Subscribe to Gizbot

ಕಪ್ಪು ರಿಬ್ಬನ್ ಪ್ರದರ್ಶಿಸಿ ಕಲಾಂಗೆ ಸಲಾಂ ಎಂದ ಗೂಗಲ್

Written By:

ತನ್ನ ಮುಖ್ಯ ಪರದೆಯಲ್ಲಿ ಕಪ್ಪು ರಿಬ್ಬನ್ ಅನ್ನು ಪ್ರದರ್ಶಿಸುವ ಮೂಲಕ ಇಂಟರ್ನೆಟ್ ಸರ್ಚ್ ದೈತ್ಯ ಗೂಗಲ್ ಮಾಜಿ ಅಧ್ಯಕ್ಷರಾದ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರಿಗೆ ವಿಶೇಷ ಹೋಮ್‌ಪೇಜ್ ಅನ್ನು ನೀಡಿ ತನ್ನ ಗೌರವ ಸಲ್ಲಿಸಿದೆ.

ಕಪ್ಪು ರಿಬ್ಬನ್ ಪ್ರದರ್ಶಿಸಿ ಕಲಾಂಗೆ ಸಲಾಂ ಎಂದ ಗೂಗಲ್

ಸ್ಮರಣೀಯ ವ್ಯಕ್ತಿಗಳು ಮತ್ತು ವಿಶೇಷ ಸಂದರ್ಭಗಳನ್ನು ಎತ್ತಿ ತೋರಿಸುವಲ್ಲಿ ಸಿದ್ಧಹಸ್ತ ಎಂದೆನಿಸಿರುವ ಗೂಗಲ್ ಅದನ್ನು ತನ್ನ ಡೂಡಲ್‌ಗಳ ಮೂಲಕ ಪ್ರದರ್ಶಿಸುತ್ತಿದೆ.

ಓದಿರಿ: ಜೀವನ ಪಥವನ್ನೇ ಬದಲಾಯಿಸಬಲ್ಲ ಅಬ್ದುಲ್ ಕಲಾಂ ಅಪ್ಲಿಕೇಶನ್‌ಗಳು

ಸರ್ಚ್ ಟ್ಯಾಬ್ ಕೆಳಗೆ, ಕಪ್ಪು ರಿಬ್ಬನ್ ಅನ್ನು ಗೂಗಲ್ ಹೋಮ್ ಪೇಜ್‌ನಲ್ಲಿ ಕಾಣಬಹುದಾಗಿದ್ದು ಮೌಸ್ ರನ್ ಮಾಡುವಾಗ "ಇನ್ ಮೆಮೊರಿ ಆಫ್ ಡಾ ಎಪಿಜೆ ಅಬ್ದುಲ್ ಕಲಾಂ ಎಂಬುದಾಗಿ ಕಾಣಿಸಿಕೊಳ್ಳುತ್ತದೆ.

ಓದಿರಿ: ತಂತ್ರಜ್ಞಾನ ಲೋಕಕ್ಕೆ ಅಬ್ದುಲ್ ಕಲಾಂ ಕೊಡುಗೆ ಏನು?

ಎಣಿಕೆಗೂ ಮೀರಿದ ಭಾರತೀಯರಿಗೆ ದಾರಿದೀಪವಾಗಿರುವ ಕ್ಷಿಪಣಿ ಮನುಷ್ಯ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಗೂಗಲ್ ಈ ರೀತಿಯಾಗಿ ಗೌರವಪೂರ್ವಕ ಸಲಾಂ ಅನ್ನು ಅರ್ಪಿಸಿದೆ.

English summary
Internet search giant Google has paid a special homage to former president A P J Abdul Kalam by displaying a black ribbon on its homepage.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot