ಸ್ವಂತ ಸಂಸ್ಥೆಯಿಂದ ಪ್ರಪಂಚವನ್ನೇ ಗೆದ್ದ ಜೋಡಿಗಳು

Posted By:

ತಮ್ಮ ಕಾಲೇಜು ದಿನಗಳಲ್ಲಿ ಪರಿಚಯವಾಗಿ ಗೆಳೆತವನ್ನು ಆರಂಭಿಸಿ ಬಾಳ ಸಂಗಾತಿಗಳಾದ ಹಲವಾರು ಜೋಡಿಗಳು ಕೈಕಟ್ಟಿ ಕೂರದೇ ತಮ್ಮದೇ ಟೆಕ್ ಸಂಸ್ಥೆಗಳನ್ನು ಆರಂಭಿಸಿದ ಕಥೆ ನಿಮಗೆ ಗೊತ್ತೇ?

ಇದನ್ನೂ ಓದಿ: ಫೇಸ್‌ಬುಕ್ ಬಳಕೆದಾರರೇ ಇಲ್ಲೊಮ್ಮೆ ನೋಟ ಹರಿಸಿ

ಹೌದು ಭಾರತದಲ್ಲಿ ಪ್ರಖ್ಯಾತವಾಗಿರುವ ಟೆಕ್ ಸಂಸ್ಥೆಗಳ ಒಡೆತನವನ್ನು ಹೊಂದಿರುವ ಈ ಜೋಡಿಗಳು ಬೇರೆ ಬೇರೆ ವೃತ್ತಿ ಕ್ಷೇತ್ರದಿಂದ ಬಂದವರು. ಜೋಡಿಯಾದ ನಂತರ ತಮ್ಮ ವೃತ್ತಿಗೆ ತಿಲಾಂಜಲಿಯನ್ನಿಟ್ಟು ತಮ್ಮದೇ ಆದ ಟೆಕ್ ಸಂಸ್ಥೆಗಳನ್ನು ಸ್ಥಾಪಿಸಿ ಯಶಸ್ಸಿನತ್ತ ಮುನ್ನುಗ್ಗುತ್ತಿದ್ದಾರೆ. ಇಂದಿನ ಲೇಖನದಲ್ಲಿ ಈ ಜೋಡಿಗಳ ಪರಿಚಯ ಮತ್ತು ಅವರುಗಳ ಸಂಸ್ಥೆಯ ಗುಟ್ಟನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಇದನ್ನೂ ಓದಿ: ಆಪಲ್ ಕುರಿತಾದ ಟಾಪ್ 10 ವಿಭಿನ್ನ ವಿಶೇಷತೆಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮ್ಯಾಡ್ ಸ್ಟ್ರೀಟ್ ಡೆನ್ ಸಂಸ್ಥೆ
  

ಮ್ಯಾಡ್ ಸ್ಟ್ರೀಟ್ ಡೆನ್ ಸಂಸ್ಥೆ

ಆನಂದ್ ಚಂದ್ರಶೇಖರ್ ಮತ್ತು ಅಶ್ವಿನಿ ಅಶೋಕನ್ 2005 ರಲ್ಲಿ ವಿವಾಹವಾದರು. ಆನಂದ್ ವೃತ್ತಿಯಲ್ಲಿ ನ್ಯೂರೋಸೈಂಟಿಸ್ಸ್ ಮತ್ತು ಅಶ್ವಿನಿ ಇಂಟೆಲ್ ಸಂಸ್ಥೆಯಲ್ಲಿ ಪ್ರೊಡಕ್ಟ್ ಡಿಸೈನರ್ ಆಗಿದ್ದರು. ಮ್ಯಾಡ್ ಸ್ಟ್ರೀಟ್ ಡೆನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಆನ್‌ಲೈನ್ ಪೋರ್ಟಲ್‌ಗಳಿಗೆ ಈ ಸಂಸ್ಥೆ ವಿಶುವಲ್ ಸರ್ಚ್‌ಗೆ ಸಹಕಾರಿಯಾಗಿದೆ.

ವೆಡ್ಮಿಗುಡ್ ಸಂಸ್ಥೆ
  

ವೆಡ್ಮಿಗುಡ್ ಸಂಸ್ಥೆ

ಗುರ್‌ಗಾಂವ್‌ನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿರುವಾಗ ಜೋಡಿಯಾದ ಈ ಜೋಡಿಗಳು 2012 ರಲ್ಲಿ ಮದುವೆಯಾದರು. ವೆಡ್ಮಿಗುಡ್ ಎಂಬ ಸಂಸ್ಥೆ ವಿವಾಹವಾಗುವವರಿಗೆ ಬೇಕಾಗುವ ಎಲ್ಲಾ ಸಹಾಯವನ್ನು ಮಾಡುತ್ತದೆ. ಫೋಟೋಗ್ರಾಫರ್, ಮೇಕಪ್ ಆರ್ಟಿಸ್ಟ್, ಡೆಕೊರೇಶನ್ ಮಾಡುವವರು ಇತ್ಯಾದಿ.

ಸ್ವೀಟ್ಸ್ ಇನ್‌ಬಾಕ್ಸ್ ಸಂಸ್ಥೆ
  

ಸ್ವೀಟ್ಸ್ ಇನ್‌ಬಾಕ್ಸ್ ಸಂಸ್ಥೆ

2011 ರಲ್ಲಿ ಮದುವೆಯಾದ ಈ ಜೋಡಿಗಳು, ಭಾರತೀಯ ಸಿಹಿತಿಂಡಿಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಸಂಸ್ಥೆಯನ್ನು ಹುಟ್ಟುಹಾಕಿದೆ.

ಗಿಗ್‌ಸ್ಟಾರ್ ಸಂಸ್ಥೆ
  

ಗಿಗ್‌ಸ್ಟಾರ್ ಸಂಸ್ಥೆ

ಈ ಜೋಡಿಗಳು ಗಿಗ್‌ಸ್ಟಾರ್ ಎಂಬ ಸಂಸ್ಥೆಯ ಹರಿಕಾರರಾಗಿದ್ದು, ಈ ಕಂಪೆನಿ ಪಾರ್ಟಿ ಪ್ಲಾನಿಂಗ್‌ಗೆ ಮೂಲವಾಗಿದೆ. ಪಾರ್ಟಿ ಸಂಘಟಿಸಲು ಬೇಕಾಗಿರುವ ಎಲ್ಲಾ ಸವಲತ್ತುಗಳನ್ನು ಇದು ಮಾಡಿಕೊಡುತ್ತದೆ.

ಮೊಬಿಫೋಲಿಯೊ ಸಂಸ್ಥೆ
  

ಮೊಬಿಫೋಲಿಯೊ ಸಂಸ್ಥೆ

ಇವರಿಬ್ಬರೂ ಸೇರಿ ಮೊಬಿಫೋಲಿಯೊ ಸಂಸ್ಥೆಯನ್ನು ಆರಂಭಿಸಿದ್ದು, ಮೊಬೈಲ್ ಅಪ್ಲಿಕೇಶನ್‌ಗಳನ್ನು ಇದು ರೂಪಿಸುತ್ತಿದೆ.

ಫೇಕ್ ಆಭರಣ ಸಂಸ್ಥೆ
  

ಫೇಕ್ ಆಭರಣ ಸಂಸ್ಥೆ

2013 ರಲ್ಲಿ ವಿವಾಹವಾದ ಈ ಜೋಡಿಗಳು ಫೇಕ್ ಆಭರಣ ಸಂಸ್ಥೆಯನ್ನು ಆರಂಭಿಸಿದರು.

ಕೂಪನ್‌ಗಳ ಸಂಸ್ಥೆ
  

ಕೂಪನ್‌ಗಳ ಸಂಸ್ಥೆ

2009 ರಲ್ಲಿ ವಿವಾಹವಾದ ಈ ಜೋಡಿಗಳು ಕೂಪನ್‌ಗಳ ಸಂಸ್ಥೆಯನ್ನು ಆರಂಭಿಸಿದರು.

ಯಾಸ್ನಾ ಸಂಸ್ಥೆ
  

ಯಾಸ್ನಾ ಸಂಸ್ಥೆ

ಇವರುಗಳು ಬೆಳ್ಳಿ ಮತ್ತು ಫ್ಯುಶನ್ ಆಭರಣಗಳನ್ನು ತಯಾರಿಸುವ ಯಾಸ್ನಾ ಸಂಸ್ಥೆಯ ರುವಾರಿಗಳಾಗಿದ್ದಾರೆ.

ಜಾಹೀರಾತು ಕಂಪೆನಿ
  

ಜಾಹೀರಾತು ಕಂಪೆನಿ

2011 ರಲ್ಲಿ ವಿವಾಹವಾದ ಈ ಜೋಡಿಗಳು, ಜಾಹೀರಾತು ಕಂಪೆನಿಯನ್ನು ಆರಂಭಿಸಿದರು. ಇವರ ಸಂಸ್ಥೆಯು ಆಂಡ್ರಾಯ್ಡ್, ಐಓಎಸ್ ಮತ್ತು ವಿಂಡೋಸ್‌ಗೆ ಮೊಬೈಲ್ ಅಪ್ಲಿಕೇಶನ್ ಡೆವಲಪ್‌ಮೆಂಟ್ ಸೇವೆಯನ್ನು ಒದಗಿಸುತ್ತಿದೆ.

ಚುಂಬಕ್ ಸಂಸ್ಥೆ
  

ಚುಂಬಕ್ ಸಂಸ್ಥೆ

ಚುಂಬಕ್ ಎಂಬ ಸಂಸ್ಥೆಯ ಹರಿಕಾರರಾದ ಈ ಜೋಡಿಗಳು ತಂತ್ರಜ್ಞಾನ ಉಪಕರಣಗಳು, ಬ್ಯಾಗ್ ಮತ್ತು ವಾಲ್ಲೆಟ್ ಮಾರಾಟವನ್ನು ತಮ್ಮ ಸಂಸ್ಥೆಯಲ್ಲಿ ಮಾಡುತ್ತಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Many couples who met in school or college — not just B-schools — are taking the long and invigorating walk down the aisle of entrepreneurship. They reckon, if we can live together we can work together too — at our own, carefully-nurtured fledglings. So goodbye Job Street, hello startups.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot