ಗೂಗಲ್‌ ಹುಟ್ಟುಹಬ್ಬ: ಡೂಡಲ್‌ನಲ್ಲಿ ಪಿನಟ ಆಟ

By Ashwath
|

ಗೂಗಲ್‌ ತನ್ನ15ವರ್ಷದ ಹುಟ್ಟುಹಬ್ಬವನ್ನು ವಿಶೇಷವಾದ ಪಿನಟ(pinata) ಆಟದ ಡೂಡಲ್‌ ಸಿದ್ದಪಡಿಸುವ ಮೂಲಕ ಆಚರಿಸಿದೆ.

ಮೆಕ್ಸಿಕೋದಲ್ಲಿ ಪಿನಟ ಆಟ ಪ್ರಸಿದ್ದವಾಗಿದ್ದು ನಕ್ಷತ್ರ ಆಕಾರದ ಒಂದು ಪೊಟ್ಟಣದಲ್ಲಿ ಸಿಹಿತಿಂಡಿಗಳನ್ನು ತುಂಬಿಸಲಾಗಿರುತ್ತದೆ.ಈ ಪೊಟ್ಟಣವನ್ನು ತೂಗಿಹಾಕಿ ಈ ಪೊಟ್ಟಣಕ್ಕೆ ಒಂದು ಕೋಲಿನಿಂದ ಹೊಡೆಯಲಾಗುತ್ತದೆ.ನಿಗದಿತ ಅವಕಾಶದಲ್ಲಿ ಯಾರು ಹೆಚ್ಚಾಗಿ ಕೋಲಿನಿಂದ ಹೊಡೆದು ತಿಂಡಿಗಳನ್ನು ಆ ಪೊಟ್ಟಣಗಳಿಂದ ಉದುರಿಸುತ್ತಾರೋ ಅವರಿಗೆ ಆ ತಿಂಡಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.

ಗೂಗಲ್‌ ಹುಟ್ಟುಹಬ್ಬ: ಡೂಡಲ್‌ನಲ್ಲಿ ಪಿನಟ ಆಟ

ಅದೇ ಆಟವನ್ನು ಗೂಗಲ್‌ ತನ್ನ ಡೂಡಲ್‌ನಲ್ಲಿ ಸೇರಿಸಿದ್ದು ಬಳಕೆದಾರರು ಗರಿಷ್ಟ ಹತ್ತು ಅವಕಾಶದಲ್ಲಿ ಕಿಬೋರ್ಡ್‌ ಅಥವಾ ಮೌಸ್‌ ಮೂಲಕ ಪೊಟ್ಟಣಕ್ಕೆ ಹೊಡೆದು ತಿಂಡಿಗಳನ್ನು ಉದುರಿಸಬಹುದು. ಹತ್ತು ಅವಕಾಶದ ಬಳಿಕ ಪರದೆಯಲ್ಲಿ ಆಟದಲ್ಲಿ ಪಡೆದ ಅಂಕವನ್ನು ತೋರಿಸುತ್ತದೆ. ಆ ಅಂಕವನ್ನು ಗೂಗಲ್‌ ಪ್ಲಸ್‌ನಲ್ಲಿ ಕೂಡಲೇ ಶೇರ್‌ ಮಾಡಬಹುದು.

ಗಿಝ್‌ಬಾಟ್‌ನ ಪ್ರತಿದಿನದ ಓದುಗರಾದ ನೀವು ಈ ಹಿಂದೆ ಗೂಗಲ್‌15 ವರ್ಷ‌ ಪೂರ್ಣ‌ಗೊಳಿಸಿದ ಹಿನ್ನೆಲೆಯಲ್ಲಿ ಗೂಗಲ್‌ನ ಪ್ರಮುಖ ಎಂಟು ವಿಶೇಷ ಪ್ರೊಡೆಕ್ಟ್‌ಗಳ ಸುದ್ದಿಯನ್ನು ತಂದಿತ್ತು. ಹಾಗಾದ್ರೆ ಆ ದಿನ ಹುಟ್ಟುಹಬ್ಬವನ್ನು ಆಚರಿಸದೇ ಈ ದಿನ ಗೂಗಲ್‌ ಯಾಕೆ ಆಚರಿಸುತ್ತಿದೆ ಎಂದು ನೀವು ಕೇಳಬಹುದು.ಅದಕ್ಕೂ ಒಂದು ಕಾರಣವಿದೆ.

ನಿಜವಾಗಿ ಗೂಗಲ್‌ 1998ರ ಸೆಪ್ಟೆಂಬರ್ 4 ರಂದು ಆರಂಭಗೊಂಡಿತ್ತು. ಆದರೆ 2005 ಸೆಪ್ಟೆಂಬರ್‌ 27ರಂದು ಗೂಗಲ್‌ ತನ್ನ ವೆಬ್‌ಸೈಟ್‌ಗೆ ಭೇಟಿ ನೀಡುವ ಪೇಜ್‌ ನಂಬರ್‌ ಇಂಡೆಕ್ಸ್‌ ಮಾಹಿತಿಯನ್ನು ಪ್ರಕಟಿಸುವ ಮೂಲಕ ವಿಶ್ವದ ನಂಬರ್‌ ಒನ್‌ ಸರ್ಚ್‌ ಇಂಜಿನ್‌ ಎನ್ನುವ ಖ್ಯಾತಿಗಳಿಸಿತು. ಆ ಕಾರಣಕ್ಕಾಗಿ ಸೆಪ್ಟೆಂಬರ್‌ 4 ರ ಬದಲಾಗಿ ಪ್ರತಿ ವರ್ಷ‌ ಇದೇ ದಿನದಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ.

ಇದನ್ನೂ ಓದಿ:ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X