ಪಡಿಸಿದ್ದು ಅಂದ್ಮೇಲೆ ಚೆನ್ನಾಗೆ ಇರುತ್ತೆ ಬಿಡಿ. ಅಂದಹಾಗೆ ಗೂಗಲ್‌ ತನ್ನ ಸೆಲ್ಫ್‌ ‌ ಡ್ರೈವಿಂಗ್‌ ಬೈಸಿಕಲ್‌ ಅನ್ನು ವಿಶ್ವದ ಪ್ರಮುಖ ಸೈಕ್ಲಿಂಗ್ ಸಿಟಿ, ಆಂಸ್ಟರ್ಡ್ಯಾಮ್‌ನಲ್ಲಿ ಪರಿಚಯಿಸುತ್ತಿದೆ. ಕೆಳಗೆ ವೀಡಿಯೋ ಸಹ ನೋಡಿ.

ಓದಿರಿ:ಪ್ರಾಣಿಗಳ ಧ್ವನಿ ಕಲಿಸಲು ಹೊಸ ಫೀಚರ್‌ ಬಿಡುಗಡೆ ಮಾಡಿದ ಗೂಗಲ್‌

ಅಂತು ಇಂತು ಬಂತು ಸೆಲ್ಫ್‌ ಡ್ರೈವಿಂಗ್ ಬೈಸಿಕಲ್‌: ಗೂಗಲ್‌!!

ಡಚ್‌ ಜನರು ಇತರ ದೇಶಗಳಿಗಿಂತ ಅಧಿಕವಾಗಿ ಸೈಕ್ಲಿಂಗ್‌ ಮಾಡುತ್ತಾರೆ. ಡಚ್‌ ವ್ಯಕ್ತಿಯೊಬ್ಬ ಪ್ರತಿ ವರ್ಷಕ್ಕೆ ಸುಮಾರು 900 ಕಿಲೋ ಮೀಟರ್‌ ಸೈಕ್ಲಿಂಗ್ ಮಾಡುತ್ತಾನೆ. ಸೆಲ್ಫ್‌ ಡ್ರೈವಿಂಗ್ ಬೈಸಿಕಲ್‌ ವಿಶೇಷತೆ ಅಂದ್ರೆ, ಬೈಸಿಕಲ್‌ ಸುರಕ್ಷತಾ ಸಂಚಾರ ಫೀಚರ್‌ ಅನ್ನು ಹೊಂದಿದೆ. ಆಂಸ್ಟರ್ಡ್ಯಾಮ್‌ ನಿವಾಸಿಗಳು ಸುರಕ್ಷತೆ ಇಂದ ಸೆಲ್ಫ್‌ ಡ್ರೈವಿಂಗ್ ಬೈಸಿಕಲ್‌ನಲ್ಲಿ ಸಂಚಾರ ಮಾಡುಬಹುದಾಗಿದೆ. ಅಲ್ಲದೇ ಗೂಗಲ್‌ ಈಗ ತಂತ್ರಜ್ಞಾನದ ಸಹಾಯದಿಂದ ನಗರದ ಚಲನಶೀಲತೆಯನ್ನು ಅಭಿವೃದ್ದಿಗೊಳಿಸುವ ಉದ್ದೇಶ ಹೊಂದಿದೆ.

ಅಂತು ಇಂತು ಬಂತು ಸೆಲ್ಫ್‌ ಡ್ರೈವಿಂಗ್ ಬೈಸಿಕಲ್‌: ಗೂಗಲ್‌!!

ನೆದರ್‌ಲ್ಯಾಂಡ್‌ ಗೂಗಲ್‌ ಈಗ ಅಗಾಧವಾದ ಹೆಮ್ಮೆಯ ತಂತ್ರಜ್ಞಾನ ಅಭಿವೃದ್ದಿಪಡಿಸುವಲ್ಲಿ ನಿರತವಾಗಿದ್ದು, ಅಚ್ಚರಿ ಅಂದ್ರೆ ಡಚ್‌ ತಂಡವೊಂದು ಸೆಲ್ಫ್‌ ಡ್ರೈವಿಂಗ್ ಬೈಸಿಕಲ್‌ ಸಂಶೋಧನಾ ಅಭಿವೃದ್ದಿಯಲ್ಲಿ ತೊಡಗಿದೆ. ಅಲ್ಲದೇ ಅವರದೇ ಆದ ತವರು ದೇಶಕ್ಕೆ ಉತ್ತಮವಾಗಿ ಪರಿಣಾಮ ಬೀರಲಿದೆ. 

ವೀಡಿಯೋ ಕೃಪೆ:Google Nederland

English summary
Google introduce the self-driving bicycle in the Netherlands. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot