ಮಧುಮೇಹ ರೋಗಿಗಳ ನೆರವಿಗೆ ಗೂಗಲ್‌ನಿಂದ ಹೊಸ ಕಾಂಟಾಕ್ಟ್‌ ಲೆನ್ಸ್‌

By Ashwath
|

ವಿಶ್ವದ ನಂಬರ್‌ ಒನ್‌ ಸರ್ಚ್‌ ಎಂಜಿನ್‌ ಕಂಪೆನಿ ಗೂಗಲ್‌ ಆರೋಗ್ಯ ಕ್ಷೇತ್ರದತ್ತ ತನ್ನ ದೃಷ್ಟಿ ಹಾಯಿಸಿದೆ.ಈ ಹಿಂದೆ ಆಪಲ್‌ ಜೊತೆಗೂಡಿ ಮುಪ್ಪು ತಡೆಯಲು ಹೊಸ ಕಂಪೆನಿಯನ್ನು ಆರಂಭಿಸಿದ್ದ ಗೂಗಲ್‌‌ ಈಗ ಮಧುಮೇಹ ರೋಗಿಗಳ ನೆರವಾಗಲು ಹೊಸ ಕಾಂಟಾಕ್ಟ್ ಲೆನ್ಸ್‌ ಮಾದರಿಯೊಂದನ್ನು ಅಭಿವೃದ್ಧಿ ಪಡಿಸಿದೆ.

ವಿಶ್ವದಲ್ಲಿ 38.2 ಕೋಟಿ ಜನ ಮಧುಮೇಹ(ಡಯಾಬಿಟೀಸ್‌)ರೋಗಿಗಳಿಗೆ ನೆರವಾಗಲು ಈ ಹೊಸ ಕಾಂಟಾಕ್ಟ್ ಲೆನ್ಸ್‌ ಅಭಿವೃದ್ಧಿ ಪಡಿಸಿರುವುದಾಗಿ ಗೂಗಲ್‌ ತನ್ನ ಬ್ಲಾಗ್‌‌ನಲ್ಲಿ ತಿಳಿಸಿದೆ.

ಈ ಲೆನ್ಸ್‌ನಲ್ಲಿ ಕೆಲವು ಸೆನ್ಸರ್‌,ಚಿಪ್‌,ಅಂಟೆನಾಗಳಿದ್ದು ಈ ಲೆನ್ಸ್‌ ರೋಗಿಯ ಕಣ್ಣೀರಿನ ಮೂಲಕ ಗ್ಲೂಕೋಸ್‌ ಮಟ್ಟವನ್ನು ಪರೀಕ್ಷಿಸಿ ರೋಗಿಯ ದೇಹದ ಮಧುಮೇಹವನ್ನು ಪ್ರಮಾಣವನ್ನು ಪತ್ತೆಮಾಡುವಂತೆ ಅಭಿವೃದ್ಧಿ ಪಡಿಸಲಾಗಿದೆ.

ಗೂಗಲ್‌ ಎಕ್ಸ್‌ ಲ್ಯಾಬ್‌ನ ಸಂಶೋಧಕರು ಮೂರು ವರ್ಷ‌ ಸಂಶೋಧನೆ ನಡೆಸಿ ಈ ಕಾಂಟಾಕ್ಟ್‌ ಲೆನ್ಸ್‌ನ್ನು ಅಭಿವೃದ್ಧಿ ಪಡಿಸಿದ್ದಾರೆ.ಸದ್ಯಕ್ಕೆ ಮಾದರಿ ಮಾತ್ರ ತಯಾರಾಗಿದ್ದು ಈ ಲೆನ್ಸ್‌ ಸಂಪೂರ್ಣ‌ವಾಗಿ ತಯಾರಾಗಿ ‌ ಮಧುಮೇಹ ರೋಗಿಗಳಿಗೆ ತಲುಪಲು ಐದು ವರ್ಷ‌ ಕಾಲ ಹಿಡಿಯಬಹುದು ಎಂದು ಗೂಗಲ್‌ ಹೇಳಿದೆ.

ಈ ಹೊಸ ಕಾಂಟಾಕ್ಟ್‌ ಲೆನ್ಸ್‌ ಬಗ್ಗೆ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆಯ ಜೊತೆ ಗೂಗಲ್‌ ಮಾತುಕತೆ ನಡೆಸಿದೆ. ಈ ಕಾಂಟಾಕ್ಟ್‌ ಲೆನ್ಸ್‌ಗಾಗಿ ಗೂಗಲ್‌ ವಿಶೇಷ ಆಪ್‌ ತಯಾರಿಸಲು ಮುಂದಾಗಲಿದ್ದು ಜೊತೆಗೆ ಈ ಉತ್ಪನ್ನದ ಬಗ್ಗೆ ಮಾರುಕಟ್ಟೆಯಲ್ಲಿ ನುರಿತ ಜ್ಞಾನ ಹೊಂದಿರುವ ಕಂಪೆನಿಯ ಸಹಯೋಗದೊಂದಿಗೆ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ.

ಮುಂದಿನ ಪುಟದಲ್ಲಿ ಈ ಹೊಸ ಕಾಂಟಾಕ್ಟ್‌ ಲೆನ್ಸ್ ಚಿತ್ರ ಮತ್ತು ವಿಡಿಯೋವಿದೆ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ

ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ

 ಮಧುಮೇಹ ರೋಗಿಗಳ ನೆರವಿಗೆ ಮುಂದಾದ ಗೂಗಲ್‌

ಮಧುಮೇಹ ರೋಗಿಗಳ ನೆರವಿಗೆ ಮುಂದಾದ ಗೂಗಲ್‌


ಗೂಗಲ್‌ ಕಾಂಟಾಕ್ಟ್‌ ಲೆನ್ಸ್‌

 ಮಧುಮೇಹ ರೋಗಿಗಳ ನೆರವಿಗೆ ಮುಂದಾದ ಗೂಗಲ್‌

ಮಧುಮೇಹ ರೋಗಿಗಳ ನೆರವಿಗೆ ಮುಂದಾದ ಗೂಗಲ್‌


ಗೂಗಲ್‌ ಕಾಂಟಾಕ್ಟ್‌ ಲೆನ್ಸ್‌

 ಮಧುಮೇಹ ರೋಗಿಗಳ ನೆರವಿಗೆ ಮುಂದಾದ ಗೂಗಲ್‌

ಮಧುಮೇಹ ರೋಗಿಗಳ ನೆರವಿಗೆ ಮುಂದಾದ ಗೂಗಲ್‌


ಗೂಗಲ್‌ ಕಾಂಟಾಕ್ಟ್‌ ಲೆನ್ಸ್‌

 ಮಧುಮೇಹ ರೋಗಿಗಳ ನೆರವಿಗೆ ಮುಂದಾದ ಗೂಗಲ್‌

ಮಧುಮೇಹ ರೋಗಿಗಳ ನೆರವಿಗೆ ಮುಂದಾದ ಗೂಗಲ್‌


ಗೂಗಲ್‌ ಕಾಂಟಾಕ್ಟ್‌ ಲೆನ್ಸ್‌

ಮಧುಮೇಹ ರೋಗಿಗಳ ನೆರವಿಗೆ ಮುಂದಾದ ಗೂಗಲ್‌


ಗೂಗಲ್‌ ಕಾಂಟಾಕ್ಟ್‌ ಲೆನ್ಸ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X