ಉಚಿತ ಮೊಬೈಲ್ ಅಪ್ಲಿಕೇಶನ್‌ನಿಂದ ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ
ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳ ವಿಷಯದಲ್ಲಿ ಉಚಿತ ಎಂಬ ಪದಕ್ಕೆ ನೀವು ನಿಷೇಧವನ್ನು ಹೇರಲೇಬೇಕು. ಹೌದು ಉಚಿತ ಅಪ್ಲಿಕೇಶನ್‌ಗಳಲ್ಲಿರುವ ಜಾಹೀರಾತುಗಳು ಫೋನ್‌ನ ಬ್ಯಾಟರಿ ಡೌನ್ ಆಗಲು ಕಾರಣವಾಗುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಉಚಿತ ಅಪ್ಲಿಕೇಶನ್‌ಗಳಲ್ಲಿರುವ ಜಾಹೀರಾತು ಫೋನ್ ಬ್ಯಾಟರಿಯನ್ನು ವೇಗವಾಗಿ ನುಂಗಿ ಹಾಕುತ್ತವೆ ಮತ್ತು ಫೋನ್ ಅನ್ನು ನಿಧಾನವಾಗಿ ಚಾಲನೆ ಮಾಡಲು ಕಾರಣವಾಗುತ್ತವೆ ಅದೂ ಅಲ್ಲದೆ ಹೆಚ್ಚಿನ ಡೇಟಾವನ್ನು ಬಳಸುತ್ತದೆ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: ಆಪಲ್ ಕುರಿತಾದ ಟಾಪ್ 10 ವಿಭಿನ್ನ ವಿಶೇಷತೆಗಳು
ಫೋನ್‌ನ ಸಿಪಿಯು ಫೋನ್ ಮೆದುಳು ಆಗಿದೆ. ಉಚಿತ ಅಪ್ಲಿಕೇಶನ್‌ಗಳಲ್ಲಿರುವ ಜಾಹೀರಾತು ಈ ಮೆದುಳು ಶಕ್ತಿಯನ್ನು ತಿಂದು ಹಾಕುತ್ತದೆ ಮತ್ತು ಫೋನ್ ಅನ್ನು ನಿಧಾನಗೊಳಿಸುತ್ತದೆ. ಅಪ್ಲಿಕೇಶನ್‌ನೊಂದಿಗಿರುವ ಜಾಹೀರಾತುಗಳು ಸಿಪಿಯು ಸಮಯದ 48 ಶೇಕಡಾವನ್ನು ಬಳಸುತ್ತದೆ ಅಲ್ಲದೆ 22 ಶೇಕಡಾ ಹೆಚ್ಚು ಮೆಮೊರಿಯನ್ನು ಉಪಯೋಗಿಸುತ್ತವೆ.

ಅಧ್ಯಯನ ನಡೆಸಿದ ತಂಡವು 21 ಟಾಪ್ ಅಪ್ಲಿಕೇಶನ್ ಅನ್ನು ಸಂಶೋಧನೆಗಾಗಿ ಬಳಸಿದ್ದು ಅನಾಲಿಸಿಸ್ ಪರಿಕರವನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್II ಸ್ಮಾರ್ಟ್‌ಫೋನ್‌ಗೆ ಅಳವಡಿಸಿ ಅಳತೆ ಮಾಡಿದೆ.
ಇದನ್ನೂ ಓದಿ: ಸ್ವಂತ ಸಂಸ್ಥೆಯಿಂದ ಪ್ರಪಂಚವನ್ನೇ ಗೆದ್ದ ಜೋಡಿಗಳು
ಅಪ್ಲಿಕೇಶನ್‌ಗಳಲ್ಲಿರುವ ಜಾಹೀರಾತು ಮೊಬೈಲ್‌ನ ಚಾರ್ಜ್ ಅನ್ನು ಹೆಚ್ಚು ಬಳಸುತ್ತಿದ್ದು ಇದು 100 ಶೇಕಡಾಕ್ಕಿಂತಲೂ ಹೆಚ್ಚು ಡೇಟಾವನ್ನು ಬಳಸುತ್ತದೆ ಎಂಬುದು ಸಂಶೋಧನೆಯಿಂದ ದೃಢೀಕೃತವಾಗಿದೆ.


Click it and Unblock the Notifications