ರಸ್ತೆಗೆ ಇಳಿಯಲಿದೆ ಆಂಡ್ರಾಯ್ಡ್‌ ಕಾರು!

Posted By:

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಆಯಿತು,ಆಂಡ್ರಾಯ್ಡ್‌ ಟ್ಯಾಬ್ಲೆಟ್‌ ಬಂತು.ಇನ್ನು ಮುಂದೆ ಆಂಡ್ರಾಯ್ಡ್‌ ಕಾರು ಮಾರುಕಟ್ಟೆಗೆ ಬರಲಿದೆ.

ಗೂಗಲ್‌ ಮಾಲೀಕತ್ವದ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಇರುವ ಕಾರುಗಳು ಮುಂದಿನ ದಿನಗಳಲ್ಲಿ ರಸ್ತೆಗೆ ಇಳಿಯಲಿದೆ.ಈ ಸಂಬಂಧ ಗೂಗಲ್‌ ಮತ್ತು ಜರ್ಮನಿಯ ಐಷಾರಾಮಿ ವಾಹನ ತಯಾರಕ ಕಂಪೆನಿ ಆಡಿ ಮಾತುಕತೆ ನಡೆಸಿದೆ.

ಕಾರಿನೊಳಗೆ ಗ್ರಾಹಕರಿಗೆ ಮ್ಯಾಪ್‌,ಮ್ಯೂಸಿಕ್‌‌,ಮೆಸೇಜ್‌ ಇನ್ನಿತರ ಸೌಲಭ್ಯ ಒದಗಿಸಲು ಆಡಿ ಕಂಪೆನಿ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಬಳಸಲು ಮುಂದಾಗಿದೆ.ಈ ಸಂಬಂಧ ಗೂಗಲ್‌ ಗ್ರಾಫಿಕ್‌ ಪ್ರೊಸೆಸರ್‌ ತಯಾರಿಸುವ ಎನ್ವೀಡಿಯಾ ಜೊತೆಗೂ ಮಾತುಕತೆ ನಡೆಸಿದೆ.

ಅಮೆರಿಕದ ಲಾಸ್‌ವೆಗಾಸ್‌ನಲ್ಲಿ ಜನವರಿ 7ರಿಂದ ನಡೆಯಲಿರುವ ಕನ್ಸೂಮರ್ ಎಲೆಕ್ಟ್ರಾನಿಕ್ ಶೋ (ಸಿಇಎಸ್)ನಲ್ಲಿ ಗೂಗಲ್‌ ಮತ್ತು ಆಂಡಿ ಕಂಪೆನಿಗಳು ಆಂಡ್ರಾಯ್ಡ್‌‌ ಓಎಸ್‌ ಕಾರು ನಿರ್ಮಾಣದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದೆ.

ರಸ್ತೆಗೆ ಇಳಿಯಲಿದೆ ಆಂಡ್ರಾಯ್ಡ್‌ ಕಾರು1

2013ರ ಜೂನ್‌ ತಿಂಗಳಿನಲ್ಲಿ ಆಪಲ್‌ ಕಂಪೆನಿಯ ವರ್ಲ್ಡ್ ವೈಡ್‌ ಡೆವಲಪರ್‍ಸ್‌ ಕಾನ್ಪರೆನ್ಸ್‌ನಲ್ಲಿ ಆಪಲ್‌ ಐಓಎಸ್‌ ಆಧಾರಿತ ಕಾರುಗಳನ್ನು ತಯಾರಿಸುವುದಾಗಿ ಹೇಳಿತ್ತು.ಈ ಸಂಬಂಧ ಆಪಲ್‌ ಈಗಾಗಲೇ ಕಾರು ತಯಾರಾಕ ಕಂಪೆನಿಗಳಾದ ಬಿಎಂಡಬ್ಲ್ಯೂ,ಡೈಮ್ಲರ್‌,ಜನರಲ್‌ ಮೋಟಾರ್‍ಸ್‌,ಫೆರಾರಿ,ಹೋಂಡಾ,ಮರ್ಸಿಡಿಸ್ ಬೆಂಝ್ ಜೊತೆ ಮಾತುಕತೆ ನಡೆಸಿದ್ದು ಈ ಕಾರುಗಳಲ್ಲಿ ಈಗ ಐಓಎಸ್‌ ಪ್ರಯೋಗ ನಡೆಯುತ್ತಿದ್ದು ಈ ವರ್ಷ‌ ಐಓಎಸ್‌ ಕಾರುಗಳು ರಸ್ತೆಗೆ ಇಳಿಯುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಟೆಕ್‌ ಕ್ಷೇತ್ರದಲ್ಲಿ ತನ್ನ ಪ್ರಭಲ ಸ್ಪರ್ಧಿಯಾದ ಆಪಲ್‌ನ ಐಓಎಸ್‌ ಕಾರುಗಳಿಗೆ ಪ್ರತಿಯಾಗಿ ಗೂಗಲ್‌ ಆಟೋಮೊಬೈಲ್‌ ಕ್ಷೇತ್ರದಲ್ಲೂ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಇರುವ ಕಾರು ನಿರ್ಮಾಣಕ್ಕೆ ಆಸಕ್ತಿ ತೋರಿಸಿದೆ.

ಒಂದೊಂದೆ ಕ್ಷೇತ್ರದಲ್ಲಿ ತನ್ನ ಉದ್ಯಮವನ್ನು ವಿಸ್ತರಿಸುವ ಗೂಗಲ್‌ ಆಟೋಮೊಬೈಲ್‌ ಕ್ಷೇತ್ರದಲ್ಲೂ ಉದ್ಯಮವನ್ನು ವಿಸ್ತರಿಸುವುದು ಹೊಸದೇನಲ್ಲ.2012ರಲ್ಲಿ ಗೂಗಲ್‌ ಟೊಯೊಟಾ ಕಂಪೆನಿ ಜೊತೆ ಸೇರಿ ಚಾಲಕ ರಹಿತ ಕಾರನ್ನು ಅಭಿವೃದ್ಧಿ ಪಡಿಸಿತ್ತು.

ಅಭಿವೃದ್ಧಿ ಪಡಿಸಿದ ಬಳಿಕ ಗೂಗಲ್‌ ಕಾರಿಗೆ ಆರಂಭದ ದಿನದಲ್ಲಿ ವಿರೋಧ ವ್ಯಕ್ತವಾಗಿತ್ತು.ನಂತರ ಈಗ ಅಮೆರಿಕದಲ್ಲಿ ಗೂಗಲ್‌ನ ಡ್ರೈವರ್‌ ಲೆಸ್‌ ಕಾರನ್ನು ರಸ್ತೆಯಲ್ಲಿ ಚಲಾಯಿಸಲು ಪರವಾನಿಗೆ ದೊರಕಿದೆ. ಇಬ್ಬರು ಕಡ್ಡಾಯವಾಗಿ ಪ್ರಯಾಣಿಸಬೇಕು ಎಂದು ಪರವಾನಿಗೆ ನೀಡುವಾಗ ಸ್ಪಷ್ಟವಾಗಿ ತಿಳಿಸಲಾಗಿದೆ. ಯಾಕೆಂದರೆ ಎಲ್ಲಾದರೂ ಚಾಲಕ ರಹಿತವಾಹನದಲ್ಲಿ ಏನಾದರೂ ತೊಂದರೆ ಉಂಟಾದರೆ ಕಾರನ್ನು ನಿಯಂತ್ರಿಸಲು ಕಾರಿನೊಳಗೆ ಜನರಿರುವುದು ಕಡ್ಡಾಯ ಎಂದು ಸರಕಾರ ಹೇಳಿದೆ.

ಇದನ್ನೂ ಓದಿ: ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು! ಎಂದು ಗೂಗಲ್‌ನ್ನು ಕೇಳಿ

<center><center><iframe width="100%" height="315" src="//www.youtube.com/embed/cdgQpa1pUUE" frameborder="0" allowfullscreen></iframe></center></center>

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot