ಹುವಾಯಿನಿಂದ ಭಾರತೀಯ ಬಳಕೆದಾರರಿಗೆ ಬಂಪರ್ ಕೊಡುಗೆ

By Shwetha
|

ಭಾರತದಲ್ಲಿ ಹುವಾಯಿ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಇತ್ತೀಚೆಗೆ ಪರಿಚಯಿಸಿರುವ ಹೋನರ್ 4ಸಿ, ಭಾರತಕ್ಕಾಗಿಯೇ ತಯಾರಿಸಿರುವ ಹ್ಯಾಂಡ್‌ಸೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಹೋನರ್ ಬೀಯನ್ನು ಲಾಂಚ್ ಮಾಡಿದೆ. ಇನ್ನು ಕಂಪೆನಿ ಪವರ್ ಬ್ಯಾಂಕ್ ಅನ್ನು ಭಾರತದಲ್ಲಿ ಪರಿಚಯಿಸಿದ್ದು ದು ಹೋನರ್ AP007 ಎಂಬ ಹೆಸರನ್ನು ಪಡೆದುಕೊಂಡಿದೆ.

ಓದಿರಿ: ಫೋನ್‌ನ ಬ್ಯಾಟರಿ ಬಾಳ್ವಿಕೆ ಉಳಿಸಲು ಟಾಪ್ ಸಲಹೆಗಳು

ಹುವಾಯಿನಿಂದ ಭಾರತೀಯ ಬಳಕೆದಾರರಿಗೆ ಬಂಪರ್ ಕೊಡುಗೆ

ಇನ್ನು ಕಂಪೆನಿ ಹೋನರ್ 4ಸಿಗೆ ರೂ 8,999 ಬೆಲೆ ನಿಗದಿಪಡಿಸಿದ್ದು, ಹೋನರ್ ಬೀ ರೂ 4,999 ಎಂದು ನಿರ್ಧರಿಸಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಇನ್ನು ಬೆಲೆಯಲ್ಲಿ 10 ಶೇಕಡ ವಿನಾಯಿತಿಯನ್ನು ಕಂಪೆನಿ ಒದಗಿಸುತ್ತಿದೆ. ಹೋನರ್ AP007 ಪವರ್ ಬ್ಯಾಂಕ್ ಬೆಲೆ ರೂ 1,399 ಆಗಿದೆ.

ಓದಿರಿ: ಎಲ್‌ಜಿ ಜಿ3: ಫೋನ್ ಲಾಕ್ ಮಾಡಲು ಪಾಸ್‌ವರ್ಡ್ ಬೇಕಾಗಿಯೇ ಇಲ್ಲ

ಹೋನರ್ 4ಸಿ ವೈಶಿಷ್ಟ್ಯಗಳನ್ನು ಗಮನಿಸುವಾಗ ಇದು 5 ಇಂಚಿನ ಎಚ್‌ಡಿ (720x1280 ಪಿಕ್ಸೆಲ್‌ಗಳು) ಟಿಎಫ್‌ಟಿ ಡಿಸ್‌ಪ್ಲೇಯನ್ನು ಹೊಂದಿದೆ. 64 ಬಿಟ್ 1.2GHZ ಓಕ್ಟಾ ಕೋರ್ ಹಿಸಿಲಿಕಾನ್ ಕಿರಿನ್ 620 ಪ್ರೊಸೆಸರ್ ಇದ್ದು 2 ಜಿಬಿ RAM ಅನ್ನು ಡಿವೈಸ್ ಒಳಗೊಂಡಿದೆ. ಡ್ಯುಯಲ್ ಸಿಮ್‌ನ ಹೋನರ್ 4ಸಿ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಚಾಲನೆಯನ್ನು ಮಾಡುತ್ತಿದ್ದು ಎಮೋಶನ್ UI 3.0 ಸ್ಕಿನ್ ಅನ್ನು ಮೇಲ್ಭಾಗದಲ್ಲಿ ಹೊಂದಿದೆ.

ಓದಿರಿ: ಶ್ಯೋಮಿ ಮತ್ತು ಅಸೂಸ್ ಕಾದಾಟ ನಿಮ್ಮ ಮತ ಯಾರಿಗೆ?

ಇನ್ನು ಫೋನ್ ಕ್ಯಾಮೆರಾ 13 ಮೆಗಪಿಕ್ಸೆಲ್ ಆಗಿದ್ದು ಎಲ್‌ಇಡಿ ಫ್ಲ್ಯಾಶ್, ಸೋನಿ CMOS ಸೆನ್ಸಾರ್ ಅನ್ನು ಇದು ಒಳಗೊಂಡಿದೆ. ಇನ್ನು ಫೋನ್ ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದೆ. ಸಂಗ್ರಹಣಾ ಸಾಮರ್ಥ್ಯ 8 ಜಿಬಿಯಾಗಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದಾಗಿದೆ.ಹೋನರ್ 4ಸಿ 2550mAh ಬ್ಯಾಟರಿಯನ್ನು ಹೊಂದಿದೆ.

ಹುವಾಯಿನಿಂದ ಭಾರತೀಯ ಬಳಕೆದಾರರಿಗೆ ಬಂಪರ್ ಕೊಡುಗೆ

ಹೋನರ್ ಬೀ ಡ್ಯುಯಲ್ ಸಿಮ್ ಫೋನ್ ಆಗಿದ್ದು 4.5 ಇಂಚಿನ (480x854 ಪಿಕ್ಸೆಲ್) ಡಿಸ್‌ಪ್ಲೇಯನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ನಲ್ಲಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಚಾಲನೆಯಾಗುತ್ತಿದ್ದು ಹುವಾಯಿ EMUI 3.0 ಲೈಟ್ ಅನ್ನು ಮೇಲ್ಭಾಗದಲ್ಲಿ ಕಾಣಬಹುದಾಗಿದೆ. 1 ಜಿಬಿ RAM ಅನ್ನು ಡಿವೈಸ್ ಒಳಗೊಂಡಿದ್ದು, 8 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಡಿವೈಸ್ ಹೊಂದಿದೆ. ರಿಯರ್ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 2 ಮೆಗಾಪಿಕ್ಸೆಲ್ ಆಗಿದೆ. ಬ್ಯಾಟರಿ 1730 mAh ಆಗಿದೆ.

ಹುವಾಯಿನಿಂದ ಭಾರತೀಯ ಬಳಕೆದಾರರಿಗೆ ಬಂಪರ್ ಕೊಡುಗೆ

ಇನ್ನು ಹೋನರ್ AP007 ಪವರ್ ಬ್ಯಾಂಕ್ 1300 mAh ಬ್ಯಾಟರಿಯನ್ನು ಒದಗಿಸುತ್ತಿದ್ದು, ಎಲ್‌ಇಡಿ ಇಂಡಿಕೇಟರ್ಸ್ ಅನ್ನು ಇದು ಹೊಂದಿದೆ. ಇದು ಬೂದು ಬಣ್ಣದಲ್ಲಿ ಲಭ್ಯವಿದೆ. 300 ಚಾರ್ಜ್ ಸೈಕಲ್ ಲೈಫ್‌ಸ್ಪ್ಯಾನ್ ಅನ್ನು ಒಳಗೊಂಡಿದೆ.

Best Mobiles in India

English summary
Huawei has launched two new smartphones under its Honor brand in India, the recently introduced Honor 4C, as well as a new 'made for India' handset, the Honor Bee. The company also launched a power bank in India, the Honor AP007.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X