Subscribe to Gizbot

ಗೂಗಲ್‌ ಮ್ಯಾಪ್‌ನಿಂದ 'ವೈಫೈ ಓನ್ಲಿ ಮೋಡ್‌' ಬಿಡುಗಡೆ

Posted By:

ಸರ್ಚ್‌ ಇಂಜಿನ್‌ ದೈತ್ಯ ಇತ್ತೀಚೆಗೆ ತಾನೆ ತನ್ನ ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್‌ನಲ್ಲಿ ಸ್ಥಳ ಮತ್ತು ಮಾರ್ಗದ ನೈಜ ದೃಶ್ಯ ತೋರಿಸುವ "Cloud Free Imagery' ಫೀಚರ್‌ ಅನ್ನು ಬಿಡುಗಡೆ ಮಾಡಿತ್ತು. ಈ ಫೀಚರ್ ಹಿಂದೆಯೇ ಈಗ ಗೂಗಲ್‌ ತನ್ನ ಮ್ಯಾಪ್‌ ಬಳಕೆದಾರರ ಉತ್ತಮ ಅನುಭವಕ್ಕಾಗಿ 'ವೈಫೈ ಓನ್ಲಿ ಮೋಡ್‌' ಫೀಚರ್‌ ಅನ್ನು ಬಿಡುಗಡೆ ಮಾಡಿದೆ. ದಿನನಿತ್ಯ ಗೂಗಲ್‌ ಮ್ಯಾಪ್‌ ಬಳಸುವ ಬಳಕೆದಾರರು ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಗೂಗಲ್‌ ಮ್ಯಾಪ್‌ನಲ್ಲಿ ಸ್ಥಳ ಮತ್ತು ಮಾರ್ಗದ ನೈಜ ದೃಶ್ಯ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ವೈಫೈ ಓನ್ಲಿ ಮೋಡ್‌

ವೈಫೈ ಓನ್ಲಿ ಮೋಡ್‌

ಗೂಗಲ್‌ ಅಂತಿಮವಾಗಿ ತನ್ನ ಮ್ಯಾಪ್‌ ಅಪ್ಲಿಕೇಶನ್‌ಗೆ 'Wi-Fi Only Mode' ಅನ್ನು ಜಾರಿಗೊಳಿಸಿದೆ. ಅಂದಹಾಗೆ ಬಳಕೆದಾರರು 'Wi-Fi Only Mode ಫೀಚರ್‌ ಇರುವ ಸೆಟ್ಟಿಂಗ್‌ ಪಡೆಯಲು V9.32 ಮ್ಯಾಪ್‌ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿದೆ.

ಸೆಟ್ಟಿಂಗ್ಸ್‌ ಸ್ಕ್ರೀನ್‌

ಸೆಟ್ಟಿಂಗ್ಸ್‌ ಸ್ಕ್ರೀನ್‌

'Wi-Fi Only Mode' ಇರುವ ಹೊಸ ಟಾಗಲ್‌ ಫೀಚರ್‌ ಅನ್ನು ಸೆಟ್ಟಿಂಗ್‌ ಸ್ಕ್ರೀನ್‌ನಲ್ಲಿ ಪಡೆಯಬಹುದಾಗಿದ್ದು, ಈ ಫೀಚರ್‌ ಬಳಸಿದವರೇ ಅದೃಷ್ಚವಂತರು ಎನ್ನಬಹುದಾಗಿದೆ.

 ಆಫ್‌ಲೈನ್‌ ಏರಿಯಾ

ಆಫ್‌ಲೈನ್‌ ಏರಿಯಾ

ಗೂಗಲ್‌ನ ಹೊಸ ಟಾಗಲ್ ಫೀಚರ್‌ ಹಿಂದೆ ಹೇಳಿದ್ದ 'ಆಫ್‌ಲೈನ್‌ ಏರಿಯಾ' ಫೀಚರ್‌ ಅನ್ನೇ ಪ್ರಸ್ತುತಪಡಿಸಿದ್ದು, ಈ ಫೀಚರ್‌ ನಿಮ್ಮ ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್‌ ಅನ್ನು ಬಳಕೆದಾರರ ಸೆಲ್ಯೂಲಾರ್ ಅಥವಾ ಡಾಟಾ ನೆಟ್‌ವರ್ಕ್‌ನಿಂದ ಸಂಪರ್ಕ ಕಡಿತಗೊಳಿಸುತ್ತದೆ. ಆದರೆ ಮ್ಯಾಪ್ ಅಪ್ಲಿಕೇಶನ್‌ ಬಳಸುವ ವೇಳೇ ಸ್ವಲ್ಪ ಪ್ರಮಾಣದ ಡಾಟಾ ಬಳಸಿಕೊಳ್ಳುತ್ತದೆ ಎಂದು ಗೂಗಲ್‌ ಹೇಳಿದೆ.

ಸ್ವಿಚಿಂಗ್‌ ಟಾಗಲ್‌

ಸ್ವಿಚಿಂಗ್‌ ಟಾಗಲ್‌

ಫೋಟೋದಲ್ಲಿ ನೀವು ನೋಡುತ್ತಿರುವಂತೆ ನೀಲಿ ಬಣ್ಣದ ಗಾಗಲ್‌ ಅನ್ನು ಸ್ವಿಚ್‌ ಮಾಡಿದರೆ, ಬಳಕೆದಾರರು 'ವೈಫೈ ಓನ್ಲಿ ಮೋಡ್‌'ನಲ್ಲಿ ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್‌ ಇರುವುದರ ಬಗ್ಗೆ ಖಚಿತಪಡಿಸಿಕೊಳ್ಳಬಹುದು.

ಗೂಗಲ್‌ ನೋಟಿಫಿಕೇಶನ್‌

ಗೂಗಲ್‌ ನೋಟಿಫಿಕೇಶನ್‌

ಬಸ್ಸು ಮತ್ತು ರೈಲಿನಲ್ಲಿ ಆಗಾಗ್ಗೆ ಪ್ರಯಾಣ ಮಾಡುವವರು ಗೂಗಲ್‌ ಮ್ಯಾಪ್‌ ಆಧಾರಿತವಾಗಿರುತ್ತಾರೆ. ಅವರಿಗೆ 'ವೈಫೈ ಓನ್ಲಿ ಮೋಡ್‌' ಇಷ್ಟವಾಗಲಿದೆ ಎಂದು ಗೂಗಲ್‌ ನೋಟಿಫೀಕೇಶನ್‌ನಲ್ಲಿ ಹೇಳಿದೆ. ಅಲ್ಲದೇ ಈ ಫೀಚರ್‌ನಿಂದ ಅಡ್ಡ ದಾರಿಗಳ ಬಗ್ಗೆ ಸೂಚನೆ ಸಿಗಲಿದೆ.

 ಗೂಗಲ್‌ ಮ್ಯಾಪ್‌

ಗೂಗಲ್‌ ಮ್ಯಾಪ್‌

ಗೂಗಲ್‌ ಇತ್ತೀಚೆಗೆ ತನ್ನ ಗೂಗಲ್‌ ಮ್ಯಾಪ್‌ ಬಳಕೆದಾರರಿಗೆ ಇಮೇಜ್‌ ಗುಣಮಟ್ಟದಲ್ಲಿ ಉತ್ತಮವಾಗಿ ವಾಸ್ತವವಾಗಿ ಪ್ರದೇಶಗಳು ಕಾಣುವಂತೆ ಅಭಿವೃದ್ದಿಗೊಳಿಸಿತ್ತು. ಗೂಗಲ್‌ ತನ್ನ ಮ್ಯಾಪ್‌ನಲ್ಲಿ ಮೋಡ ಮುಸುಕಿರುವುದರ ರಹಿತ ಚಿತ್ರಣವನ್ನು ಮ್ಯಾಪ್‌ ಬಳಕೆದಾರರಿಗೆ ನೀಡಲು ಪ್ರಾರಂಭಿಸಿದೆ.

ಗೂಗಲ್‌ ಮ್ಯಾಪ್‌

ಗೂಗಲ್‌ ಮ್ಯಾಪ್‌

ಗೂಗಲ್‌ ಮ್ಯಾಪ್‌ನಲ್ಲಿ ಸ್ಥಳ ಮತ್ತು ಮಾರ್ಗದ ನೈಜ ಚಿತ್ರಣ ಹೇಗೆ ಕಾಣುತ್ತದೆ ಎಂಬುದನನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಪ್ರಖ್ಯಾತ 'ಪ್ರಿಸ್ಮ' ಆಪ್‌ ಡೌನ್‌ಲೋಡ್‌ ಆಂಡ್ರಾಯ್ಡ್‌ಗಳಿಗೂ ಲಭ್ಯ

ಸಾಫ್ಟ್‌ವೇರ್‌ನಂತೆ ಮೀನುಗಳು ಮನುಷ್ಯರ ಮುಖಗಳ ವ್ಯತ್ಯಾಸ ಗುರುತಿಸುತ್ತವೆ!

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Upon switching the toggle on, a blue bar appears at the top of the screen to inform users that the app is in Wi-Fi only mode.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot