Home
ಸುದ್ದಿಜಾಲ

ಬೆಂಗಳೂರಿನಲ್ಲಿದೆ ವಿದ್ಯುತ್ ಬಳಸದೆಯೇ ನಿರ್ಮಿಸಿದ ಮನೆ

By Shwetha

ನಮ್ಮ ಕನಸಿನ ಮನೆ ಎಂದರೆ ಅದು ನಮ್ಮ ಕನಸಿನ ಸಾಕಾರವಾಗಿರುತ್ತದೆ. ಅಲ್ಲಿ ಬಳಸುವ ಕಲ್ಲು, ಮಣ್ಣು, ಇಟ್ಟಿಗೆ, ಸಿಮೆಂಟುಗಳೆಂಬ ನಿರ್ಜೀವ ವಸ್ತುಗಳು ತುಂಬಿದ್ದರೂ ನಮ್ಮ ಆಸೆಗಳನ್ನು ಅವುಗಳು ಒಳಗೊಂಡಿರುತ್ತವೆ. ಅತಿ ಕಡಿಮೆ ಖರ್ಚಿನಲ್ಲಿ ಸುಂದರವಾದ ಮನೆಯನ್ನು ನಾವು ಹೊಂದಬೇಕು ಎಂಬುದೇ ಪ್ರತಿಯೊಬ್ಬ ಮನುಷ್ಯನ ಆಸೆ. ಆದರೆ ಬೆಂಗಳೂರಿನಂತಹ ನಗರದಲ್ಲಿ ಕನಸಿನ ಮನೆ ಕಟ್ಟುವುದು ಎಂದರೆ ಅದಕ್ಕೆ ಧೈರ್ಯ ಬೇಕೇ ಬೇಕು. ಅಧಿಕ ಬಂಡವಾಳ ಇದ್ದರೆ ಮಾತ್ರ ಬೆಂಗಳೂರು ನಗರಿಯಲ್ಲಿ ಕನಸಿನ ಮನೆ ಕಟ್ಟಲು ಸಾಧ್ಯ ಎಂಬುದು ಅನುಭವಸ್ಥರ ಮಾತು.

ಓದಿರಿ: ಬಿಎಸ್‌ಎನ್‌ಎಲ್‌'ನಿಂದ 1 ರೂಗೆ 1ಜಿಬಿ ಪ್ಲಾನ್ ಪಡೆದುಕೊಳ್ಳುವುದು ಹೇಗೆ?

ಆದರೆ ಇಲ್ಲೊಬ್ಬರು ಸೋಲಾರ್ ಎನರ್ಜಿಯನ್ನು ಬಳಸಿಕೊಂಡು ಅಧಿಕ ಖರ್ಚಿಗೆ ಕಡಿವಾಣ ಹಾಕಿ ತಮ್ಮ ಮನೆಯನ್ನು ಸೊಗಸಾಗಿ ಕಟ್ಟಿಕೊಂಡಿದ್ದಾರೆ. ಜಯನಗರದ ಎಂಟನೇ ಬ್ಲಾಕ್‌ನಲ್ಲಿರುವ ಈ ಮನೆಯ ವಿಶೇಷತೆ ಎಂದರೆ ಬೆಸ್ಕಾಂನ ಸಹಾಯವಿಲ್ಲದೆ ಮನೆಯನ್ನು ಸೋಲಾರ್ ಶಕ್ತಿಯಲ್ಲಿ ನಿರ್ಮಿಸಿರುವುದಾಗಿದೆ. ಈ ಮನೆಯ ಒಡೆಯರಾದ ದಿನೇಶ್ ಪಗಾರಿಯಾ ಇಂತಹ ಅದ್ಭುತ ಉಪಾಯವನ್ನು ಕಂಡುಕೊಂಡು ಜಯನಗರದಂತಹ ಬಡಾವಣೆಯಲ್ಲಿ ಸೋಲಾರ್ ಮನೆಯನ್ನು ಕಟ್ಟಿಕೊಂಡಿದ್ದಾರೆ.

ಸೋಲಾರ್ ಯೂನಿಟ್

ಸೋಲಾರ್ ಯೂನಿಟ್

ಇತ್ತೀಚಿನ ದಿನಗಳಲ್ಲಿ ತಮ್ಮ ಮನೆಯ ಚಾವಣಿಗಳಲ್ಲಿ ಸೋಲಾರ್ ಯೂನಿಟ್‌ಗಳನ್ನು ಜನರು ಅಳವಡಿಸಿಕೊಳ್ಳುತ್ತಿದ್ದಾರೆ. ತಮ್ಮ ಖಾಲಿ ಸ್ಥಳದಲ್ಲಿ ದಿನೇಶ್ ವರ್ಷಗಳ ಹಿಂದೆಯೇ ಸೋಲಾರ್ ಯೂನಿಟ್ ಅನ್ನು ಅಳವಡಿಸಿಕೊಂಡಿದ್ದಾರೆ. ಇದರ ಜೊತೆಗೆ ಫೌಂಡೇಶನ್ ಕೆಲಸ ಮತ್ತು ಸಿವಿಲ್ ಕೆಲಸಗಳನ್ನು ಆರಂಭಿಸಿದ್ದಾರೆ.

ಪ್ರಗತಿ

ಪ್ರಗತಿ

ಕೆಲಸವು ಪ್ರಗತಿಯನ್ನು ಕಾಣುತ್ತಿರುವಂತೆಯೇ, ಈ ಯೂನಿಟ್ ಅನ್ನು ಮೇಲ್ಭಾಗಕ್ಕೆ ದಿನೇಶ್ ರವಾನಿಸಿದ್ದು ಮಾತ್ರವಲ್ಲದೆ ಇನ್ನಷ್ಟು ಎತ್ತರಕ್ಕೆ ಇದನ್ನು ಅಪ್‌ಗ್ರೇಡ್ ಮಾಡಿದರು. ಇದರಿಂದ ರೂಪಾಯಿ 7 ರಿಂದ 8 ಲಕ್ಷದಷ್ಟು ವಿದ್ಯುತ್ ಅನ್ನು ಇವರು ಉಳಿಸಿದ್ದಾರೆ.

ತೆಳುವಾದ ಫಿಲ್ಮ್‌

ತೆಳುವಾದ ಫಿಲ್ಮ್‌

ತೆಳುವಾದ ಫಿಲ್ಮ್‌ಗಳಿಂದ ತಯಾರಾದ ಸೋಲಾರ್ ಪ್ಯಾನಲ್‌ಗಳನ್ನು ದಿನೇಶ್ ಬಳಸಿಕೊಂಡಿದ್ದಾರೆ, ಇದು ಕಡಿಮೆ ಬೆಳಕು ಇರುವಾಗ ಮತ್ತು ಮೇಘದ ವಾತಾವರಣ ಇದ್ದಾಗ ಪವರ್ ಅನ್ನು ಉಂಟುಮಾಡುತ್ತದೆ.

ಸೋಲಾರ್ ಶಕ್ತಿಯಲ್ಲಿನ ನಂಬಿಕೆ

ಸೋಲಾರ್ ಶಕ್ತಿಯಲ್ಲಿನ ನಂಬಿಕೆ

ತಮ್ಮ ಮನೆಯನ್ನು ನಿರ್ಮಿಸುವಾಗಲೇ ದಿನೇಶ್ ಸೋಲಾರ್ ಶಕ್ತಿಯಲ್ಲಿ ಹೆಚ್ಚಿನ ನಂಬಿಕೆಯನ್ನು ಇರಿಸಿಕೊಂಡಿದ್ದರು. ಅಂತೆಯೇ ಮುಂದೆ ಭವಿಷ್ಯದಲ್ಲಿ ಕೂಡ ಬೆಸ್ಕಾಮ್‌ನಿಂದ ಯಾವುದೇ ತೊಂದರೆ ಉಂಟಾಗದ ರೀತಿಯಲ್ಲಿ ಸೋಲಾರ್ ಶಕ್ತಿಯನ್ನು ಬಳಸಿಕೊಂಡಿದ್ದಾರೆ.

ಮಳೆಗಾಲದ ಸಮಯದಲ್ಲಿ

ಮಳೆಗಾಲದ ಸಮಯದಲ್ಲಿ

ಮೋಡದ ವಾತಾವರಣ ಇದ್ದಾಗ ದಿನೇಶ್ ಹೆಚ್ಚು ಕಂಗಾಲಾಗಿದ್ದರು. ಇದಕ್ಕಾಗಿ ಜಪಾನ್‌ನಿಂದ ಸಿಐಎಸ್ ಸೆಲ್‌ಗಳನ್ನು ತಂದು ಸೋಲಾರ್ ಪ್ಯಾನೆಲ್‌ಗಳನ್ನು ಅವರು ನಿರ್ಮಿಸಿಕೊಂಡರು.

4 ಕೆ ವ್ಯಾಟ್‌ನಿಂದ 20 ಕೆವ್ಯಾಟ್ ಪವರ್ ಹೌಸ್

4 ಕೆ ವ್ಯಾಟ್‌ನಿಂದ 20 ಕೆವ್ಯಾಟ್ ಪವರ್ ಹೌಸ್

ಸೋಲಾರ್‌ನಿಂದ ದೊರಕುತ್ತಿದ್ದ ಶಕ್ತಿ ಕೂಡ ಉತ್ತಮ ಎಂದೆನಿಸಿದ್ದು ಬೆಳಗ್ಗಿನ ಜಾವದಲ್ಲಿ ಕೆಲಸ ಆರಂಭವಾಗುತ್ತಿದ್ದಂತೆಯೇ, ಬ್ಯಾಟರಿಗಳು ಗರಿಷ್ಟ ಮಟ್ಟದಲ್ಲಿ ಚಾರ್ಜ್ ಆಗುತ್ತಿದ್ದವು. ಅಂತೂ ಬೆಸ್ಕಾಮ್‌ನ ಸಹಾಯವಿಲ್ಲದೆಯೇ ಸೋಲಾರ್ ಶಕ್ತಿಯಲ್ಲಿ ದಿನೇಶ್ ಸುಂದರ ಮನೆಯನ್ನು ಕಟ್ಟಿ ಮುಗಿಸಿದ್ದಾರೆ.

Best Mobiles in India

English summary
A city-based industrialist has demonstrated that one could complete the construction of a house without even obtaining a temporary connection from the Bangalore Electricity Supply Company (Bescom).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+