ಚುನಾವಣಾ ಮಾಹಿತಿ,ಸುದ್ದಿಗಾಗಿ ಗೂಗಲ್‌ನಿಂದ ವಿಶೇಷ ವೆಬ್‌ಸೈಟ್
ಮುಂದಿನ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿರುವಂತೆ ಇತ್ತ ಇಂಟರ್‌ನೆಟ್ ದಿಗ್ಗಜ ಕಂಪೆನಿಗಳು ಜನರಿಗೆ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ಆರಂಭಿಸಿದೆ.
ಕಳೆದ ವಾರ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿಯನ್ನು ಜನರ ಮೊಬೈಲ್‌ಗೆ ಉಚಿತವಾಗಿ ತಲುಪಿಸಿ ಜಾಗೃತಿ ಮೂಡಿಸುವುದಾಗಿ ಹೇಳಿತ್ತು.ಈಗ ಗೂಗಲ್ ಸಹ ಜನರಲ್ಲಿ ಚುನಾವಣಾ ಜಾಗೃತಿ ಮತ್ತು ಮಾಹಿತಿಗಾಗಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿರುವ ಹೊಸ ವೆಬ್‌ಸೈಟ್‌ನ್ನು ಆರಂಭಿಸಿದೆ.

ಅಷ್ಟೇ ಅಲ್ಲದೇ ಇದರಲ್ಲಿ ಗೂಗಲ್ ಮ್ಯಾಪ್ ಇದ್ದು ಚುನಾವಣಾ ಸಂದರ್ಭದಲ್ಲಿ ಯಾವ ಪ್ರದೇಶ ಎಲ್ಲಿದೆ ಎಂಬುದನ್ನು ಸಹ ನೋಡಬಹುದಾಗಿದೆ. ಅಷ್ಟೇ ಅಲ್ಲದೇ ಹೋಮ್ ಬಟನ್ ಕ್ಲಿಕ್ ಮಾಡಿದರೆ ಇತ್ತೀಚಿನ ಗೂಗಲ್ ನ್ಯೂಸ್‌ನಲ್ಲಿ ಬಂದಿರುವ ವಿವಿಧ ರಾಜಕೀಯ ಪಕ್ಷಗಳ ಸುದ್ದಿಗಳು ಸಹ ವೀಕ್ಷಿಸಬಹುದಾಗಿದೆ.ಜೊತೆಗೆ ರಾಜಕೀಯ ಪಕ್ಷದ ನಾಯಕರ ಭಾಷಣಗಳ ವಿಡಿಯೋ ಸಹ ಇದಕ್ಕೆ ಅಪ್‌ಲೋಡ್ ಮಾಡುವಂತೆ ವೆಬ್‌ಸೈಟ್‌ನ್ನು ರೂಪಿಸಲಾಗಿದೆ.
ಗೂಗಲ್‌ನ ಹೊಸ ರಾಜಕೀಯ ಮತ್ತು ಚುನಾವಣಾ ವೆಬ್‌ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ:www.google.co.in/elections
ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ ಸುದ್ದಿಯನ್ನು ಶೇರ್ ಮಾಡಿ


Click it and Unblock the Notifications








