ಗೂಗಲ್ ಮಾಂತ್ರಿಕನ ಟಾಪ್ 10 ಮ್ಯಾಜಿಕ್ಸ್

By Shwetha
|

ಗೂಗಲ್ ಒಂದು ಜನಪ್ರಿಯ ಹುಡುಕಾಟ ಎಂಜಿನ್ ಮಾತ್ರವಾಗಿಲ್ಲದೆ, ಇದು ಕೆಲವೊಂದು ಮನರಂಜನಾತ್ಮಕ ಮತ್ತು ಮೋಜಿನ ವಿಶೇಷತೆಗಳನ್ನು ಒದಗಿಸುತ್ತಿವೆ. ನಿಮಗೆ ಬೇಜಾರಾದಾಗ ಯಾವ ಗೇಮ್ ಅನ್ನು ಆಡಬೇಕು ಎಂಬ ಸಲಹೆಯನ್ನು ನೀಡುವುದರ ಜೊತೆಗೆ ಪರಿಣಾಮಕಾರಿಯಾಗಿರುವ ಮಾಹಿತಿಗಳನ್ನು ಒದಗಿಸುವಲ್ಲಿ ಗೂಗಲ್ ನಿಷ್ಣಾತ.

ಓದಿರಿ: ಫೇಸ್‌ಬುಕ್ ಒಡೆತನದಲ್ಲಿರುವ ಟಾಪ್ ಕಂಪೆನಿಗಳು

ಇಂದಿನ ಲೇಖನದಲ್ಲಿ ಗೂಗಲ್ ಬಳಕೆದಾರರಿಗೆ ಒದಗಿಸುತ್ತಿರುವ ಕಮಾಲಿನ ವಿಶೇಷತೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದು ಗೂಗಲ್‌ನ ಮಹಿಮೆಗೆ ನೀವು ಬೆರಗಾಗಲೇಬೇಕು. ಬಳಕೆದಾರ ಸ್ನೇಹಿ ಮೋಜುದಾಯಕ ಅಂಶಗಳೇನು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.

ಜರ್ಗ್ ರಶ್

ಜರ್ಗ್ ರಶ್

ಗೂಗಲ್‌ನಲ್ಲಿ 'ಜರ್ಗ್ ರಶ್' ಎಂದು ಟೈಪ್ ಮಾಡಿ ನಿಮ್ಮೆಲ್ಲಾ ಸರ್ಚ್ ಅಂಶಗಳನ್ನು ಇದು ತಿನ್ನಲು ಆರಂಭಿಸುವುದನ್ನು ನಿಮಗೆ ಕಾಣಬಹುದು.

ಫ್ಲೈಟ್ ಸಿಮ್ಯುಲೇಟರ್

ಫ್ಲೈಟ್ ಸಿಮ್ಯುಲೇಟರ್

ಜೆಟ್ ಅನ್ನು ಹಾರಿಸಬೇಕೆಂಬ ಬಯಕೆಯೇ? ಗೂಗಲ್ ಆನ್ ಮಾಡಿ. ಆದರೆ ನಿಮಗೆ ಫ್ಲೈಟ್ ಅನ್ನು ಹಾರಿಸಬಹುದಾಗಿದೆ. ಗೂಗಲ್ ಅರ್ತ್ ಬಳಕೆದಾರರಿಗೆ ವರ್ಚುವಲ್ ಫ್ಲೈಟ್ ಅನ್ನು ಹಾರಲು ಅನುಮತಿಸುತ್ತದೆ ಟೂಲ್ಸ್ ಮೆನುಗೆ ಹೋಗಿ ಮತ್ತು 'ಎಂಟರ್ ಫ್ಲೈಟ್ ಸಿಮ್ಯುಲೇಟರ್' ಎಂಬುದನ್ನು ಆಯ್ಕೆಮಾಡಿ.

ಪ್ಯಾಕ್ ಮ್ಯಾನ್

ಪ್ಯಾಕ್ ಮ್ಯಾನ್

ಪ್ಯಾಕ್ ಮ್ಯಾನ್ ಗೇಮ್ ನೆನಪಿಲ್ಲದವರು ಯಾರಿರಬಹುದು ಹೇಳಿ. ಎಚ್‌ಡಿ ಗೇಮ್‌ಗಳ ಸಮಯದಲ್ಲೂ ಈ ಗೇಮ್ಸ್ ಯಶಸ್ಸನ್ನು ಕಂಡಿತ್ತು. ಈ ಗೇಮ್‌ನ 30 ನೇ ವಾರ್ಷಿಕೋತ್ಸವಕ್ಕಾಗಿ ಡೂಡಲ್ ಅನ್ನು ಗೂಗಲ್ ಹೊರತಂದಿದ್ದು ತಮ್ಮ ಕೀಬೋರ್ಡ್‌ಗಳನ್ನು ಬಳಸಿ ಬಳಕೆದಾರರು ಇದನ್ನು ಆಡಬಹುದಾಗಿದೆ.

ಬ್ಯಾರೆಲ್ ರೋಲ್

ಬ್ಯಾರೆಲ್ ರೋಲ್

ಬ್ಯಾರೆಲ್ ರೋಲ್ ಎಂಬುದು ಗೂಗಲ್ ಬಳಕೆದಾರರಿಗೆ ಒದಗಿಸಿರುವ ಮೋಜುದಾಯಕ ಸಲಹೆ ಎಂದೆನಿಸಿದೆ. ನಿಮ್ಮ ಬ್ರೌಸರ್‌ನಲ್ಲಿ ಬ್ಯಾರೆಲ್ ರೋಲ್ ಎಂದು ಟೈಪ್ ಮಾಡಿ ನಂತರ ನಿಮಗೆ ಸಂಪೂರ್ಣ ಪುಟ 360 ಡಿಗ್ರಿಯಲ್ಲಿ ತಿರುಗುವುದನ್ನು ಕಾಣಬಹುದಾಗಿದೆ.

ಗಿಟಾರ್

ಗಿಟಾರ್

ಲೆಸ್ ಪಾಲ್‌ನ 96 ನೇ ಜನ್ಮದಿನದ ಅಂಗವಾಗಿ ಗೂಗಲ್ ಇನ್ನೊಂದು ಡೂಡಲ್ ಅನ್ನು ಹೊರತಂದಿದೆ. ಗೂಗಲ್ ಲೋಗೋವೇ ಇಲ್ಲಿ ಡೂಡಲ್ ಆಗಿ ಪರಿವರ್ತಿತವಾಗಿದೆ. ನಿಮ್ಮ ಮೌಸ್ ಕರ್ಸರ್ ಬಳಸಿ ಇದನ್ನು ನುಡಿಸಬಹುದಾಗಿದೆ.

ಹರ್ಡಲ್ಸ್

ಹರ್ಡಲ್ಸ್

ಲಂಡನ್ ಒಲಿಂಪಿಕ್ಸ್ 2012 ರ ಸಮಯದಲ್ಲಿ, ಹರ್ಡಲ್ಸ್‌ಗಾಗಿ ಗೂಗಲ್ ಡೂಡಲ್‌ಗಳನ್ನು ರಚಿಸಿದೆ. ನಿಮ್ಮ ಕೀಬೋರ್ಡ್ ಅನ್ನು ಬಳಸಿಕೊಂಡು ಈ ಗೇಮ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ.

ಮೂಗ್ ಸಿಂತಿಸಿಸರ್

ಮೂಗ್ ಸಿಂತಿಸಿಸರ್

ಸಂಗೀತದಲ್ಲಿ ಇನ್ನಷ್ಟು ಸ್ವರ ಮಾಧುರ್ಯವನ್ನು ಸೇರಿಸುವುದಕ್ಕಾಗಿ 1960 - 70 ರ ದಶಕದಲ್ಲಿ, ಮೂಂಗ್ ಸಿಂತಿಸಿಸರ್ ಅನ್ನು ಬಳಸಲಾಗುತ್ತಿತ್ತು. ರಾಬರ್ಟ್ ಮೂಂಗ್‌ನ 78 ನೇ ಜನ್ಮದಿನಕ್ಕಾಗಿ ಗೂಗಲ್ ಇಂಟರಾಕ್ಟೀವ್ ಮೂಗ್ ಸಿಂತಿಸಿಸರ್ ಅನ್ನು ನಿರ್ಮಿಸಿದೆ. ನಿಮ್ಮ ಕೀಬೋರ್ಡ್ ಮತ್ತು ಮೌಸ್ ಬಳಸಿಕೊಂಡು ಈ ಉಪಕರಣವನ್ನು ನಿಮಗೆ ನಿಯಂತ್ರಿಸಬಹುದಾಗಿದೆ.

ಸ್ನೇಕ್

ಸ್ನೇಕ್

1970 ರ ದಶಕದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಈ ಗೇಮ್ ಆಟವನ್ನು ಆಡುವವರಿಗೆ ಮೋಜು ಮತ್ತು ಮನರಂಜನೆಯನ್ನು ನೀಡುತ್ತದೆ.

ಸ್ಲಾಲಮ್ ಕೇನೋ

ಸ್ಲಾಲಮ್ ಕೇನೋ

ಲಂಡನ್ ಒಲಿಂಪಿಕ್ಸ್ 2012 ರ ಸ್ಮರಣೆಗಾಗಿ ಸ್ಲಾಲಮ್ ಕೇನೋ ಡೂಡಲ್ ಅನ್ನು ಗೂಗಲ್ ಪ್ರಸ್ತುತಪಡಿಸಿದೆ. ಈ ಆಟ ಕೂಡ ಹೆಚ್ಚಿನ ಮಜವನ್ನುಂಟು ಮಾಡುತ್ತಿದ್ದು ನಿಮ್ಮ ಕೀಬೋರ್ಡ್ ಬಳಸಿ ಈ ಆಟವನ್ನು ಆಡಬಹುದಾಗಿದೆ.

ಹುಡುಕಾಟದಲ್ಲಿ ಬೆಲೆ ಶ್ರೇಣಿ

ಹುಡುಕಾಟದಲ್ಲಿ ಬೆಲೆ ಶ್ರೇಣಿ

ಬಜೆಟ್ ದರದಲ್ಲಿ ಫೋನ್ ಹುಡುಕುತ್ತಿದ್ದೀರಾ? ನಿಖರವಾದ ಬೆಲೆಯ ಆಧಾರದ ಮೇಲೆ ಸ್ಮಾರ್ಟ್‌ಫೋನ್‌ಗಳನ್ನು ಹುಡುಕಾಡಲು ಗೂಗಲ್ ನಿಮಗೆ ಸಹಾಯ ಮಾಡುತ್ತದೆ. ಹುಡುಕಾಟ ಪಟ್ಟಿಯಲ್ಲಿ ಉತ್ಪನ್ನ ಮತ್ತು ಬೆಲೆಯನ್ನು ನಮೂದಿಸಿ ಇಲ್ಲಿ ನಿಮಗೆ ನಿಖರವಾದ ಆಯ್ಕೆಗಳು ಲಭ್ಯವಾಗುತ್ತವೆ.

Most Read Articles
Best Mobiles in India

English summary
Google is not just a popular search engine, it also offers some funny and entertaining features. From helping you find what you need to playing a few games when you are bored, it does all that and more. You will really be surprised by some of the applications Google offers just for users'fun.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more