ತಂತ್ರಜ್ಞಾನ ಲೋಕಕ್ಕೆ ಅಬ್ದುಲ್ ಕಲಾಂ ಕೊಡುಗೆ ಏನು?

By Shwetha
|

ದೇಶದ 11 ನೇ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದ್ದ ಮಿಸೈಲ್ ಮ್ಯಾನ್ ಎಪಿಜೆ ಅಬ್ದುಲ್ ಕಲಾಂ ಸರಳ ಜೀವನಕ್ರಮದಲ್ಲಿ ಬದುಕು ರೂಪಿಸಿಕೊಂಡ ಧೀಮಂತ ವ್ಯಕ್ತಿ. ಅವುಲ್ ಪಕೀರ್ ಜೈನುಲಾಬ್ದಿನ್ ಅಬ್ದುಲ್ ಕಲಾಂ 1931 ರಲ್ಲಿ ರಾಮೇಶ್ವರದಲ್ಲಿ ಜನಿಸಿದರು. ಜೀವನ ನಿರ್ವಹಣೆಗಾಗಿ ಕಲಾಂ ತಂದೆಯ ಬಳಿ ಮೀನುಗಾರಿಕೆ ಬೋಟ್ ಇದ್ದರೆ ತಾಯಿ ಗೃಹಿಣಿಯಾಗಿದ್ದರು ಮನೆಯಲ್ಲಿ ಕಡು ಬಡತನ.

ಓದಿರಿ: ವಿಂಡೋಸ್ 10 ಗೆ ನೀವು ಅಪ್‌ಗ್ರೇಡ್ ಮಾಡಿಕೊಳ್ಳಲೇಬೇಕು ಏಕೆ?

ಅದಾಗ್ಯೂ ಮದ್ರಾಸ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದ ಬಳಿಕ ಕಲಾಂ ಅವರು ಇಸ್ರೋ ಮತ್ತು ಡಿಆರ್‌ಡಿಒದಲ್ಲಿ ಕಾರ್ಯನಿರ್ವಹಿಸಿದರು. 2020 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸಬೇಕೆಂಬುದು ಇವರ ಕನಸಾಗಿತ್ತು. 500 ತಜ್ಞರ ಸಮಿತಿಯನ್ನು ಒಳಗೊಂಡಿದ್ದ ವಿ‍ಷನ್ 2020 ಯೋಜನೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಓದಿರಿ: ಭಾರತದ ಫೇಸ್‌ಬುಕ್ ದೇವಾಲಯಕ್ಕೆ ಭೇಟಿ ನೀಡಿದ್ದೀರಾ?

ಇಂತಹ ಸರಳ ಧೀಮಂತ ವ್ಯಕ್ತಿ ಅಬ್ದುಲ್ ಕಲಾಂ ಇಂದು ನಮ್ಮೊಂದಿಗಿಲ್ಲ. ಹೃದಯಾಘಾತಕ್ಕೊಳಗಾಗಿ ನಿನ್ನೆ ಮೇಘಾಲಯದ ಶಿಲ್ಲಾಂಗ್‌ನ ಐಐಎಂ ನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವಾಗ ಕುಸಿದು ಬಿದ್ದಿದ್ದಾರೆ. ಇಂದಿನ ನಮ್ಮ ಲೇಖನದಲ್ಲಿ ತಂತ್ರಜ್ಞಾನ ಲೋಕಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸೋಣ.

ಅಬ್ದುಲ್ ಕಲಾಂ ಸಾಧನೆಗಳು

ಅಬ್ದುಲ್ ಕಲಾಂ ಸಾಧನೆಗಳು

1960 ರಲ್ಲಿ ಮದ್ರಾಸ್‌ನ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದುಕೊಂಡ ನಂತರ, ಕಲಾಂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವನ್ನು ಸೇರಿದರು. ಭಾರತೀಯ ಸೇನೆಗಾಗಿ ಹೆಲಿಕಾಫ್ಟರ್‌ಗಳನ್ನು ಅವರು ವಿನ್ಯಾಸಪಡಿಸಿದರು.

ಅಬ್ದುಲ್ ಕಲಾಂ ಸಾಧನೆಗಳು

ಅಬ್ದುಲ್ ಕಲಾಂ ಸಾಧನೆಗಳು

1969 ರಲ್ಲಿ ಹೆಚ್ಚಿನ ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಸೇರಿದಂತೆ ಪ್ರೊಗ್ರಾಮ್ ವಿಸ್ತರಿಸುವ ಅನುಮೋದನೆಯನ್ನು ಸರಕಾರ ನೀಡಿತು.

ಅಬ್ದುಲ್ ಕಲಾಂ ಸಾಧನೆಗಳು

ಅಬ್ದುಲ್ ಕಲಾಂ ಸಾಧನೆಗಳು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ವರ್ಗಾವಣೆಯಾದ ನಂತರ ಭಾರತದ ಪ್ರಥಮ ದೇಶೀಯ ಉಪಗ್ರಹ ಉಡಾವಣಾ ವಾಹನದಲ್ಲಿ SLV-III ಗಾಗಿ ಪ್ರೊಜೆಕ್ಟ್ ಡೈರೆಕ್ಟರ್ ಆಗಿ ಇವರು ಕಾರ್ಯನಿರ್ವಹಿಸಿದರು.

ಅಬ್ದುಲ್ ಕಲಾಂ ಸಾಧನೆಗಳು

ಅಬ್ದುಲ್ ಕಲಾಂ ಸಾಧನೆಗಳು

SLV-III ಯಶಸ್ವಿಯಾಗಿ 1980 ರಲ್ಲಿ ರೋಹಿಣಿ ಸ್ಯಾಟಲೈಟ್ ಅನ್ನು ಕಕ್ಷೆಗೆ ಲಾಂಚ್ ಮಾಡಿತು. ತದನಂತರ ಕಲಾಂ ಭಾರತದ ಬಾಹ್ಯಾಕಾಶ ಪ್ರೊಗ್ರಾಮ್ ಅನ್ನು ವಿಸ್ತರಿಸಿದರು.

ಅಬ್ದುಲ್ ಕಲಾಂ ಸಾಧನೆಗಳು

ಅಬ್ದುಲ್ ಕಲಾಂ ಸಾಧನೆಗಳು

ಕಲಾಂ 1980 ರಲ್ಲಿ ಭಾರತದ ಮಿಸೈಲ್ ಪ್ರೊಗ್ರಾಮ್‌ನ ನೇತೃತ್ವ ವಹಿಸಿದರು. ಅವರ ನಾಯಕತ್ವದಲ್ಲಿ ಅಗ್ನಿ ಮತ್ತು ಪೃಥ್ವಿಯ ಯಶಸ್ಸಿನ ನಂತರ ಭಾರತ ಪ್ರಮುಖ ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮಿತು.

ಅಬ್ದುಲ್ ಕಲಾಂ ಸಾಧನೆಗಳು

ಅಬ್ದುಲ್ ಕಲಾಂ ಸಾಧನೆಗಳು

ಪ್ರಧಾನ ಮಂತ್ರಿಯ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿಯಾಗಿ ಜುಲೈ 1992 ರಿಂದ ಡಿಸೆಂಬರ್ 1999 ರವರೆಗೆ ಕಾರ್ಯನಿರ್ವಹಿಸಿದರು.

ಅಬ್ದುಲ್ ಕಲಾಂ ಸಾಧನೆಗಳು

ಅಬ್ದುಲ್ ಕಲಾಂ ಸಾಧನೆಗಳು

ಏಕತೆಯ ವಿರಳತೆ ಎಂದೇ ಕರೆಯಬಹುದಾಗಿದ್ದ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ 2002 ರಲ್ಲಿ ಭಾರತದ 11 ನೇ ಅಧ್ಯಕ್ಷರಾಗಿ ಕಲಾಂ ಅವರನ್ನು ಚುನಾಯಿಸಿದರು.

ಅಬ್ದುಲ್ ಕಲಾಂ ಸಾಧನೆಗಳು

ಅಬ್ದುಲ್ ಕಲಾಂ ಸಾಧನೆಗಳು

ಅಧ್ಯಕ್ಷರಾಗಿ ಭಾರತ ಮತ್ತು ಹೊರದೇಶಗಳಲ್ಲಿ ಕಲಾಂರ ಘನತೆ ಮತ್ತು ಆಶಾವಾದ ಹರಡಿತು. ಯುಎನ್ ಮತ್ತು ಐರೋಪ್ಯ ಪಾರ್ಲಿಮೆಂಟ್‌ಗಳಲ್ಲಿ ಇವರ ಸ್ಫೂರ್ತಿದಾಯಕ ಭಾಷಣಗಳು ಎಲ್ಲರ ಮನಗೆದ್ದಿತು. ಅವರು ತಮ್ಮ ಸರಳತೆಯಿಂದಲೇ ಎಲ್ಲರ ಪ್ರೀತಿಪಾತ್ರರಾದರು.

ಅಬ್ದುಲ್ ಕಲಾಂ ಸಾಧನೆಗಳು

ಅಬ್ದುಲ್ ಕಲಾಂ ಸಾಧನೆಗಳು

ಅಧ್ಯಕ್ಷರಾಗಿ ತಮ್ಮ ಸೇವೆಯನ್ನು ಪೂರ್ಣಗೊಳಿಸಿದ ನಂತರ, ಕಲಾಂ ಅವರು ಅತಿಥಿ ಪ್ರಾಧ್ಯಾಪಕರಾದರು ಮತ್ತು ಯುವ ಜನಾಂಗಕ್ಕಾಗಿ ಹಲವಾರು ಉಪಕ್ರಮಗಳನ್ನು ಆರಂಭಿಸಿದರು. "ವಿಂಗ್ಸ್ ಆಫ್ ಫೈರ್" ಮತ್ತು "ಇಂಡಿಯಾ 2020" ಮಿಲಿಯ ಗಟ್ಟಲೆ ಭಾರತೀಯರಿಗಾಗಿ ಸ್ಫೂರ್ತಿದಾಯಕ ಕೃತಿಗಳಾಗಿವೆ.

ಅಬ್ದುಲ್ ಕಲಾಂ ಸಾಧನೆಗಳು

ಅಬ್ದುಲ್ ಕಲಾಂ ಸಾಧನೆಗಳು

ಭಾರತದ ಬಗೆಗಿನ ಅವರ ಕನಸನ್ನು ಈ ಕೃತಿಗಳು ತಿಳಿಸಿವೆ. ಅವರ ಆಲೋಚನೆ ಎಷ್ಟೊಂದು ಅಪೂರ್ವ ಮತ್ತು ಅನನ್ಯವಾಗಿತ್ತು ಎಂಬುದನ್ನು ನೋಡಬಹುದಾಗಿದೆ.

Best Mobiles in India

English summary
Abdul Kalam will remain one of the finest human beings to have ever lived. He lived an illustrious and successful life, and his legacy will continue to inspire people around the world in the coming years. Below is a list that tries to do justice to his numerous achievements.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X