Home
ಸುದ್ದಿಜಾಲ

ಕಳೆದುಕೊಂಡ ಮೊಬೈಲ್‌ ಟ್ರ್ಯಾಕ್‌ ಮಾಡುವುದು ಹೇಗೆ

By Suneel

ಗ್ಯಾಜೆಟ್ಸ್‌ಗಳು ಇಂದು ಎಲ್ಲರ ಕೈಯಲ್ಲೂ ಹರಿದಾಡುವ ಒಂದು ಮೂಲಭೂತ ವಸ್ತುವಾಗಿ ಬಳಸಲ್ಪಡುತ್ತಿವೆ. ಅಲ್ರಿ ಯಾಕೆ ಈ ಮೊಬೈಲ್‌ಗಳನ್ನ ಬಳಕೆ ಮಾಡಬೇಕು ಎಂಬ ಸಂಶಯವು ಬರಬಹುದು. ಅಂತಹ ಸಂದರ್ಭದಲ್ಲಿ ನಿಮ್ಮಲ್ಲಿ ನಕರಾತ್ಮಕ ಉತ್ತರಗಳು ಮಾತ್ರ ತಲೆಯೊಳಗಿರುತ್ತವೆ. ಆದರೆ ಮೊಬೈಲ್‌ಗಳು ನಮ್ಮನ್ನು ಸೃಜನಶೀಲರನ್ನಾಗಿ ಮಾಡಲು ಮತ್ತು ಮಾಹಿತಿಯ ಮೂಲಕ ಚಲನಶೀಲರನ್ನಾಗಿ ಮಾಡಲು ಬಳಕೆಮಾಡಬೇಕಾಗಿದೆ.

ಓದಿರಿ: ದೇಶದ ಕಾವಲಿಗೆ ರೇಡಿಯೋ ವೇವ್ಸ್‌ ವೆಪನ್

ಹೌದು, ಇಂದು ಗ್ಯಾಜೆಟ್ಸ್‌ಗಳಿಲ್ಲದೇ ಹಲವರಿಗೆ ತಮ್ಮ ದಿನನಿತ್ಯದ ಮುಖ್ಯ ಕೆಲಸಗಳು ಆಗುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ಹಲವು ವೇಳೆ ನಿಮ್ಮ ಮೊಬೈಲ್‌ ಗಳನ್ನು ಅನಿರೀಕ್ಷಿತವಾಗಿ ಕಳೆದುಕೊಳ್ಳುತ್ತೀರಿ. ನಿಮ್ಮ ಮೊಬೈಲ್‌ನಲ್ಲಿನ ಸಂಪರ್ಕಗಳು, ಮುಖ್ಯ ಮಾಹಿತಿಗಳು ಎಲ್ಲವನ್ನು ಕಳೆದುಕೊಳ್ಳುತ್ತೀರಿ. ಕಳೆದು ಹೋದರೆ ಪರವಾಗಿಲ್ಲ, ಅದರಲ್ಲಿರುವ ಮಾಹಿತಿಗಳು ದುರ್ಬಳಕೆ ಆದರೆ ನಿಮಗೆ ತೊಂದರೆ ಅಲ್ಲವೇ. ಹಾಗಾದರೆ ಅನಿರೀಕ್ಷಿತವಾಗಿ ನೆಡೆಯುವ ಇಂತಹ ಘಟನೆಯಿಂದ ಬಚಾವಾಗಲು ಈಗ ನೀವು ಆಂಡ್ರಾಯ್ಡ್ ಡಿವೈಸ್‌ ಮೆನೇಜರ್‌ ಬಳಸಲೇ ಬೇಕಿದೆ.

ಓದಿರಿ: ದಸರಾ ಸ್ಪೆಶಲ್: ಸ್ನಾಪ್‌ಡೀಲ್ ತರುತ್ತಿದೆ ಅದ್ಭುತ ಡಿಸ್ಕೌಂಟ್ ಆಫರ್ಸ್

ಗಿಜ್‌ಬಾಟ್‌ ನಿಮಗಾಗಿ ಆಂಡ್ರಾಯ್ಡ್ ಡಿವೈಸ್‌ ಮೆನೇಜರ್ ಬಳಸುವ ಮೂಲಕ ಅದರಿಂದ ಆಗುವಂತಹ ಅನುಕೂಲಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಿದೆ.

ಆಂಡ್ರಾಯ್ಡ್ ಡಿವೈಸ್‌ ಮೆನೇಜರ್

ಆಂಡ್ರಾಯ್ಡ್ ಡಿವೈಸ್‌ ಮೆನೇಜರ್

ನೀವು ಕಳೆದು ಕೊಂಡ ಮೊಬೈಲ್‌ ಟ್ರ್ಯಾಕ್‌ ಮಾಡಲು ಐಒಎಸ್‌ ಡಿವೈಸ್‌ಗಳು Find my iPhone ಅಪ್ಲಿಕೇಶನ್‌ ಬಳಸಿ. ಆಂಡ್ರಾಯ್ಡ್‌ ಬಳಕೆದಾರರು ಆಂಡ್ರಾಯ್ಡ್ ಡಿವೈಸ್‌ ಮೆನೇಜರ್ ಬಳಸಿ.

 ಗೂಗಲ್‌ ಸೆಟ್ಟಿಂಗ್ಸ್‌

ಗೂಗಲ್‌ ಸೆಟ್ಟಿಂಗ್ಸ್‌

ADM ಸೆಟ್‌ಮಾಡಲು ಗೂಗಲ್‌ ಸೆಟ್ಟಿಂಗ್ಸ್‌ಗೆ ಹೋಗಿ ಸೆಕ್ಯುರಿಟಿ ಟ್ಯಾಪ್‌ ಮಾಡಿ. ಅಲ್ಲಿ ADM ಇರುತ್ತದೆ. ಅದರಲ್ಲಿ ರಿಮೋಟ್ಲಿ ಲೊಕೇಟ್‌ಡಿವೈಸ್ ಅನ್ನು ಎನೇಬಲ್‌ ಮಾಡಿ. ಹಾಗೂ ರಿಮೋಟ್‌ ಲಾಕ್‌ ಸ್ಕ್ರೀನ್‌ ಅನ್ನು ಅಲೋ ಮಾಡಿ. ನಂತರದಲ್ಲಿ ಈ ಕೆಳಗಿನ ಸಲಹೆಗಳನ್ನು ಅನುಸರಿಸಿ.

ಕಳೆದು ಹೋದ ಫೋನ್‌ ಟ್ರ್ಯಾಕ್‌ ಮಾಡುವುದು ಹೇಗೆ

ಕಳೆದು ಹೋದ ಫೋನ್‌ ಟ್ರ್ಯಾಕ್‌ ಮಾಡುವುದು ಹೇಗೆ

ಕಂಪ್ಯೂಟರ್‌ ಬ್ರೌಸರ್‌ನಲ್ಲಿ ಇಲ್ಲಿ ಹೋಗಿ. ನಿಮ್ಮ ಗೂಗಲ್‌ ಖಾತೆಯಲ್ಲಿ ಲಾಗಿನ್‌ ಆಗಿ ಅಲ್ಲಿ ನಿಮ್ಮ ಮೊಬೈಲ್‌ ಇರುವ ಸ್ಥಳ ಗೂಗಲ್‌ ಮ್ಯಾಪ್‌ನಲ್ಲಿ ಕಾಣುತ್ತದೆ.

 ಲಾಕ್‌ಸ್ಕ್ರೀನ್‌ ಬೈಪಾಸ್‌ ಹೇಗೆ

ಲಾಕ್‌ಸ್ಕ್ರೀನ್‌ ಬೈಪಾಸ್‌ ಹೇಗೆ

ಒಂದು ವೇಳೆ ಯಾವುದೋ ಒಂದು ಸಂದರ್ಭದಲ್ಲಿ ಮೊಬೈಲ್‌ ಕಳೆದು ಕೊಂಡಲ್ಲಿ ಅದನ್ನು ಲಾಕ್‌ ಮಾಡಲು ADM ಮೂಲಕ ಬೈಪಾಸ್‌ ಲಾಕ್‌ ಸ್ಕ್ರೀನ್ ಮಾಡುವುದರ ಜೊತೆಗೆ ಕಸ್ಟಮ್‌ ಮೆನೇಜರ್‌ ಹೊಂದಿಸಿ ಅಥವಾ ಲಾಕ್‌ ಸ್ಕ್ರೀನ್‌ನಲ್ಲಿ ಇತರೆ ಫೋನ್‌ ನಂಬರ್‌ ನೀಡಿ.

ಸೆಟ್‌ ಅಪ್‌ ಲಾಕ್‌ ಸ್ಕ್ರೀನ್‌

ಸೆಟ್‌ ಅಪ್‌ ಲಾಕ್‌ ಸ್ಕ್ರೀನ್‌

ADM ನಲ್ಲಿ ಸೆಟ್‌ ಅಪ್‌ ಲಾಕ್‌ ಸ್ಕ್ರೀನ್‌ ಅಂಡ್‌ ಎರೇಸ್ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಲಾಕ್‌ ಮೇಲೆ ಕ್ಲಿಕ್‌ ಮಾಡಿ ಪಾಸ್‌ವರ್ಡ್‌ ನೀಡಿ. ಇಲ್ಲವಾದಲ್ಲಿ ನಿಮ್ಮ ಮೊಬೈಲ್‌ನಲ್ಲಿಯ ವಯಕ್ತಿಕ ವಿಷಯಗಳನ್ನು ನೀವೆ ಪರಿಚಯಿಸಿದಂತಾಗುತ್ತದೆ.

ನ್ಯೂಲಾಕ್‌ ಸ್ಕ್ರೀನ್

ನ್ಯೂಲಾಕ್‌ ಸ್ಕ್ರೀನ್

ನ್ಯೂಲಾಕ್‌ ಸ್ಕ್ರೀನ್‌ನಲ್ಲಿ ಪಾಸ್‌ವರ್ಡ್‌ ನೀಡಿ. ಮತ್ತೊಮ್ಮೆ ಪಾಸ್‌ವರ್ಡ್‌ ಖಚಿತಪಡಿಸಿ. ನಂತರದಲ್ಲಿ ರಿಕವರಿ ಮೆಸೇಜ್‌ ಮತ್ತು ಫೋನ್‌ ನಂವರ್ ನೀಡಿ

 ಮೊಬೈಲ್‌ ರಿಂಗ್‌ ಮಾಡುವುದು ಹೇಗೆ

ಮೊಬೈಲ್‌ ರಿಂಗ್‌ ಮಾಡುವುದು ಹೇಗೆ

ನಿಮ್ಮ ಮೊಬೈಲ್‌ ಅನ್ನು ADM ಮೂಲಕ ಲಾಕ್‌ ಮಾಡಿದ ನಂತರ ಮೊಬೈಲ್‌ ನೀವು ಇರುವ ಹತ್ತಿರದಲ್ಲಿ ಇರುವ ಬಗ್ಗೆ ಖಚಿತ ಪಡಿಸಲು ಲೋಕೆಶನ್‌ ಆನ್‌ ಆಗಿದ್ದಲ್ಲಿ, ಮತ್ತು ಆನ್‌ಲೈನ್‌ ನಲ್ಲಿ ಇದ್ದಲ್ಲಿ ರಿಂಗ್ ಮೇಲೆ ಕ್ಲಿಕ್‌ ಮಾಡಿ. ಇದು 5 ನಿಮಿಷಗಳವರೆಗೆ ರಿಂಗ್‌ ಆಗುತ್ತದೆ.

ಡಾಟಾ ಎರೇಸ್‌ಮಾಡುವುದು ಹೇಗೆ

ಡಾಟಾ ಎರೇಸ್‌ಮಾಡುವುದು ಹೇಗೆ

ನಿಮ್ಮ ಮೊಬೈಲ್‌ನಲ್ಲಿ ಬ್ಯಾಂಕ್‌ ಹಾಗೂ ಇತರೆ ಮುಖ್ಯ ಮಾಹಿತಿ ಇದ್ದಲ್ಲಿ ಇತರರಿಗೆ ತಿಳಿಯದಂತೆ ಮಾಡಲು ADM ಮೂಲಕ ಲಾಕ್‌ ನಂತರದಲ್ಲಿರುವ ಎರೇಸ್ ಮೇಲೆ ಕ್ಲಿಕ್‌ ಮಾಡಿ. ಇದು ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ಮಾಹಿತಿಗಳನ್ನು ಎರೇಸ್‌ ಮಾಡುತ್ತದೆ.

Best Mobiles in India

English summary
The best thing about owning a mobile device is the mobility it provides; the worst thing is that being mobile raises the chances of you losing your devices in unimaginable ways.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+