Subscribe to Gizbot

ಗೂಗಲ್ ಪ್ಲೇ ಸ್ಟೋರ್‌ ಉಚಿತವಾಗಿ ಬಳಸಬೇಕೇ? ಇಲ್ಲಿದೆ ಟಿಪ್ಸ್

Written By:

ಗೂಗಲ್ ಪ್ಲೇ ಸ್ಟೋರ್ ಇರುವುದಕ್ಕಾಗಿಯೇ ಹೆಚ್ಚಿನ ಮೊಬೈಲ್ ಪ್ರೇಮಿಗಳ ಆಯ್ಕೆ ಆಂಡ್ರಾಯ್ಡ್ ಆಗಿದೆ. ಅಲ್ಲಿ ಲಭ್ಯವಾಗುವ ನೂರಾರು ಅಪ್ಲಿಕೇಶನ್‌ಗಳನ್ನು ಸ್ವತಂತ್ರವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂಬ ಆಸೆಯೂ ಇದರಲ್ಲಿ ಅಡಗಿದೆ. ಹಾಗಿದ್ದರೆ ಈ ಸ್ವತಂತ್ರ ಪ್ಲಾಟ್‌ಫಾರ್ಮ್‌ನಿಂದ ಇನ್ನಷ್ಟನ್ನು ಡೌನ್‌ಲೋಡ್ ಮಾಡಿಕೊಳ್ಳು ಅದೃಷ್ಟ ನಿಮ್ಮದಾಗಿದ್ದಲ್ಲಿ ಎಷ್ಟು ಒಳ್ಳೆಯದು ಅಲ್ಲವೇ?

ಓದಿರಿ: ಎಚ್ಚರ: ಬ್ಲ್ಯೂಟೂತ್‌ನ ಹೆಚ್ಚು ಬಳಕೆಯಿಂದ ತೂಕ ಏರಿಕೆ

ಹಾಗಿದ್ದರೆ ತಡಮಾಡದೇ ಇಂದಿನ ಲೇಖನದಲ್ಲಿ ಗೂಗಲ್ ಪ್ಲೇಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಲು ಅನುಸರಿಸಬಹುದಾದ ಸಲಹೆ ಸೂಚನೆಗಳ ಕುರಿತು ಅರಿತುಕೊಳ್ಳಿ. ಈ ವಿಧಾನಗಳಿಂದ ನೀವು ದುಡ್ಡನ್ನು ಉಳಿಸಬಹುದು ಮತ್ತು ಇನ್ನಷ್ಟು ಆನಂದದಾಯಕವಾಗಿ ಗೂಗಲ್ ಪ್ಲೇ ಬಳಕೆಯನ್ನು ಮಾಡಬಹುದು.

ಓದಿರಿ: ನಮ್ಮ ಊರು ಬೆಂಗಳೂರಿಗೆ ವಿಶ್ವದಲ್ಲೇ ಮಾನ್ಯತೆ

ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕುರಿತ ಸಲಹೆಗಳನ್ನು ತಿಳಿದುಕೊಳ್ಳಿ ಮತ್ತು ಅನುಷ್ಟಾನಕ್ಕೆ ತನ್ನಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದೇಶಲ್ಲಿ ದೊರೆಯದ ಅಪ್ಲಿಕೇಶನ್

ನಿಮ್ಮ ದೇಶಲ್ಲಿ ದೊರೆಯದ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿ

ವಿಪಿಎನ್ ಅಪ್ಲಿಕೇಶನ್‌ಗಳಾದ ಹೈಡ್‌ನಿಂಜಾ, ಶೇಲ್‌ಫೈರ್ ಮೊದಲಾದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ನಿಮ್ಮ ಐಪಿ ವಿಳಾಸವನ್ನು ಇದು ಮಾಸ್ಕ್ ಮಾಡುತ್ತದೆ ಮತ್ತು ನಿಮ್ಮ ಆಯ್ಕೆಯ ದೇಶದ ರಿಮೋಟ್ ಐಪಿ ಆಯ್ಕೆಯನ್ನು ಒದಗಿಸುತ್ತದೆ.

ಆ ದೇಶದ ಪ್ಲೇ ಸ್ಟೋರ್

ವಿಪಿಎನ್ ಅಪ್ಲಿಕೇಶನ್‌

ವಿಪಿಎನ್ ಅಪ್ಲಿಕೇಶನ್‌ನಲ್ಲಿ ನೀವು ಪ್ರವೇಶಿಸಬೇಕೆಂದಿರುವ ಆ ದೇಶದ ಪ್ಲೇ ಸ್ಟೋರ್ ಆಯ್ಕೆಮಾಡಿ. ತದನಂತರ ಪ್ಲೇ ಸ್ಟೋರ್ ತೆರೆಯಿರಿ.

ಡಿವೈಸ್ ನಿರ್ವಹಿಸಿ

ಪ್ಲೇ ಸ್ಟೋರ್‌ನಲ್ಲಿ ಡಿವೈಸ್ ನಿರ್ವಹಿಸಿ

ಪ್ಲೇ ಸ್ಟೋರ್ ಡಿವೈಸ್‌ಗಳನ್ನು ನಿರ್ವಹಿಸಲು, ಬ್ರೌಸರ್‌ನಲ್ಲಿ ಗೂಗಲ್ ಪ್ಲೇ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಆ ಖಾತೆಯೊಂದಿಗೆ ಸಂಪರ್ಕವನ್ನು ಹೊಂದಿರುವ ಎಲ್ಲಾ ಡಿವೈಸ್‌ಗಳ ಪಟ್ಟಿ ನಿಮಗೆ ದೊರೆಯುತ್ತದೆ.

ಮೆನೂಸ್‌

ನಿಕ್ ನೇಮ್

ಸಂಪಾದನೆಯನ್ನು ತಟ್ಟುವ ಮೂಲಕ ನಿಮ್ಮ ಡಿವೈಸ್‌ಗಳಿಗೆ ನಿಕ್ ನೇಮ್ ನೀಡಬಹುದು. ಶೋ ಇನ್ ಮೆನೂಸ್ ಬಾಕ್ಸ್ ಅನ್ನು ಅನ್‌ಟಿಕ್ ಮಾಡುವ ಮೂಲಕ ನಿಮ್ಮ ಮೆನೂಸ್‌ನಿಂದ ಅವನ್ನು ಮರೆಮಾಡಬಹುದಾಗಿದೆ.

ಪೇರಂಟಲ್ ಲಾಕ್

ಗೂಗಲ್ ಪ್ಲೇನಲ್ಲಿ ಪೇರಂಟಲ್ ಲಾಕ್

ಪ್ಲೇ ಸ್ಟೋರ್ ಅಪ್ಲಿಕೇಶನ್‌ನಲ್ಲಿ, ಮೆನು ಐಕಾನ್ ತಟ್ಟಿರಿ ನಂತರ ಸೆಟ್ಟಿಂಗ್ಸ್ > ಪ್ಯಾರೆಂಟಲ್ ಕಂಟ್ರೋಲ್ಸ್ ಮತ್ತು ಸ್ಲೈಡರ್ ತಟ್ಟಿರಿ.

ಪಿನ್ ಕೋಡ್

ಪ್ಲೇ ಸ್ಟೋರ್‌

ಪ್ಯಾರೆಂಟಲ್ ಲಾಕ್ ಪಿನ್ ಕೋಡ್ ರಚಿಸಿ, ಪ್ಲೇ ಸ್ಟೋರ್‌ನಲ್ಲಿ ನೀವು ಡೌನ್‌ಲೋಡ್ ಮಾಡಬಹುದಾದ ಪಟ್ಟಿಗೆ ಹೋಗಿ ಮತ್ತು ನಿರ್ಬಂಧನೆಗಳನ್ನು ಹೇರಿ.

ಡೌನ್‌ಲೋಡ್

ನಿರ್ಬಂಧನೆ ಹೊಂದಿಸಿ

ನಿರ್ಬಂಧನೆಗಳನ್ನು ಒಮ್ಮೆ ಹೊಂದಿಸಿದ ನಂತರ, ನೀವು ಡೌನ್‌ಲೋಡ್ ಮಾಡಲು ಪ್ರಯತ್ನಿಸಿದಾಗಲೆಲ್ಲಾ ಇದು ನಿರ್ಬಂಧನೆಗಳನ್ನು ತೋರಿಸುತ್ತದೆ.

ಮರುಪಾವತಿ

ಪ್ಲೇ ಸ್ಟೋರ್‌ನಲ್ಲಿ ಮರುಪಾವತಿ

ಅಪ್ಲಿಕೇಶನ್ ಅನ್ನು ಒಮ್ಮೆ ನೀವು ಖರೀದಿಸಿದ ನಂತರ, ಇನ್‌ಸ್ಟಾಲ್ ಅಥವಾ ತೆರೆಯಿರಿ ಎಂಬ ಎರಡು ಆಯ್ಕೆಯನ್ನು ನಿಮಗೆ ಕಾಣಬಹುದು. ಇದರ ನಂತರ ಮರುಪಾವತಿ ಆಯ್ಕೆ ಕೂಡ ನಿಮಗೆ ಕಾಣಸಿಗುತ್ತದೆ. ನಿಮ್ಮ ಖರೀದಿಯ ಎರಡು ಗಂಟೆಗಳ ನಂತರ ರಿಫಂಡ್ ಬಟನ್ ತಟ್ಟಿರಿ ಮತ್ತು ಹಣವನ್ನು ಮರುಪಡೆದುಕೊಳ್ಳಿ ಯಾವುದೇ ಪ್ರಶ್ನೆಯನ್ನು ಇದು ಕೇಳುವುದಿಲ್ಲ.

ದೃಢೀಕರಣ ನಿರ್ವಹಿಸಿ

ಪ್ಲೇ ಸ್ಟೋರ್ ಖರೀದಿಗೆ ದೃಢೀಕರಣ ನಿರ್ವಹಿಸಿ

ಪ್ಲೇ ಸ್ಟೋರ್ ಅಪ್ಲಿಕೇಶನ್‌ನಲ್ಲಿ, ಮೆನು ಐಕಾನ್ ತಟ್ಟಿರಿ. ಸೆಟ್ಟಿಂಗ್ಸ್ > ಖರೀದಿಗಾಗಿ ದೃಢೀಕರಣ ಅಗತ್ಯವಿದೆ ನಂತರ 'ಡಿವೈಸ್‌ನಲ್ಲಿ ಗೂಗಲ್ ಪ್ಲೇ ಮೂಲಕ ಎಲ್ಲಾ ಖರೀದಿಗಳಿಗೆ' ಆರಿಸಿ.

ಆಂಡ್ರಾಯ್ಡ್ ಡಿವೈಸ್‌

ಗಮನಿಸಿ

ನೀವು ಹೊಂದಿರುವ ಪ್ರತೀ ಆಂಡ್ರಾಯ್ಡ್ ಡಿವೈಸ್‌ಗೆ ಪ್ರತ್ಯೇಕವಾಗಿ ನೀವು ಈ ಕಾರ್ಯವನ್ನು ಮಾಡಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Google Play Store is often the main reason that people choose Android, as they get to enjoy the cornucopia of apps on offer there. To get the most out of your shopping experience, we've gathered some Google Play Store tips and tricks to help you test drive apps, save money and more. Check them out below.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot