Subscribe to Gizbot

ನಂಬರ್ ಒನ್ ಸ್ಥಾನದತ್ತ ಮುನ್ನುಗ್ಗುತ್ತಿರುವ ಆಂಡ್ರಾಯ್ಡ್ ಫೋನ್ಸ್

Posted By:

ಆಂಡ್ರಾಯ್ಡ್ ಫೋನ್‌ಗಳೆಂದರೆ ಬಳಕೆದಾರ ಸ್ನೇಹಿ ಎನ್ನುವುದರಲ್ಲಿ ಸಂದೇಹವೇ ಇಲ್ಲ. ನೀವು ಮೆಚ್ಚುವ ರೀತಿಯಲ್ಲಿ ಆಂಡ್ರಾಯ್ಡ್ ಫೋನ್‌ಗಳು ಇದೀಗ ಮಾರುಕಟ್ಟೆಗೆ ಅಡಿಇಡುತ್ತಿದ್ದು ನಿಮ್ಮ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ. ಉತ್ತಮ ಕ್ಯಾಮೆರಾ, ವೇಗದ ಪ್ರೊಸೆಸರ್, RAM ಸಾಮರ್ಥ್ಯ, ಆಂತರಿಕ ಸಂಗ್ರಹಣಾ ಸಾಮರ್ಥ್ಯ ಹೀಗೆ ಬೇರೆ ಬೇರೆ ವಿಶೇಷತೆಗಳನ್ನೊಳಗೊಂಡು ಆಂಡ್ರಾಯ್ಡ್ ಡಿವೈಸ್‌ಗಳು ನಿಮ್ಮ ಮುಂದೆ ಬರುತ್ತಿವೆ.

ಓದಿರಿ: ಆಪಲ್ ಪ್ರೇಮಿಗಳಿಗೆ ಕಿರಿಕಿರಿ ಎಂದೆನಿಸುವ ಆಂಡ್ರಾಯ್ಡ್ ಫೀಚರ್ಸ್

ಇಂದಿನ ಲೇಖನದಲ್ಲಿ ನಿಮ್ಮ ಆಂಡ್ರಾಯ್ಡ್ ಫೋನ್‌ಗಿರುವ ವಿಶೇಷತೆಗಳನ್ನು ನಾವು ಇಲ್ಲಿ ನೀಡುತ್ತಿದ್ದು ನೀವು ಆಂಡ್ರಾಯ್ಡ್ ಅನ್ನು ಮೆಚ್ಚಲು ಕಾರಣಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನೀವು ಅರಿಯಲಿರುವಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚಾರ್ಜ್ ಮಾಡಬಹುದು

ಯಾವುದೇ ಕೇಬಲ್‌ನಿಂದ ಚಾರ್ಜ್ ಮಾಡಬಹುದು

ಇಂದಿನ ದಿನಗಳಲ್ಲಿ ಎಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ಯುಎಸ್‌ಬಿ ಬಳಸಿ ನಾವು ಚಾರ್ಜ್ ಮಾಡುತ್ತಿದ್ದೇವೆ. ನಿಮ್ಮ ಆಂಡ್ರಾಯ್ಡ್ ಫೋನ್‌ಗೆ ಯಾವ ಬ್ರ್ಯಾಂಡ್ ಯುಎಸ್‌ಬಿ ಬಳಸಿ ಕೂಡ ಚಾರ್ಜ್ ಮಾಡಬಹುದಾಗಿದೆ. ಆದರೆ ಐಫೋನ್‌ನಲ್ಲಿ ಈ ಸೌಲಭ್ಯ ಇಲ್ಲ.

ಫೋನ್ ಕೇಸ್

ಸೂಕ್ತ ಫೋನ್ ಕೇಸ್

ನಿಮ್ಮ ಐಫೋನ್‌ನಂತವುಗಳಿಗೆ ದೊಡ್ಡ ಕೇಸ್‌ಗಳು ಶೀಘ್ರದಲ್ಲಿ ದೊರಕುತ್ತವೆ. ಆದರೆ ಆಂಡ್ರಾಯ್ಡ್ ಫೋನ್‌ಗಳಿಗೆ ಸಣ್ಣ ಕೇಸ್‌ಗಳು ದೊರೆಯುವುದು ಅತಿ ವಿರಳವಾಗಿದೆ. ಎಚ್‌ಟಿಸಿ ಒನ್ ಇಲ್ಲವೇ ನೆಕ್ಸಸ್ 6 ನಂತಹ ಫೋನ್‌ಗಳಿಗೆ ಕೇಸ್ ಹುಡುಕುವುದೇ ತಲೆನೋವಿನ ಕೆಲಸವಾಗುತ್ತದೆ.

ಭಾರೀ ಫೋನ್

ಭಾರೀ ಫೋನ್

ಐಫೋನ್ 6 ಪ್ಲಸ್ ಬರುವುದಕ್ಕಿಂತ ಮೊದಲು ಆಂಡ್ರಾಯ್ಡ್‌ಗೆ ಹೋಲಿಕೆ ಮಾಡಲು ಬೇರಾವುದೇ ಡಿವೈಸ್‌ಗಳಿರಲಿಲ್ಲ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಅಥವಾ ಎಚ್‌ಟಿಸಿ ಒನ್ ಎಮ್8 ಐಫೋನ್‌ಗಿಂತ ಹಿರಿದಾಗಿವೆ.

ಸಮೂಹ ಸಂದೇಶ ರವಾನೆ

ಸಮೂಹ ಸಂದೇಶ

ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರ ಸಂಖ್ಯೆ ದೊಡ್ಡದು ಎಂದಾದಲ್ಲಿ ಐಫೋನ್‌ಗಳಲ್ಲಿ ಐಮೆಸೇಜ್ ಕೆಲವೊಂದು ಸಮಸ್ಯೆಗಳನ್ನು ಹೊಂದಿರುತ್ತವೆ. ಸಮೂಹ ಸಂದೇಶ ರವಾನೆ ಐಫೋನ್‌ನಲ್ಲಿ ತುಸು ಕಷ್ಟವೇ. ಆದರೆ ಆಂಡ್ರಾಯ್ಡ್‌ನಲ್ಲಿ ಈ ಸಮಸ್ಯೆಗಳು ಇರುವುದಿಲ್ಲ.

ಫ್ಲ್ಯಾಗ್‌ಶಿಪ್ ಫೋನ್

ಲಾಂಚ್ ದಿನದಂದೇ ಫ್ಲ್ಯಾಗ್‌ಶಿಪ್ ಫೋನ್ ಪಡೆದುಕೊಳ್ಳುವುದು

ಐಫೋನ್ ಅನ್ನು ಲಾಂಚ್ ದಿನಂದು ಕೊಂಡುಕೊಳ್ಳುವುದಕ್ಕಿಂತ ಆಂಡ್ರಾಯ್ಡ್ ಫೋನ್ ಅನ್ನು ಲಾಂಚ್ ದಿನದಂದು ಖರೀದಿಸುವುದು ಅತಿ ಸರಳವಾಗಿದೆ. ಐಫೋನ್ ಖರೀದಿಯ ಸಮಯದಲ್ಲಿ ಸಾಲುಗಟ್ಟುವುದು ಅನಿವಾರ್ಯವಾಗಿದೆ. ಆದರೆ ಆಂಡ್ರಾಯ್ಡ್ ಖರೀದಿಗೆ ಈ ರೀತಿಯ ಸಮಸ್ಯೆಗಳಿಲ್ಲ.

ಮೊಬೈಲ್ ಮಾರುಕಟ್ಟೆ

ಎರಡನೇ ದರ್ಜೆ ಪ್ರಜೆ

ಐಫೋನ್ ಯಾವತ್ತಿಗೂ ಆಂಡ್ರಾಯ್ಡ್ ಡಿವೈಸ್ ಅನ್ನು ಎರಡನೇ ದರ್ಜೆ ಪ್ರಜೆಯಂತೆಯೇ ಕಾಣುತ್ತದೆ. ಆಂಡ್ರಾಯ್ಡ್‌ಗಿಂತ ಮುಂಚೆ ಅಪ್ಲಿಕೇಶನ್‌ಗಳು ಐಓಎಸ್‌ಗಾಗಿ ತಯಾರಾಗುತ್ತಿದ್ದವು. 2015 ರ ವರದಿಯ ಪ್ರಕಾರ ಮೊಬೈಲ್ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ 80% ವನ್ನು ಹೊಂದಿದ್ದರೆ ಐಓಎಸ್ 15% ವನ್ನು ಪಡೆದುಕೊಂಡಿದೆ.

ಲೀಕ್

ಲೀಕ್ ಆಗುವುದು ಸಹಜ

ಪ್ರತೀ ವರ್ಷಕ್ಕೆ ಎರಡು ಫೋನ್‌ಗಳಂತೆ ಆಂಡ್ರಾಯ್ಡ್ ಡಿವೈಸ್ ಲಾಂಚ್ ಮೇಲೆ ಫೋನ್ ತಯಾರಕರು ಕಣ್ಣು ನೆಟ್ಟಿದ್ದಾರೆ. ಹೆಚ್ಚಿನ ಫೋನ್ ಲಾಂಚ್ ಆದಲ್ಲಿ ಅದು ಮಾರುಕಟ್ಟೆಗೆ ಕಾಲಿಡುವ ಮುಂಚೆಯೇ ಅದು ಬಹಿರಂಗಗೊಳ್ಳುತ್ತದೆ. ಇದಕ್ಕಾಗಿ ಈ ವಿಧಾನವನ್ನು ಫೋನ್ ಕಂಪೆನಿಗಳು ಅನುದರಿಸುತ್ತಿವೆ.

ವಾಯ್ಸ್ ಸರ್ಚ್

ವಾಯ್ಸ್ ಸರ್ಚ್ ಬಳಸುವುದು

ಸಿರಿ ಒಂದು ಮೋಜಿನ ಆಟಿಕೆಯಾಗಿದ್ದು ಐಫೋನ್ ಬಳಕೆದಾರರ ಅದನ್ನು ಬಳಸಲು ಹೆಚ್ಚು ಇಷ್ಟಪಡುತ್ತಾರೆ. ಅಲರಾಮ್ ಇರಿಸಲು ಇಲ್ಲವೇ ರಿಮೈಂಡರ್ ಸೇರಿಸಲು ಸಿರಿಯನ್ನು ಆಪಲ್ ಬಳಕೆದಾರರು ಬಳಸುತ್ತಾರೆ. ಆದರೆ ಆಂಡ್ರಾಯ್ಡ್‌ನಲ್ಲಿ ಗೂಗಲ್ ನೌ ಸೂಪರ್ ಪವರ್ ಫುಲ್ ವಾಯ್ಸ್ ಸರ್ಚ್ ಆಗಿದೆ.

ಅಪ್‌ಡೇಟ್‌

ಆಂಡ್ರಾಯ್ಡ್ ಅಪ್‌ಡೇಟ್‌ಗಳಿಗೆ ಕಾಯುವುದು

ಇನ್ನು ಅಪ್‌ಡೇಟ್‌ಗಳು ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಬಹು ಬೇಗನೇ ಕಾರ್ಯೋನ್ಮುಖಗೊಳ್ಳುತ್ತವೆ. ನೀವು ನೆಕ್ಸಸ್ ಡಿವೈಸ್ ಅನ್ನು ಹೊಂದಿದ್ದೀರಿ ಎಂದಾದಲ್ಲಿ ನಿಮಗೆ ನಿಖರವಾದ ಸಮಯದಲ್ಲಿ ಅಪ್‌ಡೇಟ್‌ಗಳು ದೊರೆಯುತ್ತವೆ .

ಸೋಲನ್ನು ಅನುಭವಿಸುವುದಿಲ್ಲ

ಹೊಸ ಐಫೋನೇ

ಇನ್ನು ಯಾವುದೇ ಡಿವೈಸ್ ಆಗಿದ್ದರೂ ಅದರಲ್ಲಿ ಹೊಸತನದ ಹೊಸಬಗೆ ಇದ್ದಲ್ಲಿ ಯಾವ ಡಿವೈಸ್ ಕೂಡ ಬಳಕೆದಾರರಿಗೆ ಪ್ರಿಯವಾಗುತ್ತದೆ. ಮಾರುಕಟ್ಟೆಗೆ ಕಾಲಿಟ್ಟಿರುವ ಆಂಡ್ರಾಯ್ಡ್ ಇಲ್ಲವೇ ಐಫೋನ್ ಆಗಿರಲಿ ನಿಮ್ಮ ಬಳಿ ನೋಟ್ 4 ಇದೆಯೇ? ಐಫೋನ್ 6 ಪ್ಲಸ್ ಖರೀದಿಸಿರುವಿರಾ? ಮುಂತಾದ ಹೊಸ ಉತ್ಪನ್ನಗಳ ಸೂಚನೆಯನ್ನು ಬಳಸುವುದು ಎಂದಿಗೂ ಸೋಲನ್ನು ಅನುಭವಿಸುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Using an Android device comes with a number of quirks and feelings that only Android users can understand. iPhone users lead a boring existence where everything is sliver and has perfectly rounded corners.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot