Subscribe to Gizbot

ಕೈತುಂಬಾ ಆದಾಯಕ್ಕೆ ಟಾಪ್ ಟೆಕ್ ಜಾಬ್ಸ್‌

Written By:

ಟೆಕ್ ಕ್ಷೇತ್ರದಲ್ಲೂ ಹೊಸ ವರ್ಷವೆಂಬುದು ಹೊಸತನದ ಆರಂಭವಾಗಿದೆ. ಹೊಸ ಸ್ಟಾರ್ಟಪ್‌ಗಳ ಆರಂಭ, ಮೊಬೈಲ್ ಉತ್ಪನ್ನ ಅಭಿವೃದ್ಧಿ ಆರ್ಥಿಕ ಅಭಿವೃದ್ಧಿ ಹೀಗೆ ಒಂದೊಂದು ಕ್ಷೇತ್ರದಲ್ಲೂ ಹೊಸತನದ ಹೊಸ ಅಲೆ ಎದ್ದುಗಾಣಲಿದೆ.

ಓದಿರಿ: 2015 ರ ಟಾಪ್ ಸ್ಮಾರ್ಟ್‌ ಅಪ್ಲಿಕೇಶನ್‌ಗಳು

ಟೆಕ್ ಕ್ಷೇತ್ರದಲ್ಲೂ 2016 ಉತ್ತಮ ಉದ್ಯೋಗವನ್ನು ನೀಡುತ್ತಿದ್ದು ಕೈತುಂಬಾ ಸಂಬಳವನ್ನು ನೀಡುತ್ತಿದೆ ಎಂಬುದು ಇಲ್ಲಿರುವ ಧನಾತ್ಮಕ ಅಂಶವಾಗಿದೆ. ಹೊಸ ಉದ್ಯೋಗದೊಂದಿಗೆ ನಿಮ್ಮ ಭವಿಷ್ಯವನ್ನು ರೂಪಿಸುವ ಉತ್ತಮ ಅವಕಾಶವನ್ನು ಟೆಕ್ ಕ್ಷೇತ್ರ ನಿಮಗೆ ಒದಗಿಸುತ್ತಿದ್ದು ನಿಮಗೆ ಸೂಕ್ತವಾದ ಅವಕಾಶವನ್ನು ಇದು ಒದಗಿಸಲಿದೆ.

ಓದಿರಿ:ವಿಶ್ವವನ್ನೇ ಬದಲಿಸುವ ಟಾಪ್‌ ಟೆಕ್ನಾಲಜಿಗಳು

ಬನ್ನಿ ಇಂದಿನ ಲೇಖನದಲ್ಲಿ ನಿಮ್ಮ ಭವಿಷ್ಯಕ್ಕೆ ಭದ್ರ ಅಡಿಪಾಯವನ್ನು ನೀಡಲಿರುವ ಟಾಪ್ ಉದ್ಯೋಗಗಳ ಮಾಹಿತಿಯನ್ನು ನೀಡುತ್ತಿದ್ದು ಇಲ್ಲಿದೆ ಸಂಪೂರ್ಣ ವಿವರ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾರ್ಷಿಕ ಆದಾಯ 30 ರಿಂದ 60 ಲಕ್ಷ

ಡಿಜಿಟಲ್ ಮಾರ್ಕೆಟಿಂಗ್ ಹೆಡ್ಸ್

ಈ ಉದ್ಯೋಗದಲ್ಲಿ ವಾರ್ಷಿಕ ಆದಾಯ 30 ರಿಂದ 60 ಲಕ್ಷಗಳನ್ನು ನೀವು ಗಳಿಸಲಿದ್ದು, ನಿಮ್ಮ ಅನುಭವ ಮತ್ತು ಉದ್ಯೋಗ ಸ್ಥಿತಿಯ ಹಿರಿಯತ್ವ ಇದಕ್ಕೆ ಬೇಕಾಗಿದೆ.

50 ಲಕ್ಷ ಆದಾಯ

ಪ್ರಾಡಕ್ಟ್ ಡೆವಲಪರ್ಸ್

ಐಟಿ ಕಂಪೆನಿಗಳು ಹೆಚ್ಚುವರಿ ಪ್ರಮಾಣದಲ್ಲಿ ಆಫರ್‌ಗಳನ್ನು ನೀಡುತ್ತಿದ್ದು ಸೀನಿಯರ್ ಪೊಸಿಶನ್‌ಗೆ ಇದು 50 ಲಕ್ಷ ಆದಾಯವನ್ನು ನೀಡುತ್ತಿದೆ.

1 ರಿಂದ 10 ಲಕ್ಷ ದಷ್ಟು ಆದಾಯ

ಸೀನಿಯರ್ ಮ್ಯಾನೇಜರ್ಸ್

ಇ ಕಾಮರ್ಸ್ ವಿಭಾಗದಲ್ಲಿ, ಯುವ ನಾಯಕರುಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು ನಿಮಗೆ 1 ರಿಂದ 10 ಲಕ್ಷ ದಷ್ಟು ಆದಾಯವನ್ನು ಗಳಿಸಬಹುದಾಗಿದೆ.

2 ರಿಂದ 10 ಲಕ್ಷ ಆದಾಯ

ಡೇಟಾ ಅನಾಲಿಟಿಕ್ಸ್

ಸಾಮಾನ್ಯ ಪ್ರವೇಶ ಉದ್ಯೋಗಕ್ಕೆ ನಿಮಗೆ 2 ರಿಂದ 10 ಲಕ್ಷ ಆದಾಯವನ್ನು ಈ ಉದ್ಯೋಗ ನೀಡುತ್ತಿದ್ದು ಸೀನಿಯರ್ ಪೊಸಿಶನ್‌ಗೆ ನೀವು 70 ಲಕ್ಷದಿಂದ 1 ಕೋಟಿ ಆದಾಯವನ್ನು ಗಳಿಸಿಕೊಳ್ಳಬಹುದಾಗಿದೆ.

35-40 ಲಕ್ಷ

ಮೊಬೈಲ್ ಪ್ರಾಡಕ್ಟ್ ಡೆವಲಪ್‌ಮೆಂಟ್

2015 ರ ಕೊನೆಯಲ್ಲಿ ಮೊಬೈಲ್ ಬಳಕೆದಾರರು 500 ಮಿಲಿಯನ್ ರೇಖೆಯನ್ನು ದಾಟಿದ್ದಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳಿದ್ದು ಆರಂಭ ಆದಾಯ 12 ರಿಂದ 18 ಲಕ್ಷವಾಗಿದ್ದರೆ, ಹೆಚ್ಚುವರಿ ಮಟ್ಟದಲ್ಲಿ 35-40 ಲಕ್ಷವನ್ನು ಗಳಿಸಿಕೊಳ್ಳಬಹುದಾಗಿದೆ.

ನೆಟವರ್ಕ್ ಇಂಜಿನಿಯರ್

ವೈರ್‌ಲೆಸ್ ನೆಟವರ್ಕ್ ಇಂಜಿನಿಯರ್

ಅತ್ಯುತ್ತಮ ಸಂಬಳವನ್ನು ನೀಡುವ ಕ್ಷೇತ್ರವಾಗಿ ಇದನ್ನು ಪರಿಗಣಿಸಲಾಗುತ್ತಿದ್ದು ವರ್ಷದಿಂದ ವರ್ಷಕ್ಕೆ ಸಂಬಳದ ಮಟ್ಟ ಏರಿಕೆಯಾಗುತ್ತಿದೆ. ಈ ಕ್ಷೇತ್ರದಲ್ಲಿ ನೀವು ಹುಡುಕಾಟ, ವಿನ್ಯಾಸ, ಅಳವಡಿಸುವಿಕೆ ಮೊದಲಾದ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.

ಅನುವಾದ

ಬಿಗ್ ಡೇಟಾ ಇಂಜಿನಿಯರ್

ವ್ಯವಹಾರ ಬಳಕೆದಾರರು ಮತ್ತು ಡೇಟಾ ವಿಜ್ಞಾನಿಗಳ ನಡುವೆ ಇವರು ಮಧ್ಯಸ್ಥರಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಕೆಲವೊಂದು ವಿಷಯಗಳನ್ನು ಅನುವಾದ ಮಾಡುವ ಕೆಲಸವನ್ನು ಇವರು ಮಾಡಬೇಕಾಗುತ್ತದೆ.

ಡೇಟಾ ಸೆಟ್‌

ಡೇಟಾ ಸೈಂಟಿಸ್ಟ್

ಡೇಟಾ ಸೆಟ್‌ಗಳನ್ನು ವಿಶ್ಲೇಷಿಸುವುದು ಮತ್ತು ಇಂಟಿಗ್ರೇಟ್ ಮಾಡುವ ಕೆಲಸವನ್ನು ಇವರು ಮಾಡಬೇಕಾಗುತ್ತದೆ. ಡೇಟಾ ಸಂಘಟಿಸುವುದು ಇವರ ಕೆಲಸವಾಗಿದೆ. ಇವರುಗಳಿಗೆ ಹೆಚ್ಚುವರಿ ತಂತ್ರಜ್ಞಾನ ಪರಿಣತಿ ಮತ್ತು ಅನುಭವದ ಅಗತ್ಯವಿದೆ.

ಡೆವಲಪರ್

ಮೊಬೈಲ್ ಅಪ್ಲಿಕೇಶನ್ಸ್ ಡೆವಲಪರ್

ತಮ್ಮ ಮೊಬೈಲ್ ಅಂಕಿಅಂಶಗಳನ್ನು ಏರಿಸುವ ನಿಟ್ಟಿನಲ್ಲಿ ಬಹಳಷ್ಟು ಕಂಪೆನಿಗಳು ಡೆವಲಪರ್ ಅನ್ನು ಆರಿಸುತ್ತಿದೆ.

ಅಭಿವೃದ್ಧಿಯ ಅಡಿಪಾಯ

ಕಂಟೆಂಟ್ ಸ್ಟ್ರೆಟಜಿಸ್ಟ್

ಹಲವಾರು ಸಂಸ್ಥೆಗಳಿಗೆ ಅಭಿವೃದ್ಧಿಯ ಅಡಿಪಾಯವನ್ನು ಇವರುಗಳು ಹಾಕಿಕೊಡುವುದರಿಂದ ಕಂಟೆಂಟ್ ಸ್ಟ್ರೆಟಜಿಸ್ಟ್ ಬೇಡಿಕೆ ಟೆಕ್ ಕ್ಷೇತ್ರದಲ್ಲಿ ಅಧಿಕವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There will be many more jobs for those in product development in particular owing to the sharp growth in the number of mobile devices in the country, besides a surge in entry-level openings for data analysts.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot