ಹುವಾಯಿನ ಹೋನರ್ 4ಸಿ ರೂ 8,150 ಕ್ಕೆ

Posted By:

ಹುವಾಯಿ ಹೊಸ ಹೋನರ್ ಶ್ರೇಣಿಯ ಸ್ಮಾರ್ಟ್‌ಫೋನ್‌ ಆದ ಹೋನರ್ 4ಸಿಯನ್ನು ಲಾಂಚ್ ಮಾಡಿದೆ. CNY 799 ಅಂದಾಜು ಬೆಲೆ ರೂ 8,150 ಕ್ಕೆ ಇದು ಲಭ್ಯವಾಗುತ್ತಿದ್ದು ಕಪ್ಪು, ನೀಲಿ, ಚಿನ್ನದ ಬಣ್ಣ, ಪಿಂಕ್ ಮತ್ತು ಬಿಳಿ ಬಣ್ಣಗಳಲ್ಲಿ ಈ ಹ್ಯಾಂಡ್‌ಸೆಟ್ ಲಭ್ಯವಾಗುತ್ತಿದೆ.

ಹುವಾಯಿನ ಹೋನರ್ 4ಸಿ ರೂ 8,150 ಕ್ಕೆ

ಹೋನರ್ 4 ಸಿ ಇದೀಗ ಹುವಾಯಿನ ಹೋನರ್ ಸಿರೀಸ್ ವೆಬ್‌ಸೈಟ್‌ನಲ್ಲಿ ಪಟ್ಟಿಯಾಗಿದ್ದು ಚೀನಾದಲ್ಲಿ ತ್ಮಾಲ್ ಮತ್ತು ವ್ಮಾಲ್ ಎಂಬ ಆನ್‌ಲೈನ್ ರೀಟೈಲರ್‌ಗಳ ಮೂಲಕ ದೊರೆಯುತ್ತಿದೆ. ಚೀನಾ ಕಂಪೆನಿ ಇದುವರೆಗೆ ತನ್ನ ದೇಶವನ್ನು ಬಿಟ್ಟು ಇತರ ದೇಶಗಳಲ್ಲಿ ಈ ಡಿವೈಸ್ ಕುರಿತು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

ಓದಿರಿ: ನಂಬರ್ ಒನ್ ಸ್ಥಾನದತ್ತ ಮುನ್ನುಗ್ಗುತ್ತಿರುವ ಆಂಡ್ರಾಯ್ಡ್ ಫೋನ್ಸ್

ಹೋನರ್ 4ಸಿ, 5 ಇಂಚಿನ ಎಚ್‌ಡಿ (720x1280 ಪಿಕ್ಸೆಲ್‌ಗಳು) ಟಿಎಫ್‌ಟಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಓಕ್ಟಾ ಕೋರ್ HiSilicon Kirin 620 ಪ್ರೊಸೆಸರ್ ಇದರಲ್ಲಿದೆ. ಫೋನ್ 2 ಜಿಬಿ RAM ಅನ್ನು ಪಡೆದುಕೊಂಡಿದ್ದು ಡ್ಯುಯಲ್ ಸಿಮ್ ಉಳ್ಳ ಹ್ಯಾಂಡ್‌ಸೆಟ್ ಇದಾಗಿದೆ. ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಡಿವೈಸ್‌ನಲ್ಲಿದ್ದು EM UI 3.0 ಸ್ಕಿನ್ ಅನ್ನು ಮೇಲ್ಭಾಗದಲ್ಲಿ ಕಾಣಬಹುದಾಗಿದೆ.

ಓದಿರಿ: ದುಬಾರಿ ಆಪಲ್ ವಾಚ್‌ಗಿಂತ ಆಂಡ್ರಾಯ್ಡ್ ಬೆಸ್ಟ್ ಹೇಗೆ?

ಫೋನ್ 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಎಲ್‌ಇಡಿ ಫ್ಲ್ಯಾಶ್ ಮತ್ತು CMOS ಸೆನ್ಸಾರ್ ಇದರಲ್ಲಿದೆ. ಮುಂಭಾಗದಲ್ಲಿ ಹ್ಯಾಂಡ್‌ಸೆಟ್ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಪಡೆದುಕೊಂಡಿದೆ. ಫೋನ್‌ನ ಆಂತರಿಕ ಸಂಗ್ರಹಣಾ ಸಾಮರ್ಥ್ಯ 8 ಜಿಬಿಯಾಗಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದಾಗಿದೆ. ಫೋನ್ ಬ್ಯಾಟರಿ 2550mAh ಆಗಿದೆ.

ಹುವಾಯಿ ಅಸೆಂಡ್ ಪಿ8 ಲೈಟ್ ಥರ್ಡ್ ಪಾರ್ಟಿ ರೀಟೈಲರ್ EUR 249 ನಲ್ಲಿ ಲಭ್ಯವಿದ್ದು ಬೆಲೆ ಸರಿಸುಮಾರು ರೂ 17,250 ಆಗಿದೆ. ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಹುವಾಯಿ ಅಸೆಂಡ್ ಪಿ8 ಲೈಟ್ ಅನ್ನು ಪಟ್ಟಿ ಮಾಡಲಾಗಿದ್ದು ಆಂಡ್ರಾಯ್ಡ್ 5.0 ಲಾಲಿಪಪ್ ಅನ್ನು ಡಿವೈಸ್ ಹೊಂದಿದೆ.

English summary
Huawei has launched a new Honor-series smartphone, the Honor 4C, in China. The smartphone will be available at CNY 799 (approximately Rs. 8,150) and will come in Black, Blue, Gold, Pink, and White colours.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot