ವೇಗದ ಇಂಟರ್ನೆಟ್ ಸೇವೆಗಾಗಿ ಗೂಗಲ್ ವೈಫೈ ರೂಟರ್
ಗೂಗಲ್ ವೈಫೈ ರೂಟರ್ ಅನ್ನು ಲಾಂಚ್ ಮಾಡಿದ್ದು, ಇದರ ಮೂಲಕ ಮನೆಗಳಲ್ಲಿ ವೈಫೈ ಸಂಪರ್ಕವನ್ನು ಏರ್ಪಡಿಸುವುದರ ಮೂಲಕ ತನ್ನ ಸೇವೆಗಳಿಗೆ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಪ್ರಯತ್ನದ ಮೊದಲ ಹೆಜ್ಜೆಯನ್ನು ಗೂಗಲ್ ಇರಿಸಿದೆ.
ಓದಿರಿ: ಗೂಗಲ್ ಪ್ಲೇ ಸ್ಟೋರ್ ಉಚಿತವಾಗಿ ಬಳಸಬೇಕೇ? ಇಲ್ಲಿದೆ ಟಿಪ್ಸ್
ಸಿಲಿಂಡರ್ ಆಕಾರದಲ್ಲಿರುವ ಈ ರೂಟರ್, ಗೂಗಲ್ ಸ್ಟೋರ್, ಅಮೆಜಾನ್ ಮತ್ತು ವಾಲ್‌ಮಾರ್ಟ್.ಕಾಮ್‌ನಲ್ಲಿ ಲಭ್ಯವಿದೆ. ಬಿಲ್ಟ್ ಇನ್ ಆಂಟೆನಾಗಳು ರೂಟರ್‌ನಲ್ಲಿದ್ದು ವೇಗವಾದ ಸಂಪರ್ಕಕ್ಕೆ ಇದು ಹೆಚ್ಚು ಸಹಕಾರಿಯಾಗಿದೆ ಎಂದು ಗೂಗಲ್ ಬ್ಲಾಗ್‌ನಲ್ಲಿ ತಿಳಿಸಿದೆ.

ರೂಟರ್‌ನೊಂದಿಗೆ, ಡಿವೈಸ್ ಅನ್ನು ಬಳಸಿಕೊಂಡು ಗ್ರಾಹಕರು ಅತಿವೇಗದ ಇಂಟರ್ನೆಟ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ ಅಂತೆಯೇ ಡೌನ್‌ಲೋಡ್ ಮಾಡುವುದು ಮತ್ತು ವೀಡಿಯೊ ಸ್ಟ್ರೀಮಿಂಗ್ ಮೊದಲಾದ ಚಟುವಟಿಕೆಗಳನ್ನು ಯಾವುದೇ ತೊಂದರೆಯಿಲ್ಲದೆ ನಿಭಾಯಿಸಬಹುದಾಗಿದೆ ಎಂದು ಕಂಪೆನಿ ತಿಳಿಸಿದೆ.
ಓದಿರಿ: ಗೂಗಲ್ ಮಾಂತ್ರಿಕನ ಟಾಪ್ 10 ಮ್ಯಾಜಿಕ್ಸ್
ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಇದಕ್ಕಾಗಿ ಕಂಪೆನಿ ಒದಗಿಸುತ್ತಿದ್ದು, ಆಂಡ್ರಾಯ್ಡ್ ಓಎಸ್ ಮತ್ತು ಕ್ರೋಮ್ ಬ್ರೌಸರ್‌ನಂತೆ ಇದು ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ಹೇಳಿದೆ.


Click it and Unblock the Notifications








