Subscribe to Gizbot

ಭಾರತದ ವಿಶ್ವ ಪರಂಪರೆಯ ತಾಣಗಳನ್ನು ಸೆರೆ ಹಿಡಿಯಲಿರುವ ಗೂಗಲ್‌

Posted By:

ಗೂಗಲ್‌ ಸ್ಟ್ರೀಟ್‌ ವ್ಯೂ ಮತ್ತೆ ಭಾರತಕ್ಕೆ ಬಂದಿದೆ.ಗೂಗಲ್‌ ಮತ್ತು ಭಾರತ ಪುರಾತತ್ವ ಇಲಾಖೆ ಒಪ್ಪಂದಕ್ಕೆ ಬಂದಿದ್ದು ಭಾರತದ ಐತಿಹಾಸಿಕ ಸ್ಥಳಗಳ ಚಿತ್ರ ಮಾಹಿತಿ ಇನ್ನು ಮುಂದೆ ಗೂಗಲ್‌ ಸ್ಟ್ರೀಟ್‌‌ ವ್ಯೂನಲ್ಲಿ ಲಭ್ಯವಾಗಲಿದೆ.

ದೇಶದ ನೂರು ಪರಂಪರೆಯ ತಾಣಗಳನ್ನು ಗೂಗಲ್‌ ತನ್ನ ಸ್ಟ್ರೀಟ್‌ ವ್ಯೂ ಕ್ಯಾಮೆರಾದಲ್ಲಿ ಸೆರೆಹಿಡಿಯಲಿದೆ.ಕ್ಯಾಮೆರಾದ ಮೂಲಕ 360 ಡಿಗ್ರಿ ಪನೋರಮಾ ಫೋಟೋ ತೆಗೆದು ಗೂಗಲ್‌‌ ತನ್ನ ಸ್ಟ್ರೀಟ್‌ ವ್ಯೂ ನಕ್ಷೆಗೆ ಸೇರಿಸಲಿದೆ.

ಭಾರತದ ವಿಶ್ವ ಪರಂಪರೆಯ ತಾಣಗಳನ್ನು ಸೆರೆ ಹಿಡಿಯಲಿರುವ ಗೂಗಲ್‌

ಗೂಗಲ್‌ ಹಂತ ಹಂತವಾಗಿ ತನ್ನ ಸ್ಟ್ರೀಟ್‌ ವ್ಯೂ ಕ್ಯಾಮೆರಾದಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಗಳನ್ನು ಸೇರಿಸುತ್ತಿದ್ದು ಈಗಾಗಲೇ ವಿಶ್ವದ ಹಲವು ಸ್ಥಳಗಳನ್ನು ತನ್ನ ಸ್ಟ್ರೀಟ್‌ ವ್ಯೂ ನಕ್ಷೆಗೆ ಸೇರಿಸಿದೆ.

ಈ ಹಿಂದೆ 2001ರಲ್ಲಿ ಭಾರತದ ಸ್ಥಳಗಳನ್ನು ಚಿತ್ರಿಕರಿಸಲು ಸ್ಟ್ರೀಟ್‌ ವ್ಯೂ ತಂಡ ಬಂದಿತ್ತು. ಆರಂಭದಲ್ಲಿ ಬೆಂಗಳೂರು ನಗರದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದ ವೇಳೆಯಲ್ಲಿ ಬೆಂಗಳೂರು ಪೊಲೀಸರು ತಡೆಗಟ್ಟಿ ಗೃಹ ಇಲಾಖೆಯಿಂದ ಅನುಮತಿ ಪಡೆದು ಚಿತ್ರೀಕರಣ ಮಾಡಿ ಎಂದು ಗೂಗಲ್‌ಗೆ ಆದೇಶಿಸಿದ್ದರು.

ಇದನ್ನೂ ಓದಿ:ವಿಶ್ವದ ಮಹಾಸ್ಫೋಟ ನಡೆಸಿದ ಸ್ಥಳ ಹೇಗಿದೆ ನೋಡಿದ್ದೀರಾ?

ಇದನ್ನೂ ಓದಿ : ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌ನ್ನು ನಿರ್ಮಿಸಿದ್ದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot