ಮಿಸ್ಡ್ ಕಾಲ್ ನೀಡಿ ಏರ್‌ಟೆಲ್‌ನಿಂದ ಉಚಿತ 4ಜಿ ಡೇಟಾ ಪಡೆಯುವುದು ಹೇಗೆ?

By Shwetha
|

ರಿಲಾಯನ್ಸ್ ಜಿಯೋ ಬಳಕೆದಾರರಿಗೆ ನೀಡುತ್ತಿರುವ ಧಾಮಾಕಾ ಆಫರ್‌ಗಳ ಬಗ್ಗೆ ನೀವು ತಿಳಿದಿರುತ್ತೀರಿ ತಾನೇ? ಉಚಿತ ಅನಿಯಮಿತ 4ಜಿ ಡೇಟಾ, ಎಸ್‌ಎಮ್‌ಎಸ್, ವೋಲ್ಟ್ ಕರೆಗಳು ಹೀಗೆ ಭರ್ಜರಿ 90 ದಿನಗಳ ಆಫರ್‌ಗಳನ್ನು ಬಳಕೆದಾರ ಮಹಾಶಯರಿಗೆ ಜಿಯೋ ಆಫರ್ ಮಾಡುವುದರ ಮೂಲಕ ಟೆಲಿಕಾಮ್ ವಲಯದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದೆ.

ಓದಿರಿ: ಬಿಎಸ್‌ಎನ್‌ಎಲ್ ಬಿಬಿ249 ಪ್ಲಾನ್‌ನಲ್ಲಿ ಇಂಟರ್ನೆಟ್ ಸ್ಪೀಡ್ ಹೆಚ್ಚಿಸುವುದು ಹೇಗೆ?

ಈ ಸಂದರ್ಭದಲ್ಲಿ ಇತರ ಟೆಲಿಕಾಮ್ ಕಂಪೆನಿಗಳು ಜಿಯೋದ ಅಲೆಗೆ ತತ್ತರಿಸಿದ್ದಂತೂ ಸುಳ್ಳಲ್ಲ. ಪ್ರಸ್ತುತ ಜಿಯೋಗೆ ಕಠಿಣ ಪೈಪೋಟಿಯನ್ನು ಇತರ ಟೆಲಿಕಾಮ್ ಕಂಪೆನಿಗಳು ನೀಡುತ್ತಿದ್ದರೂ ಮುಂಚೂಣಿಯಲ್ಲಿರುವುದು ಏರ್‌ಟೆಲ್ ಆಗಿದೆ. ಜಿಯೋದ ಯೋಜನೆಗೆ ಸಮನಾಗಿ ಏರ್‌ಟೆಲ್ ಕಂಪೆನಿ ಕೆಲವೊಂದು ಅತ್ಯುತ್ತಮ ಉಚಿತ ಯೋಜನೆಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಕಣಕ್ಕೆ ಇಳಿದಾಗಿದೆ ಇನ್ನೇನಿದ್ದರೂ ಜಯ ನಮಗೆ ಸಿಗಬೇಕು ಎಂಬ ಮಹತ್ತರ ಯೋಚನೆಯಲ್ಲಿ ಕಂಪೆನಿ ತನ್ನ ದಾಳವನ್ನು ಉದುರಿಸಿದೆ. ಬನ್ನಿ ಆ ಹೊಸ ಯೋಜನೆ ಏನು ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ.

ಓದಿರಿ: ಬಿಎಸ್‌ಎನ್‌ಎಲ್ ಇಂಟರ್ನೆಟ್ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ?

3ಜಿ ಸಂಪರ್ಕ

3ಜಿ ಸಂಪರ್ಕ

ಜಿಯೋಗೆ ಈಗ ಕಠಿಣ ಪೈಪೋಟಿಯನ್ನು ನೀಡುತ್ತಿರುವುದು ಏರ್‌ಟೆಲ್ ಕಂಪೆನಿಯಾಗಿದೆ. ತನ್ನ ಬಳಕೆದಾರರಿಗಾಗಿ ಸರ್ವೀಸ್ ಪ್ರೊವೈಡರ್ ಹೆಚ್ಚಿನ ಡೀಲ್‌ಗಳು ಆಫರ್‌ಗಳೊಂದಿಗೆ ಬಂದಿದೆ. ಹೆಚ್ಚಿನ ಬಳಕೆದಾರರು 3ಜಿ ಸಂಪರ್ಕವನ್ನು ಪಡೆದುಕೊಂಡಿದ್ದು ಇದೀಗ 4ಜಿ ಅಪ್‌ಗ್ರೇಡ್ ಮಾಡಿಕೊಳ್ಳುತ್ತಿದ್ದಾರೆ.

ಏರ್‌ಟೆಲ್ ಪ್ರಮೋಶನಲ್ ಆಫರ್

ಏರ್‌ಟೆಲ್ ಪ್ರಮೋಶನಲ್ ಆಫರ್

ಜಿಯೋ ಲಾಂಚ್‌ನೊಂದಿಗೆ, ಏರ್‌ಟೆಲ್ ತನ್ನ 4ಜಿ ಯನ್ನು ಪ್ರಚಾರ ಪಡಿಸಲು 3ಜಿ ಬಳಕೆದಾರರನ್ನು 4ಜಿಯತ್ತ ಸೆಳೆದೊಯ್ಯುವ ಕೆಲಸದಲ್ಲಿದೆ.

1ಜಿಬಿ ಉಚಿತ 4ಜಿ ಡೇಟಾ

1ಜಿಬಿ ಉಚಿತ 4ಜಿ ಡೇಟಾ

ಈ ಆಫರ್‌ನ ನಿಯಗಳನ್ನು ಅನುಸರಿಸುವ ಬಳಕೆದಾರರಿಗೆ ಏರ್‌ಟೆಲ್ 1ಜಿಬಿಯ 4ಜಿ ಡೇಟಾವನ್ನು ನೀಡುತ್ತಿದೆ. ಈ ಉಚಿತ 1ಜಿಬಿ ಡೇಟಾ 28 ದಿನಗಳ ಕಾಲಾವಕಾಶವನ್ನು ಪಡೆದುಕೊಂಡಿದೆ.

ಏರ್‌ಟೆಲ್‌ನಿಂದ ಈ ಆಫರ್ ಪಡೆದುಕೊಳ್ಳುವುದು ಹೇಗೆ

ಏರ್‌ಟೆಲ್‌ನಿಂದ ಈ ಆಫರ್ ಪಡೆದುಕೊಳ್ಳುವುದು ಹೇಗೆ

ಏರ್‌ಟೆಲ್‌ನಿಂದ 1ಜಿಬಿ ಡೇಟಾವನ್ನು ಪಡೆದುಕೊಳ್ಳುವ ಕ್ರಮಗಳು ತುಂಬಾ ಸರಳವಾಗಿದೆ. ನಿಮ್ಮ ಏರ್‌ಟೆಲ್ ಸಂಖ್ಯೆಯಿಂದ ಏರ್‌ಟೆಲ್ ಟಾಲ್ ಫ್ರಿ ಸಂಖ್ಯೆಗೆ ಒಂದು ಮಿಸ್ ಕಾಲ್ ಅನ್ನು ನೀಡಿ. ನಿಮ್ಮ ಏರ್‌ಟೆಲ್ ಫೋನ್ ಸಂಖ್ಯೆಯಿಂದ 52122 ಗೆ ಡಯಲ್ ಮಾಡಿ. ಕರೆಯು ಸ್ವಯಂಚಾಲಿತವಾಗಿ ಡಿಸ್‌ಕನೆಕ್ಟ್ ಆಗುತ್ತದೆ ಮತ್ತು ಎಸ್‌ಎಮ್‌ಎಸ್ ಅನ್ನು ಸ್ವೀಕರಿಸುತ್ತೀರಿ.

ಆಫರ್ ಅನ್ನು ಎಸ್‌ಎಮ್‌ಎಸ್ ದೃಢೀಕರಿಸುತ್ತದೆ

ಆಫರ್ ಅನ್ನು ಎಸ್‌ಎಮ್‌ಎಸ್ ದೃಢೀಕರಿಸುತ್ತದೆ

ಕರೆಯು ಒಮ್ಮೆ ಡಿಸ್‌ಕನೆಕ್ಟ್ ಆದ ನಂತರ, ನಿಮಗೆ ಏರ್‌ಟೆಲ್‌ನಿಂದ ಒಂದು ಎಸ್‌ಎಮ್‌ಎಸ್ ಬರುತ್ತದೆ ಇದರಲ್ಲಿ ನಿಮ್ಮ ಸಂಖ್ಯೆಗೆ 4ಜಿ ಡೇಟಾ ಕ್ರೆಡಿಟ್ ಆಗಿರುವ ಸಂದೇಶ ದೊರೆಯುತ್ತದೆ. #121*2# ಅನ್ನು ಡಯಲ್ ಮಾಡುವ ಮೂಲಕ 4ಜಿ ಡೇಟಾ ಬ್ಯಾಲೆನ್ಸ್ ಅನ್ನು ನಿಮಗೆ ಪರಿಶೀಲಿಸಿಕೊಳ್ಳಬಹುದಾಗಿದೆ.

ಅರ್ಹತೆಗಳು

ಅರ್ಹತೆಗಳು

ಏರ್‌ಟೆಲ್‌ನಿಂದ 1ಜಿಬಿ 4 ಜಿಬಿ ಡೇಟಾವನ್ನು ಪಡೆದುಕೊಳ್ಳಲು ಈ ಆಫರ್ ನಿಮ್ಮದಾಗಿಸಲು ನೀವು ಅರ್ಹರೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. 4ಜಿ ಡೇಟಾ ಪ್ಲಾನ್‌ನೊಂದಿಗೆ ತಮ್ಮ ಸಂಖ್ಯೆಗೆ ರಿಚಾರ್ಜ್ ಮಾಡಿಕೊಳ್ಳದೇ ಇರುವ ಬಳಕೆದಾರರಿಗೆ ಈ ಉಚಿತ ಡೇಟಾ ಆಫರ್ ಲಭ್ಯವಿದೆ. ನೀವು ಯಾವುದೇ ಸಕ್ರಿಯ 4ಜಿ ಡೇಟಾ ಪ್ಲಾನ್ ಅನ್ನು ಹೊಂದಿದ್ದೀರಿ ಎಂದಾದಲ್ಲಿ, ಈ ಆಫರ್ ಅನ್ನು ನಿಮಗೆ ಪಡೆದುಕೊಳ್ಳಲಾಗುವುದಿಲ್ಲ.

Best Mobiles in India

English summary
Though 4G is booming in the country for many reasons, not all mobile internet users have upgraded to 4G. Most users are still using 3G connectivity and they are yet to upgrade to 4G connectivity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X