ಬಿಎಸ್‌ಎನ್‌ಎಲ್‌'ನಿಂದ 1 ರೂಗೆ 1ಜಿಬಿ ಪ್ಲಾನ್ ಪಡೆದುಕೊಳ್ಳುವುದು ಹೇಗೆ?

By Shwetha
|

ಜಿಯೋದ ಅನಿಯಮಿತ ಡೇಟಾ ಯೋಜನೆಯ ಅನುಸಾರವಾಗಿ ಟೆಲಿಕಾಮ್ ದೈತ್ಯರು ಎಂದೆನಿಸಿಕೊಂಡಿರುವ ಏರ್‌ಟೆಲ್, ವೊಡಾಫೋನ್ ಜಿಯೋದ ಯೋಜನೆಗೆ ತಕ್ಕದುದಾಗಿ ತಮ್ಮ ದಾಳವನ್ನು ಉರುಳಿಸುತ್ತಿದ್ದರೆ, ಸರಕಾರೀ ಆಡಳಿತದಲ್ಲಿರುವ ಕಂಪೆನಿ ಬಿಎಸ್‌ಎನ್‌ಎಲ್ ಕೂಡ ಜಿಯೋಗೆ ಸ್ಪರ್ಧೆಯನ್ನು ನೀಡುವಲ್ಲಿ ಹಿಂದೆ ಬಿದ್ದಿಲ್ಲ.

ಓದಿರಿ: ಬಿಎಸ್‌ಎನ್‌ಎಲ್ ಇಂಟರ್ನೆಟ್ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ?

ಅನಿಯಮಿತ ರಿಲಾಯನ್ಸ್ ಜಿಯೋದ ಡೇಟಾ ಯೋಜನೆಗೆ ಸಮನಾಗಿ ಹೆಚ್ಚಿನ ಟೆಲಿಕಾಮ್ ಆಪರೇಟರ್‌ಗಳು ಬೇರೆ ಬೇರೆ ಆಫರ್‌ಗಳೊಂದಿಗೆ ಬಂದಿವೆ. ಬಿಎಸ್‌ಎನ್‌ಎಲ್‌ನ ಬಿಬಿ 249 ಯೋಜನೆಯು ಅನಿಯಮಿತ ಬ್ರಾಡ್‌ಬ್ಯಾಂಡ್ ಯೋಜನೆಯು 3ಜಿ ಬಳಕೆದಾರರಿಗೆ ರೂ 249 ಕ್ಕೆ ಲಭ್ಯವಾಗುತ್ತಿದೆ.

ಜಿಯೋದ ಯೋಜನೆ

ಜಿಯೋದ ಯೋಜನೆ

ಜಿಯೋದ ಯೋಜನೆಗಳಿಗೆ ಸರಿಸಮಾನಾಗಿ ಬಿಎಸ್‌ಎನ್‌ಎಲ್ ಅಂತಹುದೇ ಪ್ಲಾನ್ ಅನ್ನು ಪ್ರಸ್ತುತಪಡಿಸಿದ್ದು, 'ಅನಿಯಮಿತ ಬಿಬಿ 249' ಎಂಬುದಾಗಿ ಇದನ್ನು ಕರೆಯಲಾಗಿದ್ದು ತನ್ನ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಇದನ್ನು ಪ್ರಸ್ತುತಪಡಿಸಿದೆ.

ಹೊಸ ಡೇಟಾ ಯೋಜನೆ

ಹೊಸ ಡೇಟಾ ಯೋಜನೆ

ಈ ಹೊಸ ಡೇಟಾ ಯೋಜನೆಯನ್ನು ಜನಪ್ರಿಯಗೊಳಿಸಲು ಬಿಎಸ್‌ಎನ್‌ಎಲ್ ಸಪ್ಟೆಂಬರ್ 9 ರಿಂದ ಅಕ್ಟೋಬರ್ 31 ರವರೆಗೆ ಉಚಿತ ಇನ್‌ಸ್ಟಾಲೇಶನ್ ಅನ್ನು ನೀಡುತ್ತಿದೆ. ಬಿಎಸ್‌ಎನ್‌ಎಲ್‌ನ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗೆ ನೀವು ಚಂದಾದಾರರು ಆಗಿಲ್ಲ ಎಂದಾದಲ್ಲಿ, ಅಂತೆಯೇ ಈ ಸೇವೆಗೆ ನೀವು ಸಾಕಷ್ಟು ಹಣ ವ್ಯಯ ಮಾಡುತ್ತಿದ್ದೀರಿ ಎಂದಾದಲ್ಲಿ, ನಿಮಗೆ ರೂ 1 ಕ್ಕೆ 1ಜಿಬಿ ಡೇಟಾವನ್ನು ಪಡೆದುಕೊಳ್ಳುವ ಅವಕಾಶವಿದೆ.

ಅನಿಯಮಿತ ಬಿಬಿ 249

ಅನಿಯಮಿತ ಬಿಬಿ 249

ರಿಲಾಯನ್ಸ್ ಜಿಯೋಗೆ ಹೋಲಿಸಿದಾಗ ರೂ 249 ಯೋಜನೆಗೆ ಚಂದಾದಾರರಾಗುವುದು ಹೆಚ್ಚು ಸರಳವಾಗಿದೆ. ಅನಿಯಮಿತ ಬಿಬಿ 249 ಯೋಜನೆಯನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಿದ್ದೇವೆ.

ಬಿಎಸ್‌ಎನ್‌ಎಲ್ ಕೇಂದ್ರ

ಬಿಎಸ್‌ಎನ್‌ಎಲ್ ಕೇಂದ್ರ

ಬಿಬಿ 249 ಅನ್ನು ಪಡೆದುಕೊಳ್ಳುತ್ತಿರುವ ಹೊಸ ಬಳಕೆದಾರರು ತಮ್ಮ ಹತ್ತಿರದ ಬಿಎಸ್‌ಎನ್‌ಎಲ್ ಕೇಂದ್ರಕ್ಕೆ ಭೇಟಿ ನೀಡಬೇಕು.

ಅಧಿಕೃತ ದಾಖಲೆ

ಅಧಿಕೃತ ದಾಖಲೆ

ಇಲ್ಲಿ ನಿಮ್ಮ ಅಧಿಕೃತ ದಾಖಲೆಗಳನ್ನು ಸಲ್ಲಿಸಬೇಕು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಪ್ರೂಫ್ ಮತ್ತು ಇತ್ತೀಚಿನ ಪಾಸ್‌ಪೋರ್ಟ್ ಫೋಟೋಗಳನ್ನು ಈ ದಾಖಲೆಗಳು ಒಳಗೊಂಡಿರಲಿ. ಯಾವುದೇ ತೊಂದರೆಗಳನ್ನು ನಿವಾರಿಸಿಕೊಳ್ಳಲು ಫೋಟೋಕಾಪಿ ಅಂತೆಯೇ ಮೂಲ ಡಾಕ್ಯುಮೆಂಟ್‌ಗಳನ್ನು ನೀವು ಕೊಂಡೊಯ್ಯಬೇಕು.

ಅಗತ್ಯ ದಾಖಲೆ

ಅಗತ್ಯ ದಾಖಲೆ

ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಮುಂದಿನ 6 ತಿಂಗಳುಗಳಿಗೆ ನೀವು ಆನಂದಿಸಬಹುದಾದ ಡೇಟಾ ಸರ್ವೀಸ್ ಅನ್ನು ರೂ 249 ನೀಡಿ ಖರೀದಿಸಿ. ಇದು ಆಕ್ಟಿವೇಶ್‌ಗೊಳ್ಳಲು 1 ವಾರಗಳ ಸಮಯವನ್ನು ತೆಗೆದುಕೊಳ್ಳುತ್ತದೆ.

ಬಿಬಿ 249 ಯೋಜನೆ ವರ್ಸಸ್ ರಿಲಾಯನ್ಸ್ ಜಿಯೋ

ಬಿಬಿ 249 ಯೋಜನೆ ವರ್ಸಸ್ ರಿಲಾಯನ್ಸ್ ಜಿಯೋ

ಬಿಬಿ 249 ಅನ್ನು ಪಡೆದುಕೊಂಡ ನಂತರ, ನಿಮಗೆ 2MBPS ವರೆಗೆ ಅತಿ ಕಡಿಮೆ ದರದಲ್ಲಿ ವೇಗವನ್ನು ಆನಂದಿಸಬಹುದಾಗಿದೆ. ಜಿಯೋದ ರೂ 50/ಜಿಬಿ ಆಫರ್‌ನಂತೆಯೇ, ಬಿಎಸ್‌ಎನ್‌ಎಲ್‌ನ 249 ಯೋಜನೆಯು ಯಾವುದೇ ವೇಗ ಅಥವಾ ಡೇಟಾ ಕ್ಯಾಪ್ ಅನ್ನು ಹೊಂದಿಲ್ಲ, ಅಂದರೆ 1ಜಿಬಿಯ ಡೇಟಾ ವೇಗವನ್ನು ಬಳಕೆದಾರರು ಆನಂದಿಸಬಹುದಾಗಿದೆ.

ಬಿಬಿ 249 ಯೋಜನೆ

ಬಿಬಿ 249 ಯೋಜನೆ

ಆರು ತಿಂಗಳ ಅನಿಯಮಿತ ಡೇಟಾ ಯೋಜನೆಯನ್ನು ಬಿಎಸ್‌ಎನ್‌ಎಲ್ ಒದಗಿಸುತ್ತಿದ್ದು, ಗ್ರಾಹಕರು ಬಿಬಿಜಿ ಕಾಂಬೊ 499 / ತಿಂಗಳು ಇದಕ್ಕೆ ಮೈಗ್ರೇಟ್ ಮಾಡಿಕೊಳ್ಳಬಹುದಾಗಿದೆ. ಬಿಬಿ 249 ಯೋಜನೆಯು ಅನಿಯಮಿತ ಉಚಿತ ವಾಯ್ಸ್ ಕರೆಗಳನ್ನು ನೀಡುತ್ತಿದ್ದು ಎಲ್ಲಾ ಭಾನುವಾರವೂ ರಾತ್ರಿ 9 ರಿಂದ 7 ರವರೆಗೆ ಇದನ್ನು ಆನಂದಿಸಬಹುದಾಗಿದೆ. ಅಂತರಾಷ್ಟ್ರೀಯ ಕರೆಗಳಂತೆ, ಹೊಸ ಯೋಜನೆಯು ರೂ 1/3 ನಿಮಿಷಗಳದ್ದಾಗಿದ್ದು ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಔಟ್‌ಗೋಯಿಂಗ್ ಕರೆಗಳನ್ನು ಬಳಕೆದಾರರು ಬಳಸಿಕೊಳ್ಳಬಹುದಾಗಿದೆ.

Best Mobiles in India

English summary
In case you still haven't subscribed to the new broadband plan by BSNL, and paying a lump sum amount for your broadband service at the end every month, here's a golden opportunity for you to use 1GB data for just Re 1.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X