ಗೂಗಲ್‌ ಪ್ಲಸ್‌ನಲ್ಲಿ ಫೋಟೋವನ್ನು ಮತ್ತಷ್ಟು ಸುಂದರಗೊಳಿಸಿ

Posted By:

ಗೂಗಲ್‌ ಪ್ಲಸ್‌ಗೆ ಹೆಚ್ಚು ಜನರು ಈಗ ಆಕರ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ ಗೂಗಲ್‌ ತನ್ನ ಸೋಶಿಯಲ್‌ ಮಿಡಿಯಾ ವೆಬ್‌ಸೈಟ್‌ಗೆ ಮತ್ತಷ್ಟು ವಿಶೇಷತೆಗಳನ್ನು ಸೇರಿಸಿದೆ. ಪ್ರತಿ ತಿಂಗಳು ಗೂಗಲ್‌ ಪ್ಲಸ್‌‌ಗೆ ನೂರು ಕೋಟಿಗೂ ಅಧಿಕ ಫೋಟೋಗಳು ಆಪ್‌ಲೋಡ್‌ ಆಗುತ್ತಿದ್ದು,ಗೂಗಲ್‌ ಪ್ಲಸ್‌ ತನ್ನ ಬಳಕೆದಾರರಿಗೆ ಫೋಟೋಗೆ ಸಂಬಂಧಿಸಿದಂತೆ ಹೊಸ ವಿಶೇಷತೆಗಳನ್ನು ಸೇರಿಸಿದ್ದು ಬಳಕೆದಾರರಿಗೆ  ಹೊಸ ಸೇವೆ ಈ ವಾರದಿಂದಲೇ ಲಭ್ಯವಾಗಲಿದೆ.

ಗೂಗಲ್‌ ಪ್ಲಸ್‌ನಲ್ಲಿ ಹೊಸದಾಗಿ ಸೇರಿಸುವ ವಿಶೇಷತೆಯನ್ನು ಮುಂದಿನ ಪುಟದಲ್ಲಿ ವಿವರಿಸಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ

ಇದನ್ನೂ ಓದಿ: 1 ನಿಮಿಷದಲ್ಲಿ ಇಂಟರ್‌ನೆಟ್‌ನಲ್ಲಿ ಏನೆಲ್ಲ ಚಟುವಟಿಕೆಗಳು ನಡೆಯುತ್ತವೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಕ್ಷನ್‌(Action)

ಆಕ್ಷನ್‌(Action)

ಗೂಗಲ್‌ ಪ್ಲಸ್‌ನಲ್ಲಿ ಫೋಟೋವನ್ನು ಮತ್ತಷ್ಟು ಸುಂದರಗೊಳಿಸಿ


ಕ್ಯಾಮೆರಾದಲ್ಲಿ ತೆಗೆದಿರುವ ಆಕ್ಷನ್‌ ಫೋಟೋಗಳನ್ನು ಇನ್ನು ಮುಂದೆ ಗೂಗಲ್‌ ಪ್ಲಸ್‌ನಲ್ಲಿ ಎಡಿಟ್‌ ಮಾಡಿ ಒಂದೇ ಫೋಟೋದಲ್ಲಿ ಆ ಎಲ್ಲಾ ಆಕ್ಷನ್‌ಗಳನ್ನು ಮೂಡುವಂತೆ ಮಾಡಬಹುದು.

 ಇರೇಸರ್‌(Eraser):

ಇರೇಸರ್‌(Eraser):

ಗೂಗಲ್‌ ಪ್ಲಸ್‌ನಲ್ಲಿ ಫೋಟೋವನ್ನು ಮತ್ತಷ್ಟು ಸುಂದರಗೊಳಿಸಿ


ನಗರದಲ್ಲಿ ಒಂದು ಚಿತ್ರವನ್ನು ತೆಗೆಯುತ್ತಿರುವ ಸಂದರ್ಭದಲ್ಲಿ ಯಾರೋ ನಡೆಯುತ್ತಿರುವ ದೃಶ್ಯ, ಕಾರು ಚಲಿಸುತ್ತಿರುವ ದೃಶ್ಯಗಳು ಸೆರೆಯಾಗಿದ್ದರೆ, ಆ ಫೋಟೋಗ ಚೆನ್ನಾಗಿ ಮೂಡಿಬರುವುದಿಲ್ಲ. ಆದರೆ ಇನ್ನು ಮುಂದೆ ಫೋಟೋದಲ್ಲಿರುವ ಈ ರೀತಿ ಬೇಡವಾದ ಅಂಶಗಳನ್ನು ಇರೇಸರ್‌ ಮೂಲಕ ಅಳಿಸಿ ಫೋಟೋವನ್ನು ಸುಂದರವಾಗಿ ಕಾಣುವಂತೆ ಮಾಡಬಹುದು.

ಮೂವಿ ಎಡಿಟಿಂಗ್‌:

ಗೂಗಲ್‌ ಪ್ಲಸ್‌ನಲ್ಲಿ ಫೋಟೋವನ್ನು ಮತ್ತಷ್ಟು ಸುಂದರಗೊಳಿಸಿ


ಅಪ್‌ಲೋಡ್‌ ಮಾಡಿರುವ ವಿಡಿಯೋಗೆ ಮತ್ತಷ್ಟು ಎಫೆಕ್ಟ್‌, ಸೌಂಡ್‌ಟ್ಯ್ರಾಕ್‌ ಎಡಿಟ್‌ ಮಾಡುವ ವಿಶೇಷತೆಯನ್ನು ಗೂಗಲ್‌ ಪ್ಲಸ್‌‌ ಹೊಸದಾಗಿ ಸೇರಿಸಿದೆ.

ಈ ವಾರದಿಂದಲೇ ಹೊಸ ಸೇವೆ ಲಭ್ಯ

ಈ ವಾರದಿಂದಲೇ ಹೊಸ ಸೇವೆ ಲಭ್ಯ

ಗೂಗಲ್‌ ಪ್ಲಸ್‌ನಲ್ಲಿ ಫೋಟೋವನ್ನು ಮತ್ತಷ್ಟು ಸುಂದರಗೊಳಿಸಿ


ಗೂಗಲ್‌ ಪ್ಲಸ್ ಮುಖ್ಯಸ್ಥ ಭಾರತೀಯ ಮೂಲದ ವಿಕ್‌ ಗುಂಡೊತ್ರ ಈ ಹೊಸ ವಿಶೇಷತೆ ಸೇರಿಸಿರುವ ಸುದ್ದಿಯನ್ನು ಗೂಗಲ್‌ ಬ್ಲಾಗ್‌ನಲ್ಲಿ ಶೇರ್‌ ಮಾಡಿದ್ದು,ಗೂಗಲ್‌‌ ಪ್ಲಸ್‌ನಲ್ಲಿ ಫೋಟೋ ಮತ್ತು ವಿಡಿಯೋ ಬದಲಾವಣೆಗಳು ಈ ವಾರದಿಂದಲೇ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಗೂಗಲ್‌ ಪ್ಲಸ್‌ ನಾವು ಊಹಿಸಿದ್ದಕ್ಕಿಂತಲೂ ವೇಗವಾಗಿ ವಿಶ್ವದೆಲ್ಲೆಡೆ ಬೆಳೆಯುತ್ತಿದೆ. ಈ ವೇಗಕ್ಕೆ ಕಾರಣವಾದ ಬಳಕೆದಾರರಿಗೆ ಬ್ಲಾಗ್‌ನಲ್ಲಿ ವಿಕ್‌ ಗುಂಡೊತ್ರಧನ್ಯವಾದ ತಿಳಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting