Home
ಸುದ್ದಿಜಾಲ

Honor X7c 4G ವಿನ್ಯಾಸ, ಬಣ್ಣ ಬಹಿರಂಗ! 108MP ಕ್ಯಾಮೆರಾ ಖಚಿತ.. ಯಾವಾಗ ಲಾಂಚ್?

ಹಾನರ್‌ ಕಂಪನಿಯು ಹೊಸ ಮೊಬೈಲ್‌ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಕಂಪನಿಯು, ತನ್ನ X7C ಸರಣಿಯಲ್ಲಿ ಈ ಫೋನನ್ನು ಪರಿಚಯಿಸುವ ಸಾಧ್ಯತೆಯಿದೆ. ಇದರಲ್ಲಿ ಹಾನರ್ X7c 4G (Honor X7c 4G) ಮತ್ತು ಹಾನರ್ X7c 5G (Honor X7c 5G) ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡುವ ನಿರೀಕ್ಷೆಯಿದೆ. ಈ ಮೊಬೈಲ್ ಈಗಾಗಲೇ ಕೆಲವು ಪ್ರಮಾಣೀಕರಣ ಸೈಟ್‌ಗಳಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಫೋನಿನ ವಿನ್ಯಾಸ, ಬಣ್ಣ ಮತ್ತು ವೈಶಿಷ್ಟ್ಯಗಳು ಸೋರಿಕೆಯಾಗಿವೆ.

ಹೌದು, ಹಾನರ್ X7c 5G (Honor X7c 5G) ಫೋನ್ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಹಿಂದೆ ಕಂಪನಿಯು Honor X7b 4G ಅನ್ನು 2023ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಮತ್ತು ಹಾನರ್ X7c 5G ಮಾದರಿಯನ್ನು ಈ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿದೆ. ಆದರೆ, ಕಂಪನಿಯು ಈವರೆಗೆ ಅಧಿಕೃತ ಮಾಹಿತಿಯನ್ನು ಘೋಷಿಸಿಲ್ಲ. ಆದಾಗ್ಯೂ, ಹಾನರ್ X7c 4G ಫೋನಿನ ವೈಶಿಷ್ಟ್ಯಗಳು ಬಹಿರಂಗವಾಗಿವೆ. ಈ ಕುರಿತ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

Honor X7c 4G ವಿನ್ಯಾಸ, ಬಣ್ಣ ಲೀಕ್! 108MP ಕ್ಯಾಮೆರಾ ಪಕ್ಕಾ.. ಲಾಂಚ್ ಯಾವಾಗ?

ಹಾನರ್ X7c 4G ಫೋನಿನ ವಿನ್ಯಾಸ ಮತ್ತು ಬಣ್ಣಗಳು

ಮುಂಬರುವ ಹಾನರ್ X7c 5G ಫೋನ್‌ ಮೂರು ಬಣ್ಣಗಳ ಆಯ್ಕೆಗಳಲ್ಲಿ ಬಿಡುಗಡೆಯಾಗಬಹುದು. ಇದು ಕಪ್ಪು, ಬಿಳಿ ಮತ್ತು ಹಸಿರು ಬಣ್ಣಗಳನ್ನು ಒಳಗೊಂಡಿರಲಿದೆ. ಟೆಕ್ಸ್ಚರ್ಡ್ ಬ್ಯಾಕ್ ಪ್ಯಾನೆಲ್ ಅನ್ನು ಬಿಳಿ ಮತ್ತು ಹಸಿರು ಬಣ್ಣದಲ್ಲಿ ಕಾಣಬಹುದು. ಈ ಫೋನ್ ಫ್ಲಾಟ್ ಅಂಚುಗಳು ಮತ್ತು ಹಿಂಭಾಗದಲ್ಲಿ ಚದರ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಬರುತ್ತದೆ. ಮುಂಭಾಗದಲ್ಲಿ ಪಂಚ್-ಹೋಲ್ ಡಿಸ್ಪ್ಲೇಯನ್ನು ಕಾಣಬಹುದು.

ಹಾನರ್ X7c 4G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

Honor X7c 4G ಫೋನ್ 6.77 ಇಂಚಿನ ಐಪಿಎಸ್‌ (IPS) ಡಿಸ್ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಇದು 1610×720 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ, 261ppi ಮತ್ತು 20.1:9 ಆಕಾರ ಅನುಪಾತದ ಪಿಕ್ಸೆಲ್ ರೆಸಲ್ಯೂಶನ್ ಅನ್ನು ಒಳಗೊಂಡಿರಲಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಮುಂಬರುವ ಹಾನರ್ X7c 4G ಸ್ಮಾರ್ಟ್‌ಫೋನ್‌ ಅನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 685 ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಮೊಬೈಲ್ 8GB RAM ಮತ್ತು 256GB ಆಂತರಿಕ ಸ್ಟೋರೇಜ್‌ ಆಯ್ಕೆಯನ್ನು ಹೊಂದಿರಲಿದೆ. ಈ ಫೋನ್ ಮ್ಯಾಜಿಕ್ಓಎಸ್ 8.0 ಜೊತೆಗೆ ಆಂಡ್ರಾಯ್ಡ್ 14 ಅನ್ನು ಒಳಗೊಂಡಿರಲಿದೆ.

ಈ ಸುದ್ದಿ ಓದಿದ್ದೀರಾ?: ಸದ್ದಿಲ್ಲದೆ Realme C65s ಲಾಂಚ್: ಬಿಗ್ ಬ್ಯಾಟರಿ, 256GB ಸ್ಟೋರೇಜ್‌.. ಕಡಿಮೆ ಬೆಲೆ!

ಕ್ಯಾಮೆರಾ ಸೆಟಪ್

ಹಾನರ್ X7c 4G ಮೊಬೈಲ್ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್‌ ಅನ್ನು ಹೊಂದಿರುವ ಸಾಧ್ಯತೆಯಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಹಾನರ್ X7c 4G ಅನ್ನು 5,200mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಿದೆ. ಇದು 35W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇದು 166.9 x 76.8 x 8.1 ಮಿಮೀ ಮತ್ತು 191 ಗ್ರಾಂ ತೂಕ ಹೊಂದಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. ಜೊತೆಗೆ, ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿರಲಿದೆ.

ಇತರೆ ವೈಶಿಷ್ಟ್ಯಗಳು

ಮುಂಬರುವ ಹಾನರ್ X7c 4G ಮೊಬೈಲ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಡ್ಯುಯಲ್ ನ್ಯಾನೋ ಸಿಮ್ ಸಪೋರ್ಟ್, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್, ಎನ್‌ಎಫ್‌ಸಿ (NFC), ಬ್ಲೂಟೂತ್ 5.0, ವೈ-ಫೈ 5, ಯುಎಸ್‌ಬಿ ಟೈಪ್ ಸಿ ಮತ್ತು 3.5 ಎಂಎಂ ಆಡಿಯೋ ಜ್ಯಾಕ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

Best Mobiles in India

English summary
Honor X7c 4G design, colors and specifications revealed Ahead of Launch: expected features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+