ದೇಶದ ಕಾವಲಿಗೆ ರೇಡಿಯೋ ವೇವ್ಸ್‌ ವೆಪನ್‌

By Suneel
|

ದೇಶದ ಅಭಿವೃದ್ದಿ ಮತ್ತು ವಿನಾಶಕಾರಿ ಅಘಾತಗಳನ್ನು ತಪ್ಪಿಸಲು ಇಂದು ಪ್ರತಿಯೊಂದು ದೇಶಗಳು ತಮ್ಮದೇ ಆದ ಟೆಕ್ನಾಲಜಿಗಳನ್ನು ಅಭಿವೃದ್ದಿ ಪಡಿಸುವಲ್ಲಿ ನಿರತವಾಗಿವೆ. ಟೆಕ್‌ ಬೆಳವಣಿಗೆಯಲ್ಲಿ ಡ್ರೋನ್‌ಗಳು ಮಹತ್ತರ ಆವಿಷ್ಕಾರವಾಗಿದೆ. ಇದು ಟೆಕ್‌ ಮಾಹಿತಿಯನ್ನು ಓದುವ ಮತ್ತು ದಿನನಿತ್ಯ ಸುದ್ದಿ ಮಾಧ್ಯಮಗಳನ್ನು ನೋಡುವ ಎಲ್ಲರಿಗೂ ಇಳಿದಿದೆ.

ಓದಿರಿ: ಅಂಧರು ಓದಬಹುದಾದ ಬ್ರೈಲ್‌ ಟ್ಯಾಬ್ಲೆಟ್‌

ಡ್ರೋನ್‌ಗಳನ್ನು ಸಂವಹನ ಮತ್ತು ಗುಡಾಚಾರ ಕಾರ್ಯಾಚರಣೆಗೆ ಬಳಸುವಲ್ಲಿ ಹಲವು ದೇಶಗಳು ಬಳಸಿಕೊಳ್ಳುತ್ತಿವೆ. ಆದರೆ ಈಗ ಡ್ರೋನ್‌ಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅವುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಮಹತ್ತರ ಟೆಕ್ನಾಲಜಿ ಒಂದು ಆವಿಷ್ಕಾರವಾಗಿದೆ. ಇದರ ಹೆಸರು 'ಡೆತ್‌ ರೇ'. ಲಾಸ್‌ ವೆಗಾಸ್‌ನವರು ಇದನ್ನು ಸಂಶೋಧಿಸಿದ್ದು, ಡ್ರೋನ್‌ಗಳ ಸಂವಹನ ಕಾರ್ಯವನ್ನು 'ಡೆತ್‌ ರೇ' ರೇಡಿಯೋ ತರಂಗಗಳ ಮೂಲಕ ಸ್ಥಗಿತಗೊಳಿಸಲಿದೆ. ಗಿಜ್‌ಬಾಟ್‌ ನಿಮಗಾಗಿ ಈ ಟೆಕ್‌ನ ವಿಶೇಷತೆಯನ್ನು ಈ ಲೇಖನದ ಮೂಲಕ ಪರಿಚಯಿಸಲಿದೆ.

 'ಡೆತ್‌ ರೇ' (Death Ray)

'ಡೆತ್‌ ರೇ' (Death Ray)

ಈ ವೆಪನ್‌ ಮಾನವ ರಹಿತ ಚಲಿಸುವ ಡ್ರೋನ್‌ಗಳು ಕಂಡಲ್ಲಿ ರೇಡಿಯೋ ತರಂಗಗಳ ಮುಖಾಂತರ ಅದರ ಸಂವಹನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತದೆ.

"If I can see it, I can kill it''

Liteye Systems ಕಾರ್ಯನಿರ್ವಾಹಕ ಉಪಾಧ್ಯಕ್ಷ, ರಿಕ್ ಸನ್‌ಡಗ್‌ ಲಾಸ್‌ ವೇಗಾಸ್‌ ನಲ್ಲಿ ನೆಡೆದ ಡೆತ್‌ ರೇ ಕುರಿತ ಅಂತರಿಕ್ಷ ವಾಹನ ಎಕ್ಸ್ಪೋದಲ್ಲಿ ಹೇಳಿದ್ದಾರೆ.

 Liteye Systems

Liteye Systems

ಈ ಕಂಪನಿ ಕೊಲಾರಾಡೋ ಆಧಾರತವಾಗಿದ್ದು, ಅಮೇರಿಕ ಮತ್ತು ಕೆನಡಾಗಳಿಗೆ ಡೆತ್‌ ರೇ ವೆಪನ್‌ ಅನ್ನು 2015 ರಿಂದಲೂ ನೀಡುತ್ತಿದೆ. ಡೆತ್‌ ರೇ ವೆಪನ್‌ ಅನ್ನು 2015 ರಲ್ಲಿ ಆವಿಷ್ಕರಿಸಿದ್ದು, ಅಂದಿನಿಂದಲೂ ನೀಡಲಾಗುತ್ತಿದೆ.

 ರಾಷ್ಟ್ರೀಯ ಸುರಕ್ಷತೆಗಾಗಿ ಮಾರಾಟ

ರಾಷ್ಟ್ರೀಯ ಸುರಕ್ಷತೆಗಾಗಿ ಮಾರಾಟ

ವಿಮಾನ ನಿಲ್ದಾಣಗಳು ಮತ್ತು ದೇಶದ ಸುರಕ್ಷತೆಯನ್ನು ಕಾಪಾಡುವ ಪ್ರದೇಶಗಳಿಗಾಗಿ ಡೆತ್‌ ರೇ ವೆಪನ್‌ ಅನ್ನು ಮಾರಾಟ ಮಾಡುವುದಾಗಿ ಸನ್‌ಡಗ್‌ ಹೇಳಿದ್ದಾರೆ.

ಮೂಲಸೌಕರ್ಯ ರಕ್ಷಣೆ

ಮೂಲಸೌಕರ್ಯ ರಕ್ಷಣೆ

ನಿರ್ಣಾಯಕ ಮೂಲಸೌಕರ್ಯ ಹೊಂದಿರುವ ಅಮೇರಿಕದಂತಹ ರಾಷ್ಟ್ರಗಳು ಅವುಗಳನ್ನು ಕಾಪಾಡಿಕೊಳ್ಳಲು, ಬೆಳವಣಿಗೆಗೆ ಅಡೆತಡೆ ಉಂಟುಮಾಡುವುದನ್ನು ತಡೆಗಟ್ಟಲು ಇದನ್ನು ಬಳಸಬಹುದಾಗಿದೆ ಎಂದು ಸನ್‌ಡಗ್‌ ಹೇಳಿದ್ದಾರೆ.

ದೂರದ ಮತ್ತು ನಗರ ಪ್ರದೇಶಗಳ ರಕ್ಷಣೆ

ದೂರದ ಮತ್ತು ನಗರ ಪ್ರದೇಶಗಳ ರಕ್ಷಣೆ

ಈ ಡೆತ್‌ ರೇ ಸಿಸ್ಟಮ್‌ ಅನ್ನು ದೂರದ ಮತ್ತು ನಗರ ಪ್ರದೇಶಗಳನ್ನು ಭಯೋತ್ಪಾದಕ, ಬೇಹುಗಾರಿಕಾ ಮತ್ತು ಅನಪೇಕ್ಷಿತ ಚಟುವಟಿಕೆಗಳಿಂದ ರಕ್ಷಿಸಲು ಬಳಕೆ ಮಾಡಲಾಗುತ್ತದೆ.

 ಡೆತ್‌ ರೇ

ಡೆತ್‌ ರೇ

ಇದು ರಕ್ಷಣೆಗೆ ಸಂಬಂಧಿಸಿದಂತೆ ವಿಶಾಲ ಜಾಲಬಂಧದಲ್ಲಿ ಆಂತರಿಕ ಮತ್ತು ಗಡಿ ಭದ್ರತೆ ರಕ್ಷಣೆ ಮಾಡುವ ಸಾಮರ್ಥ್ಯ ಹೊಂದಿದೆ.

AUDS- Anti Unmanned Aerial Vehicle Defense System

AUDS- Anti Unmanned Aerial Vehicle Defense System

ಇದನ್ನು ಸ್ಕಾಟ್‌ಲ್ಯಾಂಡ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿ, ಇದು ಡ್ರೋನ್‌ಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ ಎನ್ನಲಾಗಿದೆ. ಇದು ರಿಮೋಟ್‌ ನಿಯಂತ್ರಣದೊಂದಿಗೆ ಒಮ್ಮೆ ಅವುಗಳನ್ನು ಫಾಲೋ ಮಾಡಿದರೆ 10-15 ಸೆಕೆಂಡುಗಳಲ್ಲಿ ಸಂವಹನವನ್ನು ಸ್ಥಗಿತಗೊಳಿಸುತ್ತದೆ. ಎನ್ನಲಾಗಿದೆ.

ಕಾರ್ಯಾಚರಣೆ

ಕಾರ್ಯಾಚರಣೆ

ಡೆತ್‌ ರೇ ಡ್ರೊನ್‌ಗಳನ್ನು ನೋಡಿದ ತಕ್ಷಣ ತನ್ನ ರೇಡಿಯೋ ತರಂಗಗಳ ಮೂಲಕ 10-15 ಸೆಕೆಂಡ್‌ಗಳಲ್ಲಿ ಅದರ ಸಂವಹನವನ್ನು ಸ್ಥಗಿತಗೊಳಿಸುತ್ತದೆ. ಇದನ್ನು ಇತರ ದೇಶಗಳ ಬೇಹುಗಾರಿಕಾ ಡ್ರೋನ್‌ಗಳನ್ನು ತನ್ನ ದೇಶದ ರಕ್ಷಣೆಗಾಗಿ ಅದರ ಕಾರ್ಯಾಚರಣೆ ಸ್ಥಗಿತಗೊಳಿಸಲು ಬಳಸಲಾಗುತ್ತದೆ.

Most Read Articles
Best Mobiles in India

English summary
Welcome to Las Vegas where a system capable of taking out drones via radio waves is being shown off. It makes use of high powered radio waves for disabling drones by blocking their communication and switching them off in midair.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more