ಶೀಘ್ರದಲ್ಲೇ ಗೂಗಲ್‌ನಿಂದ ಎರಡು ನೆಕ್ಸಸ್ ಫೋನ್ಸ್ ಮಾರುಕಟ್ಟೆಗೆ

Written By:

ಸರ್ಚ್ ಎಂಜಿನ್ ಗೂಗಲ್ ಈವರೆಗೆ ಮಾಡದೇ ಇರುವ ಅತಿ ಮಹತ್ವದ ಲಾಂಚ್ ಅನ್ನು ಮಾಡಲಿದೆ. ಎರಡು ನೆಕ್ಸಸ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಉದ್ದೇಶವನ್ನು ಗೂಗಲ್ ಹೊಂದಿದ್ದು, ಎಲ್‌ಜಿ ಮತ್ತು ಹುವಾಯಿ ಇದನ್ನು ತಯಾರಿಸಲಿದ್ದಾರೆ.

ಶೀಘ್ರದಲ್ಲೇ ಗೂಗಲ್‌ನಿಂದ ಎರಡು ನೆಕ್ಸಸ್ ಫೋನ್ಸ್ ಮಾರುಕಟ್ಟೆಗೆ

ಸ್ಟಾಕ್ ಆಂಡ್ರಾಯ್ಡ್ ಅನ್ನು ಈ ಡಿವೈಸ್‌ಗಳು ಚಾಲನೆ ಮಾಡಲಿದ್ದು ಗೂಗಲ್ ಇದರ ವಿನ್ಯಾಸ, ಅಭಿವೃದ್ಧಿ, ಮಾರ್ಕೆಟಿಂಗ್ ಮತ್ತು ಬೆಂಬಲವನ್ನು ನಿರ್ವಹಿಸಲಿದೆ. ಓಇಎಮ್ ಇದರ ತಯಾರಿಕಾ ಪ್ರಕ್ರಿಯೆಯ ಕೆಲಸಗಳನ್ನು ಮಾಡಲಿದೆ.

ಓದಿರಿ: ಹಾಲಿವುಡ್‌ನ್ನಾಳಿದ ರೊಬೋಟ್ ಚಿತ್ರಗಳು

ಇನ್ನು ಮಾಹಿತಿಯ ಪ್ರಕಾರ, ಚೀನಾದ ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿ ಹುವಾಯಿ ಪ್ರಥಮ ನೆಕ್ಸಸ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದ್ದು ಇದು 2015 ಸಪ್ಟೆಂಬರ್ ಅಥವಾ ಡಿಸೆಂಬರ್ ಮಧ್ಯಭಾಗದಲ್ಲಿ ನಡೆಯಲಿದೆ.

ಓದಿರಿ: ಸೆಲ್ಫಿಗಳ ಹುಚ್ಚು ಸಾಹಸ ಇದೇ ಏನು?

ಇನ್ನು ವರದಿಯ ಪ್ರಕಾರ, ಹುವಾಯಿ ಬಿಲ್ಟ್ ನೆಕ್ಸಸ್ ಸ್ಮಾರ್ಟ್‌ಫೋನ್‌ಗಳು 5.7 ಇಂಚಿನ ಕ್ವಾಡ್ ಎಚ್‌ಡಿ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್ ಮತ್ತು 3500mAh ಬ್ಯಾಟರಿಯನ್ನು ಪಡೆದುಕೊಂಡಿದೆ. 2015 ರಲ್ಲಿ ಆಂಡ್ರಾಯ್ಡ್ ಎಮ್‌ ಬಿಡುಗಡೆಯೊಂದಿಗೆ ಡಿವೈಸ್ ಬಿಡುಗಡೆಯಾಗುವ ಸಂಭವವಿದೆ. ಇನ್ನು ಚೀನಾದಲ್ಲಿ ಮೊಬೈಲ್ ಅಪ್ಲಿಕೇಶನ್ ಅನ್ನು ತರುವ ಪ್ರಯತ್ನದಲ್ಲಿ ಹುವಾಯಿ ಇದ್ದು ಗೂಗಲ್‌ನೊಂದಿಗೆ ಇದು ಒಪ್ಪಂದವನ್ನೇರ್ಪಡಿಸಿಕೊಂಡಿದೆ.

ಎಲ್‌ಜಿಯ ಮುಂದಿನ ನೆಕ್ಸಸ್, ನೆಕ್ಸಸ್ 5 (2015) ಎಂಬ ಹೆಸರನ್ನು ಪಡೆದುಕೊಂಡಿದ್ದು, ಮೋಟೋರೋಲಾ ನಿರ್ಮಿತ ನೆಕ್ಸಸ್ 6.ಎಸ್‌ಗಿಂತ ಇದು ಕಡಿಮೆ ಬೆಲೆಯಲ್ಲಿ ಬರಲಿದೆ.

English summary
Search engine giant Google is doing something, that has never been done before. Yes, this time Google is planning to launch two Nexus smartphone, which will be manufactured by LG and Huawei.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot